ಕರ್ನಾಟಕ

karnataka

40ನೇ ಹುಟ್ಟುಹಬ್ಬದ ಸಂಭ್ರಮ: ಮಹೇಂದ್ರ ಸಿಂಗ್ ಧೋನಿ ಯಶೋಗಾಥೆ

By

Published : Jul 7, 2021, 9:36 AM IST

ಭಾರತ ಕ್ರಿಕೆಟ್​ ತಂಡದ ಕ್ಯಾಪ್ಟನ್​ ಕೂಲ್, ಅಭಿಮಾನಿಗಳ ನೆಚ್ಚಿನ ಮಾಹಿ, ಹೆಲಿಕಾಪ್ಟರ್​ ಶಾಟ್​ ಪರಿಚಯಿಸಿದ ಆಟಗಾರ ಮಹೇಂದ್ರ ಸಿಂಗ್ ಧೋನಿಗೆ ಇಂದು 40 ನೇ ಜನ್ಮ ದಿನದ ಸಂಭ್ರಮ. ಭಾರತ ಕ್ರಿಕೆಟ್​ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಮಾಹಿಯ ವೃತ್ತಿ ಜೀವನ ಹೇಗಿತ್ತು, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

MS Dhoni Birthday, MS Dhoni Birthday news, MS Dhoni Birthday 2021 news, from nairobi to manchester the tale, from nairobi to manchester the tale of mahendra singh dhoni,  ಮಹೇಂದ್ರ ಸಿಂಗ್ ಧೋನಿ ಹುಟ್ಟುಹಬ್ಬ, ಮಹೇಂದ್ರ ಸಿಂಗ್ ಧೋನಿ ಹುಟ್ಟುಹಬ್ಬ 2021, ಮಹೇಂದ್ರ ಸಿಂಗ್ ಧೋನಿ ಹುಟ್ಟುಹಬ್ಬ 2021 ಸುದ್ದಿ,  ಮಹೇಂದ್ರ ಸಿಂಗ್ ಧೋನಿ ಯಶೋಗಾಥೆ, ನೈರೋಬಿಯಿಂದ ಮ್ಯಾಂಚೆಸ್ಟರ್​ವರೆಗೆ ಮಹೇಂದ್ರ ಸಿಂಗ್ ಧೋನಿ ಯಶೋಗಾಥೆ,
ಧೋನಿ

ಹೈದರಾಬಾದ್ :1981 ಜುಲೈ 7 ರಂದು ಜನಿಸಿದ ಕ್ಯಾಪ್ಟನ್​ ಕೂಲ್ ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್​ ತಂಡದ ನಾಯಕತ್ವ ವಹಿಸಿದ ಬಳಿಕ ಟೀಂ ಇಂಡಿಯಾ ಹಲವಾರು ಯಶಸ್ಸು ಗಳಿಸಿದೆ. ಪ್ರಸ್ತುತ ಪೀಳಿಗೆಯ ಎಲ್ಲ ಆಟಗಾರರಲ್ಲಿ ಹೊಸ ಭಾರತವನ್ನು ಉತ್ತೇಜಿಸಿದ ಮಾಹಿ, ಆಕ್ರಮಣಕಾರಿಯಲ್ಲದೇ, ದುರಹಂಕಾರವಿಲ್ಲದೇ ತಂಡವನ್ನು ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಧೋನಿ ಕ್ರಿಕೆಟ್​ ಕನಸು ಕಾಣುವ ಅದೆಷ್ಟೋ ಯುವ ಜನರಿಗೆ ರೋಲ್ ಮಾಡೆಲ್ ಮತ್ತು ಮಿನುಗುವ ತಾರೆಯಾಗಿ ಕಂಡಿದ್ದಾರೆ.

ಮಹೇಂದ್ರ ಸಿಂಗ್​ ಧೋನಿ

ಧೋನಿ ನಾಯಕತ್ವದಲ್ಲಿ ಭಾರತವು ಎಲ್ಲಾ ಸ್ವರೂಪಗಳಲ್ಲಿ ಅಗ್ರ ಪ್ರಶಸ್ತಿ ಗೆದ್ದಿದೆ. ಡಿಸೆಂಬರ್ 2009 ರಿಂದ 18 ತಿಂಗಳುಗಳವರೆಗೆ ನಂ .1 ಟೆಸ್ಟ್ ಶ್ರೇಯಾಂಕ, 2011 ರಲ್ಲಿ 50 ಓವರ್‌ಗಳ ವಿಶ್ವಕಪ್ ಮತ್ತು 2007 ರಲ್ಲಿ ಟಿ -20 ವಿಶ್ವ ಕಪ್​ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಪಡೆದುಕೊಂಡಿದೆ.

ಇಂದು ಹಲವಾರು ಜನರಿಗೆ ನೆಚ್ಚಿನ ಕ್ರಿಕೆಟರ್​ ಆಗಿರುವ ಧೋನಿ 2004 ರಲ್ಲಿ ನೈರೋಬಿಯಾದಲ್ಲಿ ನಡೆದ 50 ಓವರ್​ಗಳ ತ್ರಿಕೋನ ಸರಣಿಯಲ್ಲಿ ಭಾರತ ಎ ತಂಡದ ಪರ ಎರಡು ಶತಕಗಳನ್ನು ಹೊಡೆಯುವವರೆಗೆ ಕ್ರಿಕೆಟ್​ ಜಗತ್ತಿಗೆ ಪರಿಚಯವಾಗಿರದ ಮುಖವಾಗಿತ್ತು. ಆ ಸಮಯದಲ್ಲಿ ಟೀಂ ಇಂಡಿಯಾ ಸೂಕ್ತವಾದ ವಿಕೆಟ್​ ಕೀಪರ್​ ಕಮ್ ಬ್ಯಾಟ್ಸ್​ಮನ್​ಗಾಗಿ ಹಡುಕಾಟ ನಡೆಸುತ್ತಿದ್ದು, ಈ ವೇಳೆ, ಗಂಗೂಲಿ ಸಾರಥ್ಯದ ತಂಡದಲ್ಲಿ ವಿಕೆಟ್​ ಕೀಪರ್​ ಆಗಿ ಧೋನಿ ಸ್ಥಾನ ಪಡೆಯುತ್ತಾರೆ.

2011 ರ ಏಕ ದಿನ ವಿಶ್ವಕಪ್ ಜಯ

ಧೋನಿಯ ಪ್ರಾರಂಭವು ಐತಿಹಾಸಿಕವಾಗಿತ್ತು. 2005 ರಲ್ಲಿ ಪಾಕ್ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ಪರದಾಡಿದ ಮಾಹಿ ನಾಲ್ಕನೆ ಪಂದ್ಯದಲ್ಲಿ 148 ರನ್​ ಗಳಿಸುವ ಮೂಲಕ ಇಡೀ ವಿಶ್ವಕ್ಕೆ ಪರಿಚಯವಾದರು. ಬಳಿಕ ಗಂಗೂಲಿ ತಮ್ಮ 3 ನೇ ಸ್ಥಾನದ ಬ್ಯಾಟಿಂಗ್ ಕ್ರಮಾಂಕವನ್ನು ತ್ಯಾಗ ಮಾಡಿ ಧೋನಿಗೆ ಸಾಮರ್ಥ್ಯ ತೋರಿಸಲು ಅವಕಾಶ ಮಾಡಿಕೊಟ್ಟರು. 2005 ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ 183 ರನ್​ ಹೊಡೆಯುವ ಮೂಲಕ ಇಡೀ ವಿಶ್ವಕ್ಕೆ ಮಾಹಿ "ಹೆಲಿಕಾಪ್ಟರ್​ ಶಾಟ್"​ ಪರಿಚಯಿಸಿದರು.

ಧೋನಿ ತಂಡದಲ್ಲಿ ತೋರಿದ ಉತ್ತಮ ಪ್ರದರ್ಶನ ಮತ್ತು ಅವರ ನಾಯಕತ್ವ ಕೌಶಲ್ಯವನ್ನು ಗುರುತಿಸಿದ ಹಿರಿಯ ಆಟಗಾರರಾದ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಟಿ -20 ವಿಶ್ವ ಕಪ್​ ತಂಡದ ನಾಯಕತ್ವಕ್ಕೆ ಶಿಫಾರಸು ಮಾಡುತ್ತಾರೆ.

2011 ರ ಏಕ ದಿನ ವಿಶ್ವಕಪ್ ಜಯ

2007 ರಲ್ಲಿ ನಡೆದ ಐಸಿಸಿ ಟಿ- 20 ವಿಶ್ವಕಪ್​ ಪಂದ್ಯದಲ್ಲಿ ಧೋನಿ ನಾಯಕತ್ವದ ಯುವಕರ ತಂಡ, ಟಿ 20 ವಿಶ್ವ ಕಪ್ ಟ್ರೋಫಿ​ ಮುಡಿಗೇರಿಸಿಕೊಳ್ಳುವ ಮೂಲಕ ಇಡೀ ವಿಶ್ವವೇ ನಿಬ್ಬೆರಗಾಗುವಂತೆ ಮಾಡಿತು. ಈ ಮೂಲಕ ಧೋನಿ ನಾಯಕತ್ವದ ಸಾಮರ್ಥ್ಯವನ್ನು ಜಗತ್ತು ಕೊಂಡಾಡಿತು. ಅಷ್ಟೇ ಅಲ್ಲದೇ ಧೋನಿಗೆ "ಕ್ಯಾಪ್ಟನ್​ ಕೂಲ್" ಎಂಬ ಬಿರುದು ಸಿಕ್ಕಿತು.

ರಾಹುಲ್ ದ್ರಾವಿಡ್ ನಾಯಕತ್ವ ಹುದ್ದೆ ತ್ಯಜಿಸಿದ ನಂತರ ಮಾಹಿ ಏಕ ದಿನ ನಾಯಕರಾದರು ಮತ್ತು ಅಂತಿಮವಾಗಿ ಅನಿಲ್ ಕುಂಬ್ಳೆ ನಿವೃತ್ತರಾದ ನಂತರ ಪೂರ್ಣ ಸಮಯದ ಟೆಸ್ಟ್ ನಾಯಕತ್ವ ವಹಿಸಿಕೊಂಡರು.

ಧೋನಿ ಟೆಸ್ಟ್​​ ನಾಯಕತ್ವ ವಹಿಸಿದ ಬಳಿಕ ಭಾರತವು ಸಾಲು ಸಾಲು ಟೆಸ್ಟ್​ ಸರಣಿಯನ್ನು ಗೆದ್ದು ಬೀಗಿತು. ಇಂಗ್ಲೆಂಡ್​ 2008, ನ್ಯೂಜಿಲ್ಯಾಂಡ್​​​ 2009, ಶ್ರೀಲಂಕಾ 2009 ಟೆಸ್ಟ್​ ಸರಣಿಗಳನ್ನು ಟೀಂ ಇಂಡಿಯಾ ತನ್ನದಾಗಿಸಿಕೊಂಡಿತು. ಈ ಮೂಲಕ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೇರಿತು. ಧೋನಿ ನಾಯಕತ್ವದಲ್ಲಿ ಭಾರತ ಕೇವಲ ಎರಡು ಟೆಸ್ಟ್​ ಮ್ಯಾಚ್​ ಸೋತಿದೆ.

2013 ರ ಚಾಂಫಿಯನ್ಸ್ ಟ್ರೋಫಿ

ಮಾಹಿ ವೃತ್ತಿ ಜೀವನದಲ್ಲಿ ಅತೀ ದೊಡ್ಡ ಸಾಧನೆ ಎಂದರೆ 2011 ರಲ್ಲಿ ವಿಶ್ವ ಕಪ್​ ಗೆದ್ದಿದ್ದು, ಇದು ಭಾರತ 28 ವರ್ಷಗಳ ನಂತರ ಗೆದ್ದ ವಿಶ್ವ ಕಪ್​ ಆಗಿತ್ತು. ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಧೋನಿ ಔಟ್​ ಆಗದೇ 91 ರನ್ ಗಳಿಸಿದರು. ಈ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಭಾರತ ತಂಡವು 2013 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲುವ ಮೂಲಕ ತನ್ನ ಪ್ರಾಬಲ್ಯ ಮುಂದುವರೆಸಿತು. ಟಿ -20 ವಿಶ್ವಕಪ್​ 50 ಓವರ್​ ಗಳ ವಿಶ್ವಕಪ್​ ಮತ್ತು ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಎಲ್ಲಾ ಪ್ರಮುಖ ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಮಾಹಿ ಪಾತ್ರರಾದರು.

2014 ರಲ್ಲಿ ರಾಂಚಿಯಲ್ಲಿ ನಡೆದ ವರ್ಲ್​ ಚಾಂಪಿಯನ್ಸ್​ ಟ್ರೋಫಿ ಪಂದ್ಯದಲ್ಲಿ ಫೈನಲ್​ಗೆ ಭಾರತ ಲಗ್ಗೆಯಿಟ್ಟರೂ ಕೊನೆಗೆ ಶ್ರೀಲಂಕಾ ವಿರುದ್ಧ ಸೋಲಬೇಕಾಯಿತು. 2015 ರ ವಿಶ್ವಕಪ್​ನಲ್ಲಿ ಸೆಮಿಫೈನಲ್​ಗೆ ಹೋದ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸೋತಿತು.

2014 ಡಿಸೆಂಬರ್​ 30 ರಂದು ಎಂಸಿಜಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯವನ್ನು ಕೊನೆಗೊಳಿಸಿದ ಧೋನಿ, ಹೆಚ್ಚಿನ ಒತ್ತಡದ ಕಾರಣ ನೀಡಿ ಟೆಸ್ಟ್​ ನಾಯಕತ್ವದಿಂದ ನಿವೃತ್ತಿ ಘೋಷಿಸಿದರು. ಆ ಬಳಿಕ ಟೀಂ ಇಂಡಿಯಾ ನಾಯಕತ್ವವನ್ನು ವಿರಾಟ್​ ಕೊಹ್ಲಿ ಹೆಗಲಿಗೆ ಹಾಕಲಾಯಿತು.

ABOUT THE AUTHOR

...view details