ಕರ್ನಾಟಕ

karnataka

ETV Bharat / sports

ಅತಿ ಕಡಿಮೆ ಎಸೆತಗಳಲ್ಲಿ 200 ವಿಕೆಟ್ ಪಡೆದು ದಾಖಲೆ ಬರೆದ ಮೊಹಮ್ಮದ್ ಶಮಿ

Mohammed Shami completes 200 Test wickets: ಈ ಮೂಲಕ ಭಾರತದ ಪರ ಮೊಹಮ್ಮದ್ ಶಮಿ 200 ವಿಕೆಟ್ ಪಡೆದ 11ನೇ ಬೌಲರ್ ಮತ್ತು 5ನೇ ವೇಗದ ಬೌಲರ್​ ಎನಿಸಿಕೊಂಡಿದ್ದಾರೆ. ಭಾರತದ ಪರ ಕಪಿಲ್ ದೇವ್​(434), ಇಶಾಂತ್ ಶರ್ಮಾ(311), ಜಹೀರ್​ ಖಾನ್(311) ಜಾವಗಲ್ ಶ್ರೀನಾಥ್(236) ಹೆಚ್ಚು ವಿಕೆಟ್ ಪಡೆದಿರುವ ವೇಗದ ಬೌಲರ್​ಗಳಾಗಿದ್ದಾರೆ.

Mohammed Shami complete 200 Test wickets against South Africa
ಮೊಹಮ್ಮದ್ ಶಮಿ 200 ವಿಕೆಟ್ಸ್

By

Published : Dec 28, 2021, 10:20 PM IST

ಸೆಂಚುರಿಯನ್​: ಭಾರತ ತಂಡದ ವೇಗಿ ಮೊಹಮ್ಮದ್ ಶಮಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ 5 ವಿಕೆಟ್ ಪಡೆಯುವ ಮೂಲಕ ದೀರ್ಘ ಮಾದರಿಯ ಕ್ರಿಕೆಟ್​ನಲ್ಲಿ 200 ವಿಕೆಟ್ ಪೂರ್ಣಗೊಳಿಸಿದ್ದಾರೆ. ಅಲ್ಲದೆ ಅತಿ ಕಡಿಮೆ ಎಸೆತದಲ್ಲಿ ಈ ಸಾಧನೆ ಮಾಡಿದ ಭಾರತೀಯ ಬೌಲರ್ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ.

ಮೊಹಮ್ಮದ್ ಶಮಿ ಈ ಪಂದ್ಯದಲ್ಲಿ ಐಡೆನ್ ಮಾರ್ಕ್ರಮ್(13)​, ಕೀಗನ್ ಪೀಟರ್ಸನ್(15)​, ಟೆಂಬ ಬವೂಮ(52), ವಿಯಾನ್ ಮಲ್ಡರ್​(12) ಮತ್ತು ಕಗಿಸೊ ರಬಾಡ(25) ವಿಕೆಟ್ ಪಡೆದರು.

ಈ ಮೂಲಕ ಭಾರತದ ಪರ 200 ವಿಕೆಟ್ ಪಡೆದ 11ನೇ ಬೌಲರ್ ಮತ್ತು 5ನೇ ವೇಗದ ಬೌಲರ್​ ಎನಿಸಿಕೊಂಡರು. ಭಾರತದ ಪರ ಕಪಿಲ್ ದೇವ್​(434), ಇಶಾಂತ್ ಶರ್ಮಾ(311), ಜಹೀರ್​ ಖಾನ್(311) ಜಾವಗಲ್ ಶ್ರೀನಾಥ್(236) ಶಮಿಗಿಂತ ಹೆಚ್ಚು ವಿಕೆಟ್ ಪಡೆದಿರುವ ವೇಗದ ಬೌಲರ್​ಗಳಾಗಿದ್ದಾರೆ.

ಅತ್ಯಂತ ಕಡಿಮೆ ಎಸೆತಗಳಲ್ಲಿ 200 ವಿಕೆಟ್..

ಶಮಿ 9896 ಎಸೆತಗಳಲ್ಲಿ 200 ವಿಕೆಟ್ ಪಡೆಯುವ ಮೂಲಕ ಭಾರತದ ಪರ ಅತ್ಯಂತ ಕಡಿಮೆ ಎಸೆತಗಳಲ್ಲಿ 200 ವಿಕೆಟ್ ಪಡೆದ ಭಾರತದ ಬೌಲರ್ ಎನಿಸಿಕೊಡರು. ರವಿಚಂದ್ರನ್ ಅಶ್ವಿನ್​ 10,248, ಕಪಿಲ್ ದೇವ್​ 11,066, ರವೀಂದ್ರ ಜಡೇಜಾ 11,989 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಇದರ ಜೊತೆಗೆ ಶಮಿ ವೇಗವಾಗಿ 200 ವಿಕೆಟ್​ ಪಡೆದ ಭಾರತದ 3ನೇ ವೇಗದ ಬೌಲರ್ ಎನಿಸಿಕೊಂಡರು. ಅವರು 55 ಪಂದ್ಯಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ್ದಾರೆ. ಕಪಿಲ್ ದೇವ್​ 50, ಜಾವಗಲ್ ಶ್ರೀನಾಥ್​ 54 ಪಂದ್ಯಗಳಲ್ಲಿ 200 ವಿಕೆಟ್ ಪಡೆದಿದ್ದರು. ಒಟ್ಟಾರೆ ರವಿಚಂದ್ರನ್ ಅಶ್ವಿನ್​ 37 ಪಂದ್ಯಗಳಲ್ಲಿ ಈ ಸಾಧನೆ ಮಾಡಿ ಅಗ್ರ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ:ಟೆಸ್ಟ್​ ಕ್ರಿಕೆಟ್​ನಲ್ಲಿ ವೇಗವಾಗಿ 100 ವಿಕೆಟ್​ ಪಡೆದು ಧೋನಿ ದಾಖಲೆ ಉಡೀಸ್ ಮಾಡಿದ ಪಂತ್

ABOUT THE AUTHOR

...view details