ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ ಹೊಡಿ ಬಡಿ ಆಟದಲ್ಲಿ ದಾಖಲೆ ಮೇಲೆ ದಾಖಲೆ ಮೂಡಿ ಬರಲು ಶುರುವಾಗಿವೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಕ್ಯಾಪ್ಟನ್, ವಿಕೆಟ್ ಕೀಪರ್ ಬ್ಯಾಟರ್ ಮಹೇಂದ್ರ ಸಿಂಗ್ ಧೋನಿ ಲಖನೌ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಅನೇಕ ದಾಖಲೆ ನಿರ್ಮಾಣ ಮಾಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ(49) ವಿಕೆಟ್ ಪತನಗೊಳ್ಳುತ್ತಿದ್ದಂತೆ ಕ್ರೀಸ್ಗೆ ಆಗಮಿಸಿದ ಮಹೇಂದ್ರ ಸಿಂಗ್ ಧೋನಿ, ತಾವು ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿದರು. ಈ ಮೂಲಕ ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್ ದಾಖಲೆ ಸರಿಗಟ್ಟಿದ್ದಾರೆ.
19ನೇ ಓವರ್ನಲ್ಲಿ ಅತಿ ಹೆಚ್ಚು ಸಿಕ್ಸರ್:ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಮಹೇಂದ್ರ ಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ನ ಇತಿಹಾಸದಲ್ಲೇ 19ನೇ ಓವರ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿರುವ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. 19ನೇ ಓವರ್ನಲ್ಲೇ ಧೋನಿ ಇಲ್ಲಿಯವರೆಗೆ 36 ಸಿಕ್ಸರ್ ಬಾರಿಸಿದ್ದಾರೆ. ಈಗಾಗಲೇ ಈ ದಾಖಲೆ ಎಬಿಡಿ ಹೆಸರಿನಲ್ಲಿದೆ. ಇದಾದ ಬಳಿಕ ವೆಸ್ಟ್ ಇಂಡೀಸ್ನ ಆಂಡ್ರೂ ರೆಸೆಲ್ 26, ಕಿರನ್ ಪೊಲಾರ್ಡ್ 24 ಹಾಗೂ ಹಾರ್ದಿಕ್ ಪಾಂಡ್ಯಾ 24 ಸಿಕ್ಸರ್ ಸಿಡಿಸಿದ್ದಾರೆ.