ಕರ್ನಾಟಕ

karnataka

ETV Bharat / sports

ಸಾಕ್ಷಿ ಜೊತೆ ಸಪ್ತಪದಿ ತುಳಿಯುವ ಮೊದಲು ಈ ಬಾಲಿವುಡ್ ಬೆಡಗಿಯರ ಜೊತೆ ಧೋನಿ ಡೇಟಿಂಗ್​​! - ಮಹೇಂದ್ರ ಸಿಂಗ್ ಧೋನಿ ದೀಪಿಕಾ ಪಡುಕೊಣೆ

ಮಹೇಂದ್ರ ಸಿಂಗ್ ಧೋನಿ ಮತ್ತು ಸಾಕ್ಷಿ ಮದುವೆಗೂ ಮುನ್ನ ಕೆಲ ನಟಿಯರ ಜೊತೆ ಡೇಟಿಂಗ್ ನಡೆಸಿದ್ದರು ಎಂಬ ವರದಿ ಅನೇಕ ಸಲ ಕೇಳಿ ಬಂದಿದೆ. ಆದರೆ, ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಬಗ್ಗೆ ಸ್ಪಷ್ಟತೆ ಇಲ್ಲ.

MS Dhoni Birthday
MS Dhoni Birthday

By

Published : Jul 7, 2022, 9:04 PM IST

ಭಾರತೀಯ ಕ್ರಿಕೆಟ್​​ ಕಂಡಿರುವ ಅತಿ ಯಶಸ್ವಿ ನಾಯಕರ ಪೈಕಿ ಮಹೇಂದ್ರ ಸಿಂಗ್ ಧೋನಿ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. 41ನೇ ವಸಂತಕ್ಕೆ ಕಾಲಿಟ್ಟಿರುವ ಮಹೇಂದ್ರ ಸಿಂಗ್​ ಧೋನಿಗೆ ಅನೇಕರು ವಿಶ್ ಮಾಡಿದ್ದಾರೆ. ಮಹೇಂದ್ರ ಸಿಂಗ್​ ಧೋನಿ ಜೀವನದಲ್ಲಿ ಸಾಕ್ಷಿ ಬರುವುದಕ್ಕೂ ಮುಂಚೆ ಅನೇಕ ಬಾಲಿವುಡ್ ಬೆಡಗಿಯರೊಂದಿಗೆ ಒಡನಾಟ ಹೊಂದಿದ್ದರು ಎಂಬ ಗಾಸಿಪ್ ಸುದ್ದಿ ಈ ಹಿಂದಿನಿಂದಲೂ ಇದೆ. ಅದರಲ್ಲಿ ಪ್ರಮುಖವಾಗಿ ಬಾಲಿವುಡ್ ಬೆಡಗಿ ದೀಪಿಕಾ ಪಡುಕೊಣೆ ಜೊತೆ ಮಹೇಂದ್ರ ಸಿಂಗ್ ಧೋನಿ ಹೆಸರು ತಳುಕು ಹಾಕಿಕೊಂಡಿತ್ತು. ವರದಿಗಳ ಪ್ರಕಾರ, 2007ರಲ್ಲಿ ದೀಪಿಕಾ-ಧೋನಿ ನಡುವೆ ಕ್ರಶ್​ ಇತ್ತು ಎನ್ನಲಾಗಿತ್ತು.

ಬಾಲಿವುಡ್ ನಟಿ ದೀಪಿಕಾ ಪಡುಕೊಣೆ ಜೊತೆ ಮಹೇಂದ್ರ ಸಿಂಗ್ ಧೋನಿ

ಇನ್ನು ಕಾಮಿಡಿ ನೈಟ್​ ವಿತ್​ ಕಪಿಲ್​ ಮತ್ತು ದಿ ಕಪಿಲ್ ಶರ್ಮಾ ಶೋನ ಡೈರೆಕ್ಟರ್​, ಇನ್ನೋವೇಟಿವ್​ ನಿರ್ಮಾಪಕಿ ಪ್ರೀತಿ ಸಿಮೋಸ್​ ಹಾಗೂ ಧೋನಿ ಸಹ ಉತ್ತಮ ಒಡನಾಟ ಹೊಂದಿದ್ದರು. ಈ ಜೋಡಿ ಸುಮಾರು 15 ವರ್ಷಗಳಿಂದ ಸ್ನೇಹಿತರಾಗಿದ್ದರು.

ದಿ ಕಪಿಲ್ ಶರ್ಮಾ ಶೋನ ಡೈರೆಕ್ಟರ್ ಜೊತೆ ಧೋನಿ

ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಎಂಎಸ್ ಧೋನಿ: ದಿ ಅನ್ಟೋಲ್ಡ್​ ಸ್ಟೋರಿ ಚಿತ್ರದ ವೇಳೆ ಮಹೇಂದ್ರ ಸಿಂಗ್ ಧೋನಿಯ ಮೊದಲ ಲವ್​ ಪ್ರಿಯಾಂಕಾ ಝಾ ಎಂದು ತಿಳಿದು ಬಂದಿದೆ. ಈ ಯುವತಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಳು. ಚಿತ್ರದಲ್ಲಿ ಪ್ರಿಯಾಂಕಾ ಪಾತ್ರವನ್ನ ದಿಶಾ ಪಟಾನಿ ನಿರ್ವಹಿಸಿದ್ದಾರೆ.

ಪ್ರಿಯಾಂಕಾ ಝಾ ಜೊತೆ ಧೋನಿ ಮೊದಲ ಲವ್​

ಅನೇಕ ಬಾಲಿವುಡ್ ನಟಿಯರೊಂದಿಗೆ ಧೋನಿ ಡೇಟಿಂಗ್ ನಡೆಸಿದ ಬಳಿಕ ಅಂತಿಮವಾಗಿ ಮಹೇಂದ್ರ ಸಿಂಗ್ ಧೋನಿ ಸಾಕ್ಷಿ ಜೊತೆ ಮದುವೆ ಮಾಡಿಕೊಂಡರು. ಈ ಜೋಡಿಗೆ ಇದೀಗ ಜೀವಾ ಎಂಬ ಮಗಳಿದ್ದಾಳೆ.

ಸಾಕ್ಷಿ ಜೊತೆ ಮದುವೆ ಮಾಡಿಕೊಂಡಿರುವ ಧೋನಿ

ಗಜನಿ ಚಿತ್ರದ ನಟಿ ಆಸಿನ್ ಜೊತೆ ಸಹ ಮಹೇಂದ್ರ ಸಿಂಗ್ ಧೋನಿ ಹೆಸರು ತಳುಕು ಹಾಕಿಕೊಂಡಿತ್ತು. ಮಾಧ್ಯಮಗಳ ವರದಿ ಪ್ರಕಾರ, ಆಸೀನ್ ಮತ್ತು ಧೋನಿ ಡೇಟಿಂಗ್ ಮಾಡ್ತಿದ್ದರು ಎನ್ನಲಾಗ್ತಿತ್ತು. ಈ ಜೋಡಿ ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

ಗಜನಿ ಚಿತ್ರದ ನಟಿ ಆಸಿನ್ ಜೊತೆ ಮಹೇಂದ್ರ ಸಿಂಗ್ ಧೋನಿ

2008-09ರ ಅವಧಿಯಲ್ಲಿ ಧೋನಿ ನಟಿ ರಾಯ್​ ಲಕ್ಷ್ಮಿ ಜೊತೆ ಡೇಟಿಂಗ್​ ಮಾಡಿದ್ದರು ಎಂದು ವರದಿಯಾಗಿತ್ತು. ಐಪಿಎಲ್​ ನಂತರ ಈ ಜೋಡಿ ಅನೇಕ ಸಂದರ್ಭಗಳಲ್ಲಿ ಒಟ್ಟಿಗೆ ಪಾರ್ಟಿ ಮಾಡುತ್ತಿದ್ದರು ಎಂದು ವರದಿಯಾಗಿದೆ.

ನಟಿ ರಾಯ್​ ಲಕ್ಷ್ಮಿ ಜೊತೆ ಧೋನಿ

ABOUT THE AUTHOR

...view details