ಶಾರ್ಜಾ: ಮುಂಬೈ ವೇಗಿಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ್ ರಾಯಲ್ಸ್ ಪ್ಲೇ ಆಫ್ ಪ್ರವೇಶಿಸಲು ಗೆಲ್ಲಲೇ ಬೇಕಾದ ಪಂದ್ಯದಲ್ಲಿ ರೋಹಿತ್ ಪಡೆಗೆ ಕೇವಲ 91 ರನ್ಗಳ ಸಾಧಾರಣ ಗುರಿ ನೀಡಿದೆ.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ರಾಜಸ್ಥಾನಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿತು. ಅಲ್ಲದೇ ಪವರ್ ಪ್ಲೇ ಮುಗಿಯುವುದರೊಳಗೆ ಎವಿನ್ ಲೂಯಸ್(24) ಮತ್ತು ಯಶಸ್ವಿ ಜೈಸ್ವಾಲ್(12) ರನ್ನು ಪೆವಿಲಿಯನ್ಗಟ್ಟುವಲ್ಲಿ ಬುಮ್ರಾ ಮತ್ತು ಕೌಲ್ಟರ್ ನೈಲ್ ಯಶಸ್ವಿಯಾದರು.
ಕ್ವಿಂಟನ್ ಡಿಕಾಕ್ ಜಾಗದಲ್ಲಿ ಅವಕಾಶ ಪಡೆದಿದ್ದ ಕಿವೀಸ್ ಆಲ್ರೌಂಡರ್ ಜಿಮ್ಮಿ ನೀಶಮ್ ತಮ್ಮ ಮೊದಲ ಓವರ್ನಲ್ಲೇ ಉತ್ತಮ ಲಯದಲ್ಲಿದ್ದ ರಾಜಸ್ಥಾನ್ ನಾಯಕ ಸಂಜು ಸಾಮ್ಸನ್(3) ಮತ್ತು ಶಿವಂ ದುಬೆ(3) ವಿಕೆಟ್ ಪಡೆದು ರಾಜಸ್ಥಾನಕ್ಕೆ ಮರ್ಮಾಘಾತ ನೀಡಿದರು. ಗ್ಲೇನ್ ಫಿಲಿಫ್ಸ್(4)ರನ್ನು ಕೌಲ್ಟರ್ ಲೈನ್ ಬೌಲ್ಡ್ ಮಾಡುವ ಮೂಲಕ ಕೇವ 10 ಓವರ್ನೊಳಗೆ ರಾಜಸ್ಥಾನದ ಅರ್ಧ ತಂಡ ಪೆವಿಲಿಯನ್ ಸೇರಿಕೊಂಡಿತು.