ಸೌತಾಂಪ್ಟನ್ :ಭಾರತ ತಂಡದ ವೇಗಿ ಮೊಹಮ್ಮದ್ ಶಮಿ ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ 4 ವಿಕೆಟ್ ಪಡೆಯುವ ಮೂಲಕ ಐಸಿಸಿ ಟೂರ್ನಮೆಂಟ್ ಫೈನಲ್ ಪಂದ್ಯದಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಶ್ರೇಯಕ್ಕೆ ಪಾತ್ರರಾದರು.
ಸೌತಾಂಪ್ಟನ್ನಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದ ನಾಲ್ಕನೇ ದಿನ ಮಾರಕ ದಾಳಿ ನಡೆಸಿದ ಶಮಿ ಕಿವೀಶ್ನ ರಾಸ್ ಟೇಲರ್(11), ಬಿಜೆ ವಾಟ್ಲಿಂಗ್(7), ಕಾಲಿನ ಡಿ ಗ್ರ್ಯಾಂಡ್ಹೋಮ್(13) ಮತ್ತು ಕೈಲ್ ಜೆಮೀಸನ್(21) ವಿಕೆಟ್ ಪಡೆದರು.
ಭಾರತ ಈವರೆಗೆ 3 ಏಕದಿನ ವಿಶ್ವಕಪ್, 2 ಟಿ20 ವಿಶ್ವಕಪ್ ಮತ್ತು 4 ಚಾಂಪಿಯನ್ಸ್ ಟ್ರೋಫಿ ಮತ್ತು ಒಂದು ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಸ್ನಲ್ಲಿ ಆಡಿದೆ. ಈವರೆಗೂ ಯಾವೊಬ್ಬ ಬೌಲರ್ ಕೂಡ 4 ವಿಕೆಟ್ ಪಡೆದಿರಲಿಲ್ಲ. ಇದೀಗ ಶಮಿ WTC ಫೈನಲ್ಸ್ನಲ್ಲಿ ಈ ಸಾಧನೆ ಮಾಡಿದ್ದಾರೆ.