ಶಿಮ್ಲಾ: ಮೂರು ದಿನ ಶಿಮ್ಲಾ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜುಬ್ಬಲ್‌ನ ರತ್ನಡಿ ಪಂಚಾಯಿತಿ ತಲುಪಿದ್ದಾರೆ. ಧೋನಿ ರತ್ನಾಡಿಯಲ್ಲಿನ ಮೀನಾ ಬಾಗ್ ಹೋಂಸ್ಟೇನಲ್ಲಿ ತಂಗಲಿದ್ದಾರೆ.
ವಿಶೇಷ ಎಂದರೆ, ಧೋನಿ ಶಿಮ್ಲಾದ ದೊಡ್ಡ ಪಂಚತಾರಾ ಹೋಟೆಲ್‌ನಲ್ಲಿ ಉಳಿದುಕೊಳ್ಳುವ ಬದಲು ಹೋಂಸ್ಟೇನಲ್ಲಿ ಸಮಯ ಕಳೆಯುತ್ತಿದ್ದಾರೆ. ಇದಕ್ಕೂ ಮೊದಲು ಧೋನಿ ಮೆಹ್ಲಿಯ ಹೋಂ ಸ್ಟೇ ಮತ್ತು ನಂತರ ಶಿಮ್ಲಾ ನಗರದ ಕನ್ಲಾಗ್ನಲ್ಲಿ ತಂಗಿದ್ದರು. ಸಾಕಷ್ಟು ಅಭಿಮಾನಿಗಳು ಮಾಹಿಯನ್ನು ಕಣ್ಣು ತುಂಬಿಕೊಳ್ಳಲು ಮುಗಿ ಬಿದ್ದಿದ್ದರು.