ರಾಂಚಿ(ಜಾರ್ಖಂಡ್):ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಶ್ವಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇಲ್ಲೊಬ್ಬ ಅಭಿಮಾನಿ ಬರೋಬ್ಬರಿ 1,436 ಕಿ.ಮೀ. ದೂರವನ್ನು ನಡೆದುಕೊಂಡೇ ಕ್ರಮಿಸಿ ಧೋನಿಯನ್ನು ಕಾಣಲು ರಾಂಚಿಗೆ ಬಂದಿದ್ದಾನೆ. ಇದನ್ನು ಕಂಡು ಸ್ವತಃ ಧೋನಿಯೇ ನಿಬ್ಬೆರಗಾಗಿದ್ದಾರೆ.
ಹರಿಯಾಣದ ನಿವಾಸಿ ಅಜಯ್ ಗಿಲ್ ಎಂಬುವವರು ಮಹೇಂದ್ರ ಸಿಂಗ್ ಧೋನಿಯ ಕಟ್ಟಾಭಿಮಾನಿ. ಧೋನಿಯನ್ನು ನೋಡಲೇಬೇಕು ಎಂಬ ಕಾರಣಕ್ಕಾಗಿ ಹರಿಯಾಣದಿಂದ ರಾಂಚಿಗೆ ನಡೆದುಕೊಂಡೇ ಬಂದಿದ್ದಾರೆ. ಫಾರ್ಮ್ಹೌಸ್ಗೆ ಬಂದ ಅಭಿಮಾನಿಯನ್ನು ಧೋನಿ ಆತ್ಮೀಯವಾಗಿ ಬರಮಾಡಿಕೊಂಡು ಪ್ರೀತಿಯಿಂದ ಆಲಂಗಿಸಿಕೊಂಡಿದ್ದಾರೆ. ಅಲ್ಲದೇ, ಅಭಿಮಾನಿ ಗಿಲ್ ಜೊತೆ ಫೋಟೋಗೆ ಫೋಸ್ ನೀಡಿದರು.