ರಾಂಚಿ (ಜಾರ್ಖಂಡ್): ಐಪಿಎಲ್ ಮುಂದೂಡಲ್ಪಟ್ಟಿದ್ದರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ರಾಂಚಿಯಲ್ಲಿರುವ ತಮ್ಮ ತೋಟದ ಮನೆಗೆ ತೆರಳಿದ್ದಾರೆ. ಮಗಳು ಜೀವಾ ಹಾಗೂ ಪತ್ನಿ ಸಾಕ್ಷಿ ಸಿಂಗ್ ಜೊತೆಗೆ ರಾಂಚಿಯ ತೋಟಕ್ಕೆ ಬಂದಿರುವ ಬಂದಿರುವ ಧೋನಿ ಸಾಕುಪ್ರಾಣಿಗಳೊಂದಿಗೆ ತಮ್ಮ ಸಮಯ ಕಳೆಯುತ್ತಿದ್ದಾರೆ.
ಕ್ರಿಕೆಟ್ ಆಡುವುದು ಬಿಟ್ಟು ಧೋನಿ ಸಾಹೇಬರು ಏನು ಮಾಡುತ್ತಿದ್ದಾರೆ ನೋಡಿ!! - ಎಂಎಸ್ ಧೋನಿ ಮಗಳ ಸುದ್ದಿಗಳು
ಕೋವಿಡ್ನಿಂದ ಈ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಮುಂದೂಡಲ್ಪಟ್ಟಿದ್ದರಿಂದ ಹಲವು ಕ್ರೀಡಾಪಟುಗಳು ತಮ್ಮ ತಮ್ಮ ಸ್ನೇಹಿತರು, ಕುಟುಂಬದವರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇದಕ್ಕೆ ಭಾರತದ ಮಾಜಿ ನಾಯಕ ಎಂ.ಎಸ್. ಧೋನಿ ಕೂಡ ಹೊರತಾಗಿಲ್ಲ.
MS Dhoni Pampers His Horse, Wife Sakshi Singh Shares Video
ತೋಟದಲ್ಲಿರುವ ತಮ್ಮ ನೆಚ್ಚಿನ ಕುದುರೆಯೊಂದಿಗೆ ಧೋನಿ ಕಾಲ ಕಳೆಯುತ್ತಿದ್ದು ಪತ್ನಿ ಸಾಕ್ಷಿ ಸಿಂಗ್ ಧೋನಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪ್ರಾಣಿ ಪ್ರಿಯ ಧೋನಿ ತಮ್ಮ ಕುದುರೆಗೆ ಮಸಾಜ್ ಮಾಡುತ್ತಾ ಫೋಟೋಗೆ ಪೋಸ್ ನೀಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಸಾಹೇಬರು ಕ್ರಿಕೆಟ್ ಆಡದೇ ತೋಟದ ಮನೆಯಲ್ಲಿ ಕುದುರೆಗೆ ಏನು ಮೋಡಿ ಮಾಡುತ್ತಿದ್ದಾರೆ ನೋಡಿ ಎಂದು ಸಾಕ್ಷಿ ಸಿಂಗ್ ಆ ಫೋಟೋಗಳಿಗೆ ಕ್ಯಾಪ್ಶನ್ ಬರೆದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ಶೇರ್ ಮಾಡಿಕೊಂಡಿದ್ದಾರೆ.