ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ನಿರ್ವಹಣೆಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಇಯಾನ್ ಮಾರ್ಗನ್ಗೆ ಐಪಿಎಲ್ ಮಂಡಳಿ 12 ಲಕ್ಷ ದಂಡ ವಿಧಿಸಿದೆ.
ಸಿಎಸ್ಕೆ ವಿರುದ್ಧ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್14 15ನೇ ಪಂದ್ಯದ ವೇಳೆ ಟಾಸ್ ಗೆದ್ದು, ಬೌಲಿಂಗ್ ಆಯ್ಕೆ ಮಾಡಿಕೊಂಡ ಕೋಲ್ಕತ್ತಾ ನೈಟ್ ರೈಡರ್ಸ್ಗೆ ಧೋನಿ 221ರನ್ಗಳ ಬೃಹತ್ ಮೊತ್ತದ ಗುರಿ ನೀಡಿತ್ತು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ 19.1 ಓವರ್ಗಳಲ್ಲಿ 202 ರನ್ಗಳಿಸಿ 18 ರನ್ಗಳ ಸೋಲು ಕಂಡಿತು. ಆದರೆ, ಸೋಲಿನ ನೋವಿನಲ್ಲಿದ್ದ ತಂಡಕ್ಕೆ ಇದೀಗ ನಿಧಾನಗತಿ ಓವರ್ ಮಾಡಿದ್ದಕ್ಕಾಗಿ ನಾಯಕ ಇಯಾನ್ ಮಾರ್ಗನ್ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.
ಫಾಫ್ ಡು ಪ್ಲೆಸಿಸ್ ಮತ್ತು ರುತುರಾಜ್ ಗಾಯಕ್ವಾಡ್ ಕೆಕೆಆರ್ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದ್ದರು. ಈ ಜೋಡಿಯನ್ನು ಬೆರ್ಪಡಿಸಲಾಗದ ಮಾರ್ಗನ್ ವಿವಿಧ ಬೌಲಿಂಗ್ ಬದಲಾವಣೆ ಮಾಡುತ್ತಾ ನಿಗದಿತ ಸಮಯಕ್ಕೆ 20 ಓವರ್ ಮುಗಿಸುವಲ್ಲಿ ವಿಫಲರಾದರು. ಆದ್ದರಿಂದ ಐಪಿಎಲ್ ನೀತಿ ಸಂಹಿತೆ ಪ್ರಕಾರ 90 ನಿಮಿಷಗಳಲ್ಲಿ ಬೌಲಿಂಗ್ ಮುಗಿಸದೇ ಇರುವ ಕಾರಣಕ್ಕೆ 12 ಲಕ್ಷ ರೂ. ದಂಡವಾಗಿ ತೆತ್ತಿದ್ದಾರೆ.