ಕರ್ನಾಟಕ

karnataka

ETV Bharat / sports

'ಚೀಫ್​​ ಸೆಲೆಕ್ಟರ್​​​​​​​​ ಕೀ ಚೀಪ್​​ ಸೆಲೆಕ್ಷನ್​​...' ವಿಶ್ವಕಪ್​​​ಗೆ ಪಾಕ್​ ತಂಡದ ಆಯ್ಕೆ ಬಗ್ಗೆ ಅಮೀರ್​ ವ್ಯಂಗ್ಯ - ಈಟಿವಿ ಭಾರತ ಕರ್ನಾಟಕ

ಟಿ20 ವಿಶ್ವಕಪ್​​ ಟೂರ್ನಿಗೋಸ್ಕರ ಪಾಕಿಸ್ತಾನ​ ತಂಡ ಪ್ರಕಟಗೊಂಡಿದೆ. ಈ ವಿಚಾರವಾಗಿ ಮಾಜಿ ವೇಗದ ಬೌಲರ್​ ಮೊಹಮ್ಮದ್ ಅಮೀರ್​ ವ್ಯಂಗ್ಯವಾಡಿದ್ದಾರೆ.

Mohammad Amir
Mohammad Amir

By

Published : Sep 16, 2022, 10:57 AM IST

ಕರಾಚಿ(ಪಾಕಿಸ್ತಾನ):ಕಾಂಗರೂ ನಾಡಲ್ಲಿ ಆರಂಭಗೊಳ್ಳಲಿರುವ ಐಸಿಸಿ ಟಿ20 ವಿಶ್ವಕಪ್​ ಟೂರ್ನಮೆಂಟ್​​ಗೋಸ್ಕರ ಬಹುತೇಕ ಎಲ್ಲ ತಂಡಗಳೂ ಆಯ್ಕೆಯಾಗಿವೆ. ಪಾಕಿಸ್ತಾನ​ ಕ್ರಿಕೆಟ್ ಮಂಡಳಿಯೂ ಕೂಡ ನಿನ್ನೆ 15 ಸದಸ್ಯರನ್ನೊಳಗೊಂಡ ತಂಡವನ್ನು ಆಯ್ಕೆ ಮಾಡಿದೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಪಾಕಿಸ್ತಾನದ ಮಾಜಿ ಬೌಲರ್​ ಮೊಹಮ್ಮದ್ ಅಮೀರ್,​​​ ಮುಖ್ಯ ಆಯ್ಕೆಗಾರರ ಬಗ್ಗೆ ವ್ಯಂಗ್ಯವಾಗಿ ಟೀಕಿಸಿದ್ದಾರೆ.

ಮುಖ್ಯ ಆಯ್ಕೆದಾರ ಸಮಿತಿಯ ಅಗ್ಗದ ಆಯ್ಕೆ ಇದಾಗಿದೆ ಎಂದು ಮೊಹಮ್ಮದ್ ಅಮೀರ್​ ಟ್ವೀಟರ್​ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾನ್ ಮಸೂದ್​ ಹಾಗೂ ಶಾಹೀನ್ ಆಫ್ರಿದಿ ಹೊರತಾಗಿ ಆಯ್ಕೆ ಮಂಡಳಿ ಬಹುತೇಕ ಏಷ್ಯಾ ಕಪ್​​ನಲ್ಲಿ ಕಣಕ್ಕಿಳಿದಿದ್ದ ತಂಡಕ್ಕೆ ಮಣೆ ಹಾಕಿದೆ. ಅನುಭವಿ ಆಟಗಾರರಾದ ಸರ್ಫರಾಜ್​ ಅಹ್ಮದ್​, ಶೋಯೆಬ್​ ಮಲಿಕ್​, ಮುಹಮ್ಮದ್ ವಾಸೀಂ ಅವರನ್ನು ನಿರ್ಲಕ್ಷ್ಯಿಸಲಾಗಿದೆ. ಹೀಗಾಗಿ, ಮೊಹಮ್ಮದ್ ಅಮೀರ್​ ಗೇಲಿ ಮಾಡಿದ್ದಾರೆ.

ಏಷ್ಯಾ ಕಪ್​​ನಲ್ಲಿ ಭಾಗಿಯಾಗಿದ್ದ ಪಾಕಿಸ್ತಾನ ಮಧ್ಯಮ ಕ್ರಮಾಂಕದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಇದರಲ್ಲಿ ಬಹುತೇಕ ಎಲ್ಲ ಬ್ಯಾಟರ್​​ಗಳು ವಿಫಲರಾಗಿದ್ದರು. ಹೀಗಾಗಿ, ವಿಶ್ವಕಪ್​​ಗೋಸ್ಕರ ಕೆಲ ಬದಲಾವಣೆಗಳಾಗುವ ಸಾಧ್ಯತೆಯನ್ನು ವ್ಯಕ್ತಪಡಿಸಲಾಗಿತ್ತು. ಆದರೆ, ಆಯ್ಕೆ ಸಮಿತಿ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ.

ಪಾಕ್​ ಕ್ರಿಕೆಟ್ ತಂಡ ಹೀಗಿದೆ: ಬಾಬರ್ ಆಜಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಹೈದರ್ ಅಲಿ, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ಹಸ್ನೇನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಮ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ, ಶಾನ್​​ ಮಸೂದ್ ಮತ್ತು ಉಸ್ಮಾನ್ ಖಾದಿರ್

ಮೀಸಲು ಆಟಗಾರರು:ಫಖರ್ ಜಮಾನ್, ಮೊಹಮ್ಮದ್ ಹ್ಯಾರಿಸ್ ಮತ್ತು ಶಹನವಾಜ್ ದಹಾನಿ

ABOUT THE AUTHOR

...view details