ಢಾಕಾ :ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ವೇಳೆ ಆಫ್ಘಾನಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ಶಹಜಾದ್ ಮೈದಾನದಲ್ಲಿ ಸಿಗರೇಟ್ ಸೇಯುವ ಮೂಲಕ ಕ್ರಿಕೆಟ್ ವಯಲದಲ್ಲಿ ಚರ್ಚೆಗೀಡಾಗಿದ್ದು, ಫೋಟೋ ವೈರಲ್ ಆಗುತ್ತಿದ್ದಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯಿಂದ ಛೀಮಾರಿಗೊಳಗಾಗಿದ್ದಾರೆ.
ಶನಿವಾರ ಬಿಪಿಎಲ್ ವೇಳೆ ಮಳೆ ಕಾರಣ ಪಂದ್ಯ ಆರಂಭ ತಡವಾಗಿತ್ತು. ಈ ವೇಳೆ ಮೈದಾನದಕ್ಕೆ ಇತರೆ ಆಟಗಾರರ ಜೊತೆ ಆಗಮಿಸಿದ್ದ ಆಫ್ಘಾನ್ ಬ್ಯಾಟರ್ ಸಿಗರೇಟ್ ಸೇದಿದ್ದರು. ಈ ಫೋಟೋ ಹಲವು ಸಾಮಾಜಿಕ ಜಾಲಾತಾಣದಲ್ಲಿ ಚರ್ಚೆಯಾಗಿತ್ತು. ಮೈದಾನದಲ್ಲಿ ಧೂಮಪಾನ ಮಾಡುವ ಮೂಲಕ ಬಿಸಿಬಿ ನೀತಿ ಸಂಹಿತೆ ಆರ್ಟಿಕಲ್ 2.20 ಅನ್ನು ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿತ್ತು.
"ಮೈದಾನದಲ್ಲಿ ಧೂಮಪಾನ ಮಾಡುವುದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಮೈದಾನದಲ್ಲಿ ಧೂಮಪಾನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದು ಸ್ವೀಕಾರಾರ್ಹವಲ್ಲ, ಇದರ ಬಗ್ಗೆ ಅವರಿಗೆ ಯಾವುದೇ ಅರಿವಿಲ್ಲದಿದ್ದರೆ ಪಂದ್ಯದ ಅಧಿಕಾರಿಗಳು ಅವರಿಗೆ ಎಚ್ಚರಿಕೆ ನೀಡಬೇಕಾಗಿದೆ" ಎಂದು ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್ ತಿಳಿಸಿದ್ದಾರೆ.
ಶಹಜಾದ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಬಿಸಿಬಿ ನೀತಿ ಸಂಹಿತೆಯ ಆರ್ಟಿಕಲ್ 2.20 ಅನ್ನು ಆಫ್ಘಾನ್ ಬ್ಯಾಟರ್ ಉಲ್ಲಂಘಿಸಿರುವುದರಿಂದ ಆತನ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಅಂಕವನ್ನು ಸೇರಿಸಲಾಗುವುದು ಎಂದು ಹೇಳಿಕೆಯಲ್ಲಿ ಬಿಸಿಬಿ ತಿಳಿಸಿದೆ.
ಇದನ್ನೂ ಓದಿ:ವಿಶ್ವಕಪ್ ಗೆಲ್ಲಬೇಕಾದ್ರೆ ಮಧ್ಯಮ ಕ್ರಮಾಂಕಕ್ಕೆ ಸ್ಫೋಟಕ ಬ್ಯಾಟರ್ಗಳ ಆಯ್ಕೆ ಅಗತ್ಯ : ಅಜಿತ್ ಅಗರ್ಕರ್