ಹೈದರಾಬಾದ್: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್ ಅವರನ್ನು ಬಿಸಿಸಿಐ ಕಾರ್ಯಕಾರಣಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.
ಕೆಲವು ದಿನಗಳ ಹಿಂದೆ ಭ್ರಷ್ಟಾಚಾರ ಆರೋಪದಡಿ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ವಜಾಗೊಂಡು ಮತ್ತೆ ಮರುನೇಮಕಗೊಂಡಿದ್ದ ಅಜರುದ್ದೀನ್‌ಗೆ ಈ ಹುದ್ದೆ ನೀಡಲಾಗಿದೆ. ಒಟ್ಟು 7 ಸದಸ್ಯರು ಬಿಸಿಸಿಐ ಕಾರ್ಯಕಾರಣಿ ಸಮಿತಿಯಲ್ಲಿದ್ದಾರೆ. ಜಯದೇವ್ ಷಾ, ರೋಹನ್ ಜೇಟ್ಲಿ, ಯುಧ್ವೀರ್ ಸಿಂಗ್, ದೇವಾಜಿತ್ ಸೈಕಿಯಾ, ಅವಿಶೇಕ್ ದಾಲ್ಮಿಯಾ ಮತ್ತು ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಸಂತೋಷ್ ಮೆನನ್ ಹಾಗೂ ಮೊಹಮ್ಮದ್ ಅಜರುದ್ದೀನ್ ಈ ಸಮಿತಿಯಲ್ಲಿದ್ದಾರೆ.