ಕರ್ನಾಟಕ

karnataka

ETV Bharat / sports

ಚೆಪಾಕ್​ ಮೈದಾನದಲ್ಲಿ ತಲೈವಾಗೆ ಭರ್ಜರಿ ಸ್ವಾಗತ.. ಕಿವಿಗಡಚಿಕ್ಕಿದ ಧೋನಿ ಹರ್ಷೋದ್ಘಾರ - ಐಪಿಎಲ್​ ಮಹಾಸಂಗ್ರಾಮ

ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿ ಅಭ್ಯಾಸಕ್ಕೆ ಮೈದಾನಕ್ಕಿಳಿದಾಗ ಅಭಿಮಾನಿಗಳ ಹರ್ಷೋದ್ಘಾರ ಮುಗಿಲುಮುಟ್ಟಿತ್ತು. ಇದರ ವಿಡಿಯೋವನ್ನು ಸಿಎಸ್​ಕೆ ಟ್ವಿಟರ್​ನಲ್ಲಿ ಹಂಚಿಕೊಂಡಿದೆ.

ಚೆಪಾಕ್​ ಮೈದಾನದಲ್ಲಿ ತಲೈವಾಗೆ ಭರ್ಜರಿ ಸ್ವಾಗತ
ಚೆಪಾಕ್​ ಮೈದಾನದಲ್ಲಿ ತಲೈವಾಗೆ ಭರ್ಜರಿ ಸ್ವಾಗತ

By

Published : Mar 28, 2023, 2:19 PM IST

ಚೆನ್ನೈ(ತಮಿಳುನಾಡು):ಭಾರತ ಕ್ರಿಕೆಟ್​ನಲ್ಲಿ ಮಹೇಂದ್ರ ಸಿಂಗ್​ ಧೋನಿ ಹೆಸರು ಮೊದಲ ಪಂಕ್ತಿಯಲ್ಲಿ ಕಾಣುತ್ತದೆ. ನಾಯಕನಾಗಿ ಧೋನಿ ಮಾಡಿದ ಸಾಧನೆ ಈವರೆಗಿನ ಯಾವೊಬ್ಬ ನಾಯಕನೂ ಸರಿಗಟ್ಟಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್​ ಮಾತ್ರವಲ್ಲದೇ, ಐಪಿಎಲ್​ನಲ್ಲೂ ತಮ್ಮ ಛಾಪು ಮೂಡಿಸಿರುವ ಧೋನಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಪ್ರಮುಖ ಆಟಗಾರ. ಐಪಿಎಲ್​ನಿಂದಲೂ ನಿವೃತ್ತಿ ಅಂಚಿನಲ್ಲಿರುವ ಆಟಗಾರನ ಕ್ರೇಜ್​ ಮಾತ್ರ ಕಡಿಮೆಯಾಗಿಲ್ಲ ಎಂಬುದಕ್ಕೆ ನಿನ್ನೆ ಚೆಪಾಕ್​ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಹರ್ಷೋದ್ಘಾರವೇ ಕಾರಣ.

ಇನ್ನು 4 ದಿನದಲ್ಲಿ ಐಪಿಎಲ್​ ಮಹಾಸಂಗ್ರಾಮ ಆರಂಭವಾಗಲಿದ್ದು, ಇದಕ್ಕೂ ಮೊದಲು ಎಲ್ಲ ತಂಡಗಳು ತಮ್ಮ ತವರು ಮೈದಾನದಲ್ಲಿ ಭರ್ಜರಿ ಅಭ್ಯಾಸದಲ್ಲಿ ನಿರತವಾಗಿವೆ. ಚೆನ್ನೈ ತಂಡವೂ ಕೂಡ ಧೋನಿ ನೇತೃತ್ವದಲ್ಲಿ ಕಣಕ್ಕಿಳಿಯಲಿದೆ. ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ತಂಡ ತಾಲೀಮು ನಡೆಸುತ್ತಿದೆ. ಸೋಮವಾರ ಅಭ್ಯಾಸಕ್ಕೆಂದು ಮೈದಾನಕ್ಕಿಳಿದ ನಾಯಕ ಮಹೇಂದ್ರ ಸಿಂಗ್​ ಧೋನಿಗೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದರು. ಕ್ರೀಡಾಂಗಣ ತುಂಬೆಲ್ಲಾ ಕಿವಿಗಡಚಿಕ್ಕುವಂತೆ ಧೋನಿ ಧೋನಿ ಎಂದು ಕೂಗಿದರು.

ವಿಡಿಯೋ ಭರ್ಜರಿ ವೈರಲ್​:ಇದರ ವಿಡಿಯೋವನ್ನು ಚೆನ್ನೈ ಸೂಪರ್​ ಕಿಂಗ್ಸ್​ ತಂಡ ತನ್ನ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ. ದೊಡ್ಡ ಕರತಾಡನ, ಹರ್ಷೋದ್ಘಾರ ಅಭಿಮಾನಿಗಳ ತಲೈವಾಗೆ ಸಿಕ್ಕಿತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೈರಲ್​ ಆಗುತ್ತಿದೆ. ಮಾಜಿ ಚಾಂಪಿಯನ್​ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಧೋನಿ ಮುನ್ನಡೆಸಲಿದ್ದಾರೆ. ಕಳೆದ ಋತುವಿನ ಐಪಿಎಲ್​ನಲ್ಲಿ ಧೋನಿ ಮುಂದಾಳತ್ವದ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಪ್ರದರ್ಶನ ನೀಡದೇ ಒಂಬತ್ತನೇ ಸ್ಥಾನ ಗಳಿಸಿತ್ತು.

ಪಂದ್ಯಾವಳಿಯಲ್ಲಿ ನಾಲ್ಕು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. 10 ಸೋಲುಗಳನ್ನು ಕಾಣುವ ಮೂಲಕ ತಂಡ ಕಳಪೆ ಆಟವಾಡಿತ್ತು. ಆಲ್​ರೌಂಡರ್​ ರವೀಂದ್ರ ಜಡೇಜಾ ಅವರಿಗೆ ತಂಡದ ನಾಯಕತ್ವವನ್ನು ವಹಿಸಲಾಗಿತ್ತು. ಜಡೇಜಾ ನಾಯಕನಲ್ಲದೇ, ವೈಯಕ್ತಿಕ ಪ್ರದರ್ಶನದಲ್ಲೂ ಯಶ ಕಾಣದ ಹಿನ್ನೆಲೆಯಲ್ಲಿ ಕ್ಯಾಪ್ಟನ್​ ಹುದ್ದೆಯನ್ನು ಟೂರ್ನಿಯ ಅರ್ಧದಲ್ಲೇ ತೊರೆದಿದ್ದರು. ಬಳಿಕ ಧೋನಿ ಅವರನ್ನೇ ನಾಯಕರನ್ನಾಗಿ ಮರುನೇಮಕ ಮಾಡಲಾಗಿತ್ತು.

ಗುಜರಾತ್​ ಎದುರು ಮೊದಲ ಸೆಣಸು:ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಾರ್ಚ್​ 31 ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಧೋನಿ ಸಾರಥ್ಯದ ಚೆನ್ನೈ ತಂಡ ಹಾರ್ದಿಕ್​ ಪಾಂಡ್ಯ ನೇತೃತ್ವದ ಹಾಲಿ ಚಾಂಪಿಯನ್​ ಗುಜರಾತ್ ಟೈಟಾನ್ಸ್ ಅನ್ನು ಎದುರಿಸಲಿದೆ. ಪಾಂಡ್ಯ ಭಾರತ ಕ್ರಿಕೆಟ್​ನ ಟಿ20 ತಂಡದ ನಾಯಕರಾಗಿದ್ದು, ಮಾಜಿ ನಾಯಕನ ಸವಾಲನ್ನು ಎದುರಿಸಲಿದ್ದಾರೆ.

ಈ ಋತುವಿನಲ್ಲಿ ಸಿಎಸ್​ಕೆ ಇಂಗ್ಲೆಂಡ್​ನ ಆಲ್​ರೌಂಡರ್​ ಬೆನ್​ಸ್ಟೋಕ್ಸ್​ ಅವರನ್ನು 16.25 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ನಾಲ್ಕು ಬಾರಿಯ ಚಾಂಪಿಯನ್​ ತಂಡ ಈ ಬಾರಿ ಧೋನಿ, ರವೀಂದ್ರ ಜಡೇಜಾ, ಕೈಲ್​ ಜೇಮಿಸನ್​, ಮಹೇಶ್​ ತೀಕ್ಷಣ, ಋತುರಾಜ್​ ಗಾಯಕ್ವಾಡ್​ ಸೇರಿದಂತೆ ಪ್ರಮುಖ ಆಟಗಾರರನ್ನು ಹೊಂದಿದೆ.

ಓದಿ:IPL 2023: ಧೋನಿಯೇ ಮಾಡಿರುವ ನಿವೃತ್ತಿ ಪ್ಲಾನ್ ಇದು, ಚೆಪಾಕ್ ಸ್ಟೇಡಿಯಂನಲ್ಲಿ ತಯಾರಿ ಹೇಗಿದೆ ಗೊತ್ತಾ?

ABOUT THE AUTHOR

...view details