ಕರ್ನಾಟಕ

karnataka

ETV Bharat / sports

ಸಿನಿಮಾ ರಂಗದಲ್ಲಿ ಇನ್ನು ಧೋನಿ ಎಂಟರ್​ಟೈನ್​ಮೆಂಟ್ - ಧೋನಿ ಪ್ರೊಡಕ್ಷನ್ ಹೌಸ್​ನಲ್ಲಿ ದಕ್ಷಿಣ ಭಾರತದ ಸಿನಿಮಾಗಳು

'ಧೋನಿ ಎಂಟರ್​ಟೈನ್​ಮೆಂಟ್' ಎಂಬ ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನು ಖ್ಯಾತ ಕ್ರಿಕೆಟರ್​ ಮಹೇಂದ್ರ ಸಿಂಗ್ ಧೋನಿ ಆರಂಭಿಸಿದ್ದು, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಚಿತ್ರಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ms-dhoni-launches-his-film-production-house-dhoni-entertainment
ಸಿನಿಮಾ ರಂಗದಲ್ಲಿ ಇನ್ನು ಧೋನಿ ಎಂಟರ್​ಟೈನ್​ಮೆಂಟ್

By

Published : Oct 11, 2022, 3:38 PM IST

ಹೈದರಾಬಾದ್ (ತೆಲಂಗಾಣ): 'ಕ್ಯಾಪ್ಟನ್ ಕೂಲ್' ಎಂದೇ ಖ್ಯಾತರಾದ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ಆದರೆ, ಧೋನಿ ನಾಯಕ ನಟನಾಗಿ ಸಿನಿಮಾ ಲೋಕಕ್ಕೆ ಎಂಟ್ರಿ ಕೊಡುತ್ತಿಲ್ಲ. ಬದಲಿಗೆ ಮಹಿ ತನ್ನ ಅಭಿಮಾನಿಗಳಿಗೆ ಉತ್ತಮ ಚಿತ್ರಗಳನ್ನು ನೀಡಲು ಧೋನಿ ಪ್ರೊಡಕ್ಷನ್ ಹೌಸ್​ ಪ್ರಾರಂಭಿಸಿದ್ದಾರೆ.

ಸದ್ಯ ಎಂಎಸ್​ ಧೋನಿ ಪ್ರೊಡಕ್ಷನ್ ಹೌಸ್​ನಲ್ಲಿ ದಕ್ಷಿಣ ಭಾರತದ ಸಿನಿಮಾಗಳು ತಯಾರಾಗಲಿವೆ. ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಚಿತ್ರಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಚಲನಚಿತ್ರ ನಿರ್ಮಾಣ ಸಂಸ್ಥೆಗೆ 'ಧೋನಿ ಎಂಟರ್​ಟೈನ್​ಮೆಂಟ್' ಎಂದು ಹೆಸರಿಟ್ಟಿದ್ದಾರೆ.

ಧೋನಿ ಅವರ ಪ್ರೊಡಕ್ಷನ್ ಹೌಸ್‌ನಲ್ಲಿ ಅವರ ಪತ್ನಿ ಸಾಕ್ಷಿ ಕೂಡ ಭಾಗಿಯಾಗಿದ್ದಾರೆ. ಈಗಾಗಲೇ ಧೋನಿ ಪ್ರೊಡಕ್ಷನ್ ಹೌಸ್ 'ರೋರ್ ಆಫ್ ದಿ ಲಯನ್' ಮತ್ತು 'ದಿ ಹಿಡನ್ ಹಿಂದೂ' ಎಂಬ ವೆಬ್​ ಸಿರೀಸ್​ಗಳನ್ನು ನಿರ್ಮಿಸಿದೆ.

'ರೋರ್ ಆಫ್ ದಿ ಲಯನ್' ಚಿತ್ರವು ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಕುರಿತಾಗಿದ್ದು, ಎರಡು ವರ್ಷಗಳ ನಿಷೇಧದ ನಂತರ ತಂಡವು ಹಿಂದಿರುಗಿದ ಕಥೆಯನ್ನು ಆರ್ಧರಿಸಿತ್ತು. 'ದಿ ಹಿಡನ್ ಹಿಂದೂ' ಚಿತ್ರದ ಕಥೆಯನ್ನು ಅಕ್ಷತ್ ಗುಪ್ತಾ ಬರೆದಿದ್ದು, ಇದು ಪೌರಾಣಿಕ ಥ್ರಿಲ್ಲರ್ ಚಿತ್ರವಾಗಿದೆ. 'ಬ್ಲೇಜ್ ಟು ಗ್ಲೋರಿ' ಕಥೆಯು 2011ರಲ್ಲಿ ಟೀಂ ಇಂಡಿಯಾದ ವಿಶ್ವಕಪ್ ಗೆಲುವು ಆಧರಿಸಿದೆ.

ಧೋನಿ ತಮ್ಮ ಹೊಸ ಇನ್ನಿಂಗ್ಸ್​ ಅನ್ನು ಮುಂದೆ ಮತ್ತಷ್ಟು ವಿಸ್ತರಿಸುತ್ತಾರೆ. ಇತರ ಭಾಷೆಗಳಲ್ಲೂ ಚಿತ್ರಗಳನ್ನು ನಿರ್ಮಿಸುತ್ತಾರೆ ಎಂದು ಹೇಳಲಾಗುತ್ತಿದೆ. 2020ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ಗೆ ಧೋನಿ ನಿವೃತ್ತಿ ಘೋಷಿಸಿದ್ದರು. ಆದರೆ, ಸದ್ಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕಾಗಿ ಆಡುತ್ತಿದ್ದಾರೆ. ಅಷ್ಟೇ ಅಲ್ಲ, ಟೀಂ ಇಂಡಿಯಾದ ಮೆಂಟರ್ ಆಗಿಯೂ ಧೋನಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ:ಬೆಂಗಳೂರಿಗೆ​ ಧೋನಿ ಭೇಟಿ: ಮಕ್ಕಳಿಗೆ ಕ್ರೀಡಾ ಯಶಸ್ಸಿನ ಪಾಠ ಮಾಡಿದ ಕ್ರಿಕೆಟರ್​

ABOUT THE AUTHOR

...view details