ಕ್ರಿಕೆಟ್ ಪ್ರೇಮಿಗಳ ಹೊರತಾಗಿಯೂ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳನ್ನು ಗಳಿಸಿದ್ದಾರೆ. ಅವರಿಗೆ ಇರುವ ಅಭಿಮಾನಿಗಳ ಬಗ್ಗೆ ಈ ವರ್ಷದ ಐಪಿಎಲ್ ವೇಳೆ ಸ್ಪಷ್ಟ ಚಿತ್ರಣವೇ ಸಿಕ್ಕಿದೆ ಎನ್ನಬಹುದು. ಏಕೆಂದರೆ ಐಪಿಎಲ್ ಆನ್ಲೈನ್ ವೀಕ್ಷಣೆಯನ್ನು ಮಾಹಿ ಬ್ಯಾಟಿಂಗ್ಗೆ ಇಳಿದಾಗ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆಯುತ್ತಿತ್ತು. ಮಳೆಯಿಂದಾಗಿ ಐಪಿಎಲ್ ಫೈನಲ್ ಪಂದ್ಯ ತಡ ರಾತ್ರಿ ನಡೆದರೂ ಚೆನ್ನೈ ತಂಡಕ್ಕಾಗಿ ಜನರು ವೀಕ್ಷಣೆ ಮಾಡಿದ್ದರು. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಪ್ರಾಂಚೈಸಿ ಬಗ್ಗೆ ಬಿಡುಗಡೆ ಆದ ವರದಿಯಲ್ಲೂ ಚೆನ್ನೈ ವಿಶ್ವದಲ್ಲೇ ಅಗ್ರ ಸ್ಥಾನವನ್ನು ಪಡೆದುಕೊಂಡಿತ್ತು.
ಅಲ್ಲದೇ ಭಾರತದ ಅತ್ಯಂತ ಯಶಸ್ವಿ ನಾಯಕ ಎಂಎಸ್ ಧೋನಿ ತಮ್ಮ ಸರಳತೆ ಮತ್ತು ಸರಳ ಜೀವನಕ್ಕೆ ಹೆಸರುವಾಸಿಯಾಗಿದ್ದಾರೆ. ಬೆರಗುಗೊಳಿಸುವ ಜೀವನದಿಂದ ದೂರವಾಗಿ ಮನೆಯಲ್ಲಿ ಸಮಯ ಕಳೆಯಲು ಧೋನಿ ಆದ್ಯತೆ ನೀಡುತ್ತಾರೆ. ಧೋನಿಯ ಫ್ಯಾನ್ ಫಾಲೋಯಿಂಗ್‌ಗೆ ಕಮ್ಮಿ ಇಲ್ಲ. ಧೋನಿ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು, ಆದರೆ ಅವರ ಸರಳತೆ ಅವರನ್ನು ಉಳಿದವರಿಗಿಂತ ಭಿನ್ನವಾಗಿಸುತ್ತದೆ. ಧೋನಿ ಇತ್ತೀಚೆಗೆ ತಮ್ಮ ಪತ್ನಿ ಸಾಕ್ಷಿಯೊಂದಿಗೆ ಎಕಾನಮಿ ಕ್ಲಾಸ್ ಫ್ಲೈಟ್‌ನಲ್ಲಿ ಪ್ರಯಾಣಿಸುತ್ತಿದ್ದರು. ಅಲ್ಲಿ ಅಭಿಮಾನಿಯೊಬ್ಬರಿಂದ ರೋಮ್ಯಾಂಟಿಕ್ ಸರ್ಪ್ರೈಸ್ ಸಿಕ್ಕಿದೆ. ಅವರ ಪಕ್ಕದಲ್ಲಿ ಕುಳಿತಿದ್ದ ಪತ್ನಿ ಸಾಕ್ಷಿ ಕೂಡ ಆಶ್ಚರ್ಯಚಕಿತರಾಗಿದ್ದಾರೆ.
ಟ್ವಿಟರ್ನಲ್ಲಿ ಧೋನಿ ಅಭಿಮಾನಿ ಗಗನ ಸಖಿಯೊಬ್ಬರ ವಿಡಿಯೋ ಫುಲ್ ವೈರಲ್ ಆಗುತ್ತಿದೆ. ವಿಡಿಯೋಕ್ಕೆ ಇತ್ತೀಚೆಗೆ ಬಿಡುಗಡೆಯಾದ ಸಾರಾ ಅಲಿ ಖಾನ್ ಮತ್ತು ವಿಕ್ಕಿ ಕೌಶಲ್ ಅಭಿನಯದ ಫ್ಯಾಮಿಲಿ ಡ್ರಾಮ "ಜರಾ ಹಟ್ಕೆ ಜರಾ ಬಚ್ಕೆ" ಸಿನಿಮಾದ ಹಾಡನ್ನು ಹಾಕಿ ರೀಲ್ಸ್ ಮಾಡಲಾಗಿದೆ.