ಕರ್ನಾಟಕ

karnataka

ETV Bharat / sports

ಐಪಿಎಲ್​​ ರದ್ದಾದ ಬಳಿಕ ಏನ್​ ಮಾಡ್ತಿದ್ದಾರೆ ಧೋನಿ.. ಸಾಕ್ಷಿ ಹಂಚಿಕೊಂಡ್ರು ಈ ವಿಡಿಯೋ! - ರಾಂಚಿ ನಿವಾಸದಲ್ಲಿ ಧೋನಿ

ಐಪಿಎಲ್ ರದ್ದುಗೊಂಡ ಬಳಿಕ ಧೋನಿ ಏನು ಮಾಡ್ತಿದ್ದಾರೆ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದ್ದು, ಅವರ ಪತ್ನಿ ಸಾಕ್ಷಿ ವಿಡಿಯೋವೊಂದನ್ನ ಶೇರ್ ಮಾಡಿದ್ದಾರೆ.

dhoni
dhoni

By

Published : May 21, 2021, 4:01 PM IST

ರಾಂಚಿ:ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​, ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿ ಐಪಿಎಲ್​ ರದ್ದುಗೊಂಡ ಬಳಿಕ ಏನು ಮಾಡ್ತಿದ್ದಾರೆ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಟೂರ್ನಿ ರದ್ದಾದ ಬಳಿಕ ಹೊರಗಡೆ ಕಾಣಿಸಿಕೊಳ್ಳದ ಧೋನಿ ಇದೀಗ ತಮ್ಮ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಜಾರ್ಖಂಡ್​ನ ರಾಂಚಿಯಲ್ಲಿನ ಮನೆಯಲ್ಲಿ ಧೋನಿ ಕಾಲ ಕಳೆಯುತ್ತಿದ್ದು, ಅವರ ಪತ್ನಿ ಸಾಕ್ಷಿ ಸಿಂಗ್​ ಇದೀಗ ಇನ್​​ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ಮನೆಯಲ್ಲಿ ಸಾಕು ನಾಯಿಗಳೊಂದಿಗೆ ಧೋನಿ ಸಮಯ ಕಳೆಯುವುದು ಇದರಲ್ಲಿ ಸೆರೆಯಾಗಿದೆ.

ಶ್ವಾನದೊಂದಿಗೆ ಧೋನಿ

ಇದನ್ನೂ ಓದಿ: ಪ್ರವಾಹದಲ್ಲಿ ಸಿಲುಕಿದ್ದ ನಾಲ್ವರ ರಕ್ಷಣೆ ಮಾಡಿದ ಎಸ್​​ಡಿಆರ್​ಎಫ್ ಪಡೆ.. ವಿಡಿಯೋ

ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್ ಲೀಗ್ ಟೂರ್ನಿ ರದ್ದಾದ ಬಳಿಕ ಎಲ್ಲ ಪ್ಲೇಯರ್ಸ್ ಮನೆಯಲ್ಲಿದ್ದು, ಧೋನಿ ಕೂಡ ಸದ್ಯ ತಮ್ಮ ನಿವಾಸದಲ್ಲಿದ್ದಾರೆ. ಇಷ್ಟು ದಿನ ಅವರು ಹೊರಗಡೆ ಕಾಣಿಸಿಕೊಂಡಿರಲಿಲ್ಲ. ಇದರ ಮಧ್ಯೆ ವಿಡಿಯೋ ಶೇರ್ ಮಾಡಿಕೊಂಡಿರುವ ಕಾರಣ ಅಭಿಮಾನಿಗಳಿಗೆ ಧೋನಿ ದರ್ಶನವಾಗಿದೆ. ವಿಡಿಯೋದಲ್ಲಿ ಧೋನಿ ಎಸೆದ ಚಂಡನ್ನ ಶ್ವಾನವೊಂದು ಬಾಯಲ್ಲಿ ಹಿಡಿದುಕೊಂಡು ಬರುತ್ತಿದೆ.

ಕಳೆದ ಎರಡು ದಿನಗಳ ಹಿಂದೆ ರವೀಂದ್ರ ಜಡೇಜಾ ಕೂಡ ತಮ್ಮ ಫಾರ್ಮ್​ಹೌಸ್​ನಲ್ಲಿ ಕುದುರೆ ಸವಾರಿ ಮಾಡ್ತಿದ್ದ ವಿಡಿಯೋವೊಂದು ವೈರಲ್​ ಆಗಿತ್ತು.

ABOUT THE AUTHOR

...view details