ಕೋಲ್ಕತ್ತಾ:ಯುಎಇಯಲ್ಲಿ ನಡೆಯಲಿರುವ ಮುಂಬರುವ ಟಿ-20 ವಿಶ್ವಕಪ್ 2021ಕ್ಕೆ ಭಾರತ ತಂಡದ ಮಾರ್ಗದರ್ಶಕರಾಗಿ ಮಾಜಿ ಆಟಗಾರ ಎಂಎಸ್ ಧೋನಿ ಅವರನ್ನು ನೇಮಿಸಿ ಆದೇಶ ನೀಡಿರುವ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ)ದ ನಿರ್ಧಾರವನ್ನು ಟೀಂ ಇಂಡಿಯಾದ ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಶ್ಲಾಘಿಸಿದ್ದಾರೆ.
ಭಾರತ ತಂಡದ ಮಾರ್ಗದರ್ಶಕರಾಗಿ ಆಯ್ಕೆಯಾದ ಧೋನಿಯದ್ದು ವಿಶೇಷ ಪ್ರಕರಣ: ಕಪಿಲ್ ದೇವ್ ಬಣ್ಣನೆ - ಟಿ 20 ವಿಶ್ವಕಪ್ ಮೆಂಟರ್
ಈ ಬಗ್ಗೆ ನಾನು ಸಾಕಷ್ಟು ಸಾರಿ ಹೇಳಿದ್ದೇನೆ. ಆದರೆ, ಇದು ವಿಶೇಷ ಪ್ರಕರಣ. ಕಾರಣ ವಿಶ್ವಕಪ್ ಇದ್ದುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಧೋನಿ ಮೆಂಟರ್ ಆಗಿ ಆಯ್ಕೆ ಮಾಡಿದ್ದು ಒಳ್ಳೆಯ ನಿರ್ಧಾರ ಎಂದು ಕಪಿಲ್ ದೇವ್ ಹೇಳಿದ್ದಾರೆ.
ಟಿ - 20 ವಿಶ್ವಕಪ್ಗಾಗಿ 15 ಸದಸ್ಯರನ್ನೊಳಗೊಂಡ ಟೀಂ ಇಂಡಿಯಾ ಈಗಾಗಲೇ ಪ್ರಕಟಗೊಂಡಿದೆ. ಇನ್ನು ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಪಡೆದ ಧೋನಿ ಅವರನ್ನು ಚುಟುಕು ವಿಶ್ವಕಪ್ನಲ್ಲಿ ತಂಡದ ಮೆಂಟರ್ ಆಗಿ ಘೋಷಣೆ ಮಾಡಲಾಗಿದ್ದು, ಈ ನಿರ್ಧಾರವನ್ನು ಕಪಿಲ್ ದೇವ್ ಸ್ವಾಗತಿಸಿದ್ದಾರೆ.
ತಂಡಕ್ಕೆ ಧೋನಿ ಮತ್ತೆ ಆಗಮಿಸಿದ್ದರ ಬಗ್ಗೆ ಮಾತನಾಡಿರುವ ಕಪಿಲ್, ಕ್ರಿಕೆಟರ್ ಒಬ್ಬ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಕನಿಷ್ಠ 3 ಅಥವಾ 4 ವರ್ಷಗಳ ಬಳಿಕ ಸಾಮಾನ್ಯವಾಗಿ ತಂಡಕ್ಕೆ ಮತ್ತೆ ಕೋಚಿಂಗ್ ಅಥವಾ ಬೆಂಬಲ ಸಿಬ್ಬಂದಿಯಾಗಿ ಸೇರಿಕೊಳ್ಳುತ್ತಾರೆ. ಈ ಬಗ್ಗೆ ನಾನು ಸಾಕಷ್ಟು ಸಾರಿ ಹೇಳಿದ್ದೇನೆ. ಆದರೆ, ಇದು ವಿಶೇಷ ಪ್ರಕರಣ. ವಿಶ್ವಕಪ್ ಇದ್ದುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಕೋಚ್ ರವಿ ಶಾಸ್ತ್ರಿ ಕೂಡ ಕೋವಿಡ್ ಸೋಂಕಿಗೆ ತುತ್ತಾಗಿದ್ದರಿಂದ ಇದೊಂದು ಒಳ್ಳೆಯ ನಿರ್ಧಾರ ಎಂದಿದ್ದಾರೆ.