ಲಂಡನ್ :ಅಲ್ಲಿ ರಾಬಿನ್ಸನ್ ಹಳೆಯ ಟ್ವೀಟ್ ವಿವಾದದ ನಂತರ ಇದೀಗ ಇಂಗ್ಲೆಂಡ್ ಸೀಮಿತ ಓವರ್ಗಳ ನಾಯಕ ಇಯಾನ್ ಮಾರ್ಗನ್ ಮತ್ತು ವಿಕೆಟ್ ಕೀಪರ್ ಜೋಶ್ ಬಟ್ಲರ್ ಅಭಿಮಾನಿಗಳು ಬಳಸುವ ಇಂಗ್ಲಿಷ್ ಭಾಷೆಯನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ಸಂಭಾಷಣೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಬಟ್ಲರ್ ಮತ್ತು ಇಯಾನ್ ಮಾರ್ಗನ್ ಇಬ್ಬರ ಟ್ವೀಟ್ಗಳ ಸಂಬಂಧ ತನಿಖೆ ನಡೆಸುವುದಕ್ಕೆ ಆದೇಶಿಸಿದೆ ಎಂದು ತಿಳಿದು ಬಂದಿದೆ.
ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಾರತಮ್ಯದ ವಿರುದ್ಧ ಶೂನ್ಯ ಸಹಿಷ್ಣು ನೀತಿಯನ್ನು ಹೊಂದಿದೆ. 8 ವರ್ಷಗಳ ಹಿಂದೆ ರಾಬಿನ್ಸನ್ ಮಾಡಿದ್ದ ಜನಾಂಗೀಯ ನೀತಿ ಮತ್ತು ಮಹಿಳೆಯರ ಮೇಲಿನ ಅಪಹಾಸ್ಯ ಟ್ವೀಟ್ಗಳು ಬಹಿರಂಗಗೊಂಡ ನಂತರ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಅಮಾನತು ಮಾಡಲಾಗಿತ್ತು. ಆದರೆ, ಇಂಗ್ಲೆಂಡ್ ಪ್ರಧಾನಿ ಸೇರಿ ಹಲವಾರು ರಾಜಕಾರಣಿಗಳು ಇಸಿಬಿ ನಡೆ ಖಂಡಿಸಿದ್ದರು. ಯಾವಾಗಲೋ ಮಾಡಿದ್ದ ತಪ್ಪಿಗೆ ಈಗ ಶಿಕ್ಷೆ ನೀಡುವುದು ಸರಿಯಾದ ಕ್ರಮವಲ್ಲ, ಈ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ ತಿಳಿಸಿದ್ದರು.