ಮುಂಬೈ, ಮಹಾರಾಷ್ಟ್ರ:ವಿಶ್ವಕಪ್ ಸೇರಿದಂತೆ ಪ್ರಮುಖ ಟೂರ್ನಮೆಂಟ್‌ಗಳಿಗೆ ಒದಗಿಸಲಾದ ಭದ್ರತೆಗಾಗಿ ಮುಂಬೈ ಕ್ರಿಕೆಟ್ ಸಂಸ್ಥೆಯು ನಗರದ ಪೊಲೀಸರಿಗೆ ಇದುವರೆಗೆ 14.82 ಕೋಟಿ ರೂಪಾಯಿಗಳನ್ನು ನೀಡಬೇಕಿದೆ ಎಂದು ಆರ್‌ಟಿಐ ಕಾರ್ಯಕರ್ತ ಅನಿಲ್ ಗಲಗಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಮುಂಬೈ ಕ್ರಿಕೆಟ್ ಅಸೋಸಿಯೇಟನ್ ನಗರದಲ್ಲಿರುವ ಎರಡು ಕ್ರೀಡಾಂಗಣಗಳಲ್ಲಿ ನಡೆದ ವಿವಿಧ ಪಂದ್ಯಗಳಲ್ಲಿ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದಕ್ಕಾಗಿ ಮುಂಬೈ ಪೊಲೀಸರಿಗೆ 14.82 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಅಷ್ಟೇ ಅಲ್ಲ ನಾವು ಕಳುಹಿಸಿದ 35 ಜ್ಞಾಪನೆಗಳನ್ನು ನಿರ್ಲಕ್ಷಿಸುತ್ತಿದ್ದೇವೆ ಎಂದು ಮುಂಬೈ ಪೊಲೀಸರು ಆರ್‌ಟಿಐ ಕಾರ್ಯಕರ್ತ ಅನಿಲ್ ಗಲಗಲಿ ಅವರಿಗೆ ತಿಳಿಸಿದ್ದಾರೆ.
ಆರ್‌ಟಿಐ ಕಾರ್ಯಕರ್ತ ಅನಿಲ್ ಗಲಗಲಿ ಅವರು ಮುಂಬೈ ಪೊಲೀಸರಿಂದ ವಿವಿಧ ಕ್ರಿಕೆಟ್ ಪಂದ್ಯಗಳಿಗೆ ಒದಗಿಸಲಾದ ಭದ್ರತೆ ಮತ್ತು ಅದಕ್ಕೆ ವಿಧಿಸುವ ಇತ್ಯರ್ಥ ಶುಲ್ಕದ ಬಗ್ಗೆ ಮಾಹಿತಿ ಕೇಳಿದ್ದರು. ಮುಂಬೈ ಪೊಲೀಸರು ಕಳೆದ 8 ವರ್ಷಗಳಲ್ಲಿ ಆಡಿದ ಪಂದ್ಯಗಳ ಬಗ್ಗೆ ಅನಿಲ್ ಗಲಗಲಿ ಅವರಿಗೆ ಮಾಹಿತಿ ನೀಡಿದರು. ಈ ಪಂದ್ಯಗಳಲ್ಲಿ ಮಹಿಳಾ ವಿಶ್ವಕಪ್ (2013), ವಿಶ್ವಕಪ್ T20 (2016), ಟೆಸ್ಟ್ ಪಂದ್ಯಗಳು (2016), IPL ಪಂದ್ಯಗಳು (2017 ಮತ್ತು 2018), ಮತ್ತು ಇತರ ODI ಪಂದ್ಯಗಳು ಸೇರಿವೆ.