ಮುಂಬೈ:ಫೈನಲ್ ಪ್ರವೇಶಕ್ಕೆ ಅಗತ್ಯ ಇರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಯಾವುದೇ ತಪ್ಪು ಮಾಡದೇ, ಆರ್ಸಿಬಿ ವಿರುದ್ಧ 4 ವಿಕೆಟ್ಗಳ ಜಯ ದಾಖಲಿಸಿ ಅಂಕ ಪಟ್ಟಿಯ ಅಗ್ರಸ್ಥಾನವನ್ನು ಕಳಿಸಿಕೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿದ ಕೌರ್ ಪಡೆ ಹರಸಾಹಸ ಪಟ್ಟು 21 ಬಾಲ್ ಇರುವಂತೆಯೇ ಪಂದ್ಯವನ್ನು ಗೆದ್ದುಕೊಂಡಿತು.
ಟಾಸ್ ಗೆದ್ದು ಬೌಲಿಂಗ್ ತೆಗೆದುಕೊಂಡ ಕೌರ್ ಆರ್ಸಿಬಿಯನ್ನು ಕಡಿಮೆ ರನ್ಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಆರ್ಸಿಬಿ 20 ಓವರ್ಗೆ 9 ವಿಕೆಟ್ ಕಳೆದುಕೊಂಡು 125 ರನ್ ಗಳಿಸಿತು. ಇದನ್ನು ಬೆನ್ನು ಹತ್ತಿದ ಇಂಡಿಯನ್ಸ್ನ್ನು ಬೆಂಗಳೂರು ಬೌಲರ್ಗಳು ಕಾಡಿದರು. ಆರಂಭಿಕರಾದ ಹೇಲಿ ಮ್ಯಾಥ್ಯೂಸ್ ಮತ್ತು ಯಾಸ್ತಿಕಾ ಭಾಟಿಯಾ 53 ರನ್ನ ಜೊತೆಯಾಟ ಮಾಡಿದರು. 5ನೇ ಓವರ್ ವೇಳೆಗೆ 50 ರನ್ನ ಗಡಿ ಮುಟ್ಟಿದ್ದರು.
ತಂಡದ ಮೊತ್ತ 53 ಆಗಿದ್ದಾಗ ಯಾಸ್ತಿಕಾ ಭಾಟಿಯಾ 30ಕ್ಕೆ ವಿಕೆಟ್ ಒಪ್ಪಿಸಿದರು. ಅವರ ಬೆನ್ನಲ್ಲೆ 24 ರನ್ ಗಳಿಸಿದ್ದ ಹೇಲಿ ಮ್ಯಾಥ್ಯೂಸ್ ಔಟ್ ಆದರು. 3 ಮತ್ತು 4ನೇ ವಿಕೆಟ್ನಲ್ಲಿ ಮುಂಬೈಗೆ ಆಸರೆಯಾಗುತ್ತಿದ್ದ ನ್ಯಾಟ್ ಸಿವರ್-ಬ್ರಂಟ್ ಮತ್ತು ಹರ್ಮನ್‌ಪ್ರೀತ್ ಕೌರ್ ಕ್ರಮವಾಗಿ 13 ಮತ್ತು 2 ರನ್ಗೆ ಔಟ್ ಆದರು. ಇದರಿಂದ ಮುಂಬೈ ಇಂಡಿಯನ್ಸ್ ತಂಡ ಸಂಕಷ್ಟಕ್ಕೆ ಒಳಗಾಯಿತು.
ನಂತರ ಬಂದ ಅಮೆಲಿಯಾ ಕೆರ್ ಮತ್ತು ಪೂಜಾ ವಸ್ತ್ರಾಕರ್ ತಂಡವನ್ನು ಗೆಲುವಿನ ಕಡೆಗೆ ಕೊಂಡೊಯ್ದರು. 16ನೇ ಓವರ್ನಲ್ಲಿ ಕನ್ನಿಕಾ ಅಹುಜಾ ಮುಂಬೈನ ಎರಡು ವಿಕೆಟ್ ಪಡೆದು ಶಾಕ್ ನೀಡಿದರಾದರೂ, ಅಮೆಲಿಯಾ ಕೆರ್ ಬೌಂಡರಿಯ ಮೂಲಕ ವಿಜಯದ ರನ್ ದಾಖಲಿಸಿದರು.