ಕರ್ನಾಟಕ

karnataka

ETV Bharat / sports

ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ವಿಂಬಲ್ಡನ್ ಪಂದ್ಯ ವೀಕ್ಷಿಸಿದ ಮಹೇಂದ್ರ ಸಿಂಗ್​ ಧೋನಿ - ಎಂಎಸ್​ ಧೋನಿಗೆ ಜನ್ಮದಿನದ ಸಂಭ್ರಮ

ಬರ್ತ್‌ಡೇ ಬಾಯ್​ ಮಹೇಂದ್ರ ಸಿಂಗ್​ ಧೋನಿ ಲಂಡನ್​ ಪ್ರವಾಸದಲ್ಲಿದ್ದು, ವಿಂಬಲ್ಡನ್​ ಟೆನಿಸ್​ ಪಂದ್ಯವನ್ನು ಪ್ರೇಕ್ಷಕರ ಜೊತೆಗೂಡಿ ವೀಕ್ಷಿಸಿದ್ದಾರೆ.

ms dhoni watching Wimbledon
ವಿಂಬಲ್ಡನ್​ ಪಂದ್ಯ ವೀಕ್ಷಿಸಿದ ಧೋನಿ

By

Published : Jul 7, 2022, 7:57 AM IST

ಲಂಡನ್​:ಇಂದು 41ನೇ ಜನ್ಮದಿನದ ಸಂಭ್ರಮದಲ್ಲಿರುವ ಭಾರತದ ಮಾಜಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಲಂಡನ್​ ಪ್ರವಾಸದಲ್ಲಿದ್ದಾರೆ. ಕುಟುಂಬದೊಂದಿಗೆ ವಿದೇಶಕ್ಕೆ ಭೇಟಿ ನೀಡಿರುವ ಅವರು ವಿಂಬಲ್ಡನ್​ ವೀಕ್ಷಕರ ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಟೆನಿಸ್​ ದಿಗ್ಗಜ ರಾಫೆಲ್​ ನಡಾಲ್ ಮತ್ತು ಟೇಲರ್ ಫ್ರಿಟ್ಜ್​ ನಡುವೆ ನಿನ್ನೆ ನಡೆದ ಪುರುಷರ ಸಿಂಗಲ್ಸ್​ ಕ್ವಾರ್ಟರ್​ ಫೈನಲ್​ ಪಂದ್ಯವನ್ನು ಧೋನಿ ಆನಂದಿಸಿದರು.

ಎಂ.ಎಸ್.ಧೋನಿ ಪಂದ್ಯ ನೋಡುತ್ತಿರುವ ಫೋಟೋವನ್ನು ವಿಂಬಲ್ಡನ್​ ಅಧಿಕೃತ ಟ್ವಿಟ್ಟರ್​ ಖಾತೆ ಹಂಚಿಕೊಂಡಿದೆ. "ಭಾರತ ಕ್ರಿಕೆಟ್​ ಐಕಾನ್​ ವಿಂಬಲ್ಡನ್​ ಟೆನಿಸ್​ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ" ಎಂದು ಬರೆದುಕೊಂಡಿದೆ. ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲೂ ಕೂಡ ಮಹಿ ಚಿತ್ರವನ್ನು ಟ್ವೀಟ್​ ಮಾಡಲಾಗಿದ್ದು, "ಜನ್ಮದಿನದ ಸಂಭ್ರಮದಲ್ಲಿರುವ ಥಾಲಾ ವಿಂಬಲ್ಡನ್​ನಲ್ಲಿದ್ದಾರೆ" ಎಂದು ಕ್ಯಾಪ್ಷನ್​ ನೀಡಿದೆ.

ಧೋನಿ ಬೂದು ಬಣ್ಣದ ಬ್ಲೇಜರ್ ಮತ್ತು ಬಿಳಿ ಶರ್ಟ್‌ ಧರಿಸಿ, ಪ್ರೇಕ್ಷಕರ ಸ್ಟ್ಯಾಂಡ್​ನಲ್ಲಿ ಕುಳಿತು ರಾಫೆಲ್​ ಆಟವನ್ನು ಕಣ್ತುಂಬಿಕೊಂಡಿದ್ದಾರೆ. ಭಾರತದ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಕೂಡ ಪ್ರೇಕ್ಷಕರ ಜೊತೆಗೂಡಿ ಪಂದ್ಯವನ್ನು ವೀಕ್ಷಿಸಿದರು.

ಇದನ್ನೂ ಓದಿ:ನಿವೃತ್ತಿಯ ಕೊನೆ ಪಂದ್ಯದಲ್ಲಿ ಸಾನಿಯಾಗೆ ಸೋಲು; ವಿಂಬಲ್ಡನ್​ ಹೋರಾಟ ಅಂತ್ಯ

ABOUT THE AUTHOR

...view details