ಕರ್ನಾಟಕ

karnataka

ETV Bharat / sports

ಹೆಚ್ಚಿನ ಟೆಸ್ಟ್​ ಪಂದ್ಯ ಆಡುವುದರಿಂದ ಮಹಿಳಾ ಕ್ರಿಕೆಟರ್ಸ್​ ಮತ್ತಷ್ಟು ಗಟ್ಟಿ: ರಾಮನ್​ - ಮಹಿಳಾ ತಂಡದ ಮಾಜಿ ಕೋಚ್​

ಮಹಿಳಾ ಕ್ರಿಕೆಟರ್ಸ್​ ಹೆಚ್ಚಿನ ಟೆಸ್ಟ್​ ಪಂದ್ಯಗಳಲ್ಲಿ ಭಾಗಿಯಾಗುವುದರಿಂದ ಹೆಚ್ಚು ಗಟ್ಟಿಗೊಂಡು, ಉತ್ತಮ ಕ್ರಿಕೆಟ್​ ಆಡಲು ಸಾಧ್ಯವಾಗುತ್ತದೆ ಎಂದು ತಂಡದ ಮಾಜಿ ಕೋಚ್​ ಅಭಿಪ್ರಾಯಪಟ್ಟಿದ್ದಾರೆ.

Raman
Raman

By

Published : May 21, 2021, 10:53 PM IST

ಮುಂಬೈ: ಕ್ಯಾಲೆಂಡರ್​ ವರ್ಷದಲ್ಲಿ ಹೆಚ್ಚು ಟೆಸ್ಟ್​ ಆಡುವುದರಿಂದ ಮಹಿಳಾ ಕ್ರಿಕೆಟರ್ಸ್​​​​ ಫಿಟ್ನೆಸ್​​ ವಿಷಯದಲ್ಲಿ ಉತ್ತಮವಾಗಲು ಮತ್ತು ಕಠಿಣ ಸ್ಪರ್ಧೆ ನೀಡಲು ಸಹಾಯವಾಗುತ್ತದೆ ಎಂದು ಮಾಜಿ ಕೋಚ್​​​​ ಡಬ್ಲ್ಯೂ.ವಿ. ರಾಮನ್​ ಅಭಿಪ್ರಾಯಪಟ್ಟಿದ್ದಾರೆ.

ಹೆಚ್ಚು ಟೆಸ್ಟ್​ ಆಡುವುದರಿಂದ ಮಹಿಳಾ ಕ್ರಿಕೆಟರ್ಸ್​ಗೆ ಆಟದ ಕಠಿಣ ಸ್ವರೂಪ ಹಾಗೂ ಆಡುವ ಅವಕಾಶ ನೀಡುತ್ತದೆ. ಈ ಹಿಂದಿನಿಗಿಂತಲೂ ಉತ್ತಮವಾಗಿ ಪ್ರದರ್ಶನ ನೀಡಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.

ಇಂಡಿಯಾ ಮಹಿಳಾ ತಂಡ

ಕ್ರಿಕೆಟ್​ ವೆಬ್​ಸೈಟ್​ಗೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಹಿಳಾ ತಂಡದ ಮಾಜಿ ಕೋಚ್​, ನಿಯಮಿತವಾಗಿ ಆಡುವುದರಿಂದ ಅವಕಾಶಗಳು ಸಿಗುತ್ತವೆ. ನಾಲ್ಕು ಅಥವಾ ಐದು ದಿನಗಳ ಕಾಲ ಕಠಿಣ ಕ್ರಿಕೆಟ್​ ಆಡುವುದು ಅಷ್ಟೊಂದು ಸುಲಭವಲ್ಲ. ಆದರೆ ಹೆಚ್ಚಿನ ಟೆಸ್ಟ್​ ಪಂದ್ಯಗಳಲ್ಲಿ ಭಾಗಿಯಾಗುವುದರಿಂದ ಅವರು ಮತ್ತಷ್ಟು ಗಟ್ಟಿಗೊಳ್ಳುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ನಾನು ಕಾಯುತ್ತೇನೆ; WTC ಫೈನಲ್​ನಲ್ಲಿ ಪಂತ್​​ ವಿಕೆಟ್​ ಕೀಪರ್​ ಆಗಲಿ: ವೃದ್ಧಿಮಾನ್​

ಭಾರತ ಮಹಿಳಾ ತಂಡ ಜೂನ್​ 16ರಿಂದ ಇಂಗ್ಲೆಂಡ್​ ವಿರುದ್ಧ ಟೆಸ್ಟ್​ ಪಂದ್ಯದಲ್ಲಿ ಭಾಗಿಯಾಗಲಿದ್ದು, 2014ರ ನಂತರ ಇದು ಮೊದಲ ಟೆಸ್ಟ್​ ಪಂದ್ಯವಾಗಲಿದೆ. ಇದಾದ ಬಳಿಕ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸೆಪ್ಟೆಂಬರ್​ - ಅಕ್ಟೋಬರ್​ ತಿಂಗಳಲ್ಲಿ ಹಗಲು -ರಾತ್ರಿ ಟೆಸ್ಟ್​​​ ಪಂದ್ಯದಲ್ಲಿ ತಂಡ ಭಾಗಿಯಾಲಿದೆ.

ಮಹಿಳಾ ತಂಡದ ಕೋಚ್​ ಆಗಿದ್ದ ರಾಮನ್​ ಅವರ ಸ್ಥಾನಕ್ಕೆ ಇದೀಗ ರಮೇಶ್ ಪವಾರ್ ಆಯ್ಕೆಯಾಗಿದ್ದು, ಫೀಲ್ಡಿಂಗ್ ಕೋಚ್​ ಆಗಿ ಅಭಯ್ ಶರ್ಮಾ ಆಯ್ಕೆಯಾಗಿದ್ದಾರೆ.

ABOUT THE AUTHOR

...view details