ಕರ್ನಾಟಕ

karnataka

ETV Bharat / sports

"ಮೊದಲು ಎಲ್ಲರನ್ನೂ ಜೋಪಾನವಾಗಿ ಮನೆಗೆ ಕಳುಹಿಸಿ, ಕೊನೆಯಲ್ಲಿ ನಾನು ಹೋಗ್ತೇನೆ' - ಮನೆಗೆ ತಡವಾಗಿ ತೆರಳಿದ ಧೋನಿ

ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ತನ್ನ ಆಟಗಾರರನ್ನು ತವರಿಗೆ ಕಳುಹಿಸುವ ವಿಚಾರದಲ್ಲಿ ನಡೆಸ ವರ್ಚುಯಲ್ ಸಭೆಯಲ್ಲಿ ಧೋನಿ ತಾವೂ ಕೊನೆಯವರಾಗಿ ಮನೆಗೆ ತೆರಳುತ್ತೇನೆ. ಮೊದಲು ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಮನೆಗೆ ಕಳುಹಿಸಿ ಎಂದು ಸಹ ಆಟಗಾರರ ಬಗ್ಗೆ ಕಾಳಜಿ ಮೆರೆದಿದ್ದಾರೆ.

ಎಂಎಸ್​ ಧೋನಿ
ಎಂಎಸ್​ ಧೋನಿ

By

Published : May 6, 2021, 3:03 PM IST

ನವದೆಹಲಿ:ಬಯೋ ಬಬಲ್​ನಲ್ಲಿ ಕೊರೊಬಾ ವೈರಸ್ ಕಾಣಿಸಿಕೊಂಡ ಹಿನ್ನೆಲೆ ಐಪಿಎಲ್​ ಅನಿರ್ಧಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಈ ಕಾರಣ ಎಲ್ಲ ಆಟಗಾರರನ್ನು ಜೋಪಾನವಾಗಿ ತವರಿಗೆ ಮರಳಿಸುವ ಕೆಲಸ ನಡೆಯುತ್ತಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ತನ್ನ ಆಟಗಾರರನ್ನು ತವರಿಗೆ ಕಳುಹಿಸುವ ವಿಚಾರದಲ್ಲಿ ನಡೆಸಿದ ವರ್ಚುಯಲ್ ಸಭೆಯಲ್ಲಿ ಧೋನಿ ತಾವೂ ಕೊನೆಯವರಾಗಿ ಮನೆಗೆ ತೆರಳುತ್ತೇನೆ. ಮೊದಲು ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಮನೆಗೆ ಕಳುಹಿಸಿ ಎಂದು ಸಹ ಆಟಗಾರರ ಬಗ್ಗೆ ಕಾಳಜಿ ಮೆರೆದಿದ್ದಾರೆ.

"ಮಹಿಭಾಯ್​ ತಾವೂ ಹೋಟೆಲ್​ನಿಂದ ಕೊನೆಯ ವ್ಯಕ್ತಿಯಾಗಿ ಹೋಗುವುದಾಗಿ ಹೇಳಿದರು. ಮೊದಲು ವಿದೇಶಿ ಆಟಗಾರರು ಹೋಗಬೇಕು, ನಂತರ ಭಾರತದ ಆಟಗಾರರು ತೆರಳಲಿ. ನಾನು ಎಲ್ಲ ಆಟಗಾರರು ಸುರಕ್ಷಿತವಾಗಿ ಮನೆಗೆ ತಲುಪಿದ್ದಾರೆ ಎಂದು ತಿಳಿದ ಮೇಲೆ ನಾಳೆ (ಗುರುವಾರ) ಮನೆಗೆ ಹೋಗುತ್ತೇನೆ " ಎಂದು ಆಡಳಿತ ಮಂಡಳಿಗೆ ತಿಳಿಸಿದರೆಂದು ಸಿಎಸ್​ಕೆ ಸದಸ್ಯರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

​ಸಿಎಸ್​ಕೆ ಭಾರತೀಯರಿಗಾಗಿ ದೆಹಲಿಯಿಂದ 10 ಸೀಟಿನ ಚಾರ್ಟೆರ್​ ಪ್ಲೈಟ್​ ಏರ್ಪಾಡು ಮಾಡಿತ್ತು. ಬುಧವಾರ ಬೆಳಗ್ಗೆ ರಾಜ್​ಕೋಟ್​ ಮತ್ತು ಮುಂಬೈಗೆ ಆಟಗಾರರನ್ನು ಬಿಡಲಾಗಿತ್ತು. ನಂತರ ಸಂಜೆ ಬೆಂಗಳೂರು ಮತ್ತು ಚೆನ್ನೈಗೆ ಆಟಗಾರರನ್ನು ತಲುಪಿಸಲಾಗಿತ್ತು. ಇದೀಗ ಹೋಟೆಲ್​ನಲ್ಲಿರುವ ಧೋನಿ ಗುರುವಾರ ಸಂಜೆ ರಾಂಚಿಗೆ ತೆರಳಲಿದ್ದಾರೆ.

ಇದನ್ನು ಓದಿ:ಭಾರತೀಯ ಅಭಿಮಾನಿಗಳಿಗೆ ಸೈಮನ್ ಡೌಲ್ ಹೃದಯಸ್ಪರ್ಶಿ ಸಂದೇಶ

ABOUT THE AUTHOR

...view details