ಕರ್ನಾಟಕ

karnataka

ETV Bharat / sports

ವಿರಾಟ್​ ಕೊಹ್ಲಿಯ 100 ಟೆಸ್ಟ್ ಬೆಂಗಳೂರಿನ ಬದಲು ಮೊಹಾಲಿಯಲ್ಲಿ ನಡೆಯುವ ಸಾಧ್ಯತೆ? - India vs Sri Lanka test

ಲಖನೌದಲ್ಲಿ ಮೊದಲ ಫೆಬ್ರವರಿ 24ರಲ್ಲಿ ಟಿ-20 ಪಂದ್ಯದ ಮೂಲಕ ಪ್ರವಾಸ ಆರಂಭವಾಗಲಿದೆ. ಉತ್ತರಪ್ರದೇಶ ಕ್ರಿಕೆಟ್​ ಅಸೋಸಿಯೇಷನ್​ ಆತಿಥ್ಯ ವಹಿಸಲಿದೆ. ನಂತರ ಫೆಬ್ರವರಿ 26 ಮತ್ತು 27 ರಂದು ಧರ್ಮಶಾಲಾದಲ್ಲಿ ಎರಡು ಟಿ-20 ಪಂದ್ಯಗಳು ನಡೆಯಲಿವೆ. HPCA ಮತ್ತು UPCA ಮಂಡಳಿಗಳು ವೇಳಾಪಟ್ಟಿಯನ್ನು ಖಚಿತಪಡಿಸಿವೆ.

Mohali set to host Kohli's 100th Test; Sri Lanka series to kick off with T20Is
ವಿರಾಟ್​ ಕೊಹ್ಲಿ 100ನೇ ಟೆಸ್ಟ್​ ಪಂದ್ಯ

By

Published : Feb 8, 2022, 5:02 PM IST

ಮುಂಬೈ: ಭಾರತ ತಂಡದ ಮಾಜಿ ನಾಯಕ ವಿರಾಟ್​​ ಕೊಹ್ಲಿ ಅವರ 100ನೇ ಟೆಸ್ಟ್​ ಪಂದ್ಯ ಮೊಹಾಲಿಯ ಪಂಜಾಬ್ ಕ್ರಿಕೆಟ್​ ಅಸೋಸಿಯೇಷನ್​ ಸ್ಟೇಡಿಯಂನಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಇದೇ ತಿಂಗಳು ಶ್ರೀಲಂಕಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, ಮೊದಲಿನ ವೇಳಾಪಟ್ಟಿಯಂತೆ ಟೆಸ್ಟ್​ ಸರಣಿಯ ನಂತರ ಟಿ-20 ಸರಣಿ ನಡೆಯಬೇಕಾಗಿತ್ತು. ಆದರೆ, ಪ್ರಸ್ತುತ ವೇಳಾಪಟ್ಟಿ ಉಲ್ಟಾ ಆಗಿದ್ದು, ಮೊದಲು ಟಿ-20 ಮತ್ತು ನಂತರ ಟೆಸ್ಟ್​ ಸರಣಿ ನಡೆಯಲಿದೆ. ಹಾಗಾಗಿ ಮೊದಲ ಟೆಸ್ಟ್​ ಬದಲಾಗಿ ಕೊನೆಯ ಡೇ ಅಂಡರ್​ ನೈಟ್​ ಟೆಸ್ಟ್​ ಪಂದ್ಯ ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಲಖನೌದಲ್ಲಿ ಮೊದಲ ಫೆಬ್ರವರಿ 24ರಲ್ಲಿ ಟಿ-20 ಪಂದ್ಯದ ಮೂಲಕ ಪ್ರವಾಸ ಆರಂಭವಾಗಲಿದೆ. ಉತ್ತರಪ್ರದೇಶ ಕ್ರಿಕೆಟ್​ ಅಸೋಸಿಯೇಷನ್​ ಆತಿಥ್ಯವಹಿಸಲಿದೆ. ನಂತರ ಫೆಬ್ರವರಿ 26 ಮತ್ತು 27 ರಂದು ಧರ್ಮಶಾಲದಲ್ಲಿ ಎರಡು ಟಿ-20 ಪಂದ್ಯಗಳು ನಡೆಯಲಿವೆ. HPCA ಮತ್ತು UPCA ಮಂಡಳಿಗಳು ವೇಳಾಪಟ್ಟಿಯನ್ನು ಖಚಿತಪಡಿಸಿವೆ.

ಇನ್ನು ಧರ್ಮಶಾಲಾದಿಂದ ತಂಡಗಳು ನೇರವಾಗಿ ಮೊಹಾಲಿಗೆ ತೆರಳಲಿದ್ದು, ಮಾರ್ಚ್​ 3-7ರವರೆಗೆ ಮೊದಲ ಟೆಸ್ಟ್​ ಪಂದ್ಯವನ್ನು ಆಡಲಿವೆ. ಬಿಸಿಸಿಐ ಕೊನೆಯ ಕ್ಷಣದಲ್ಲಿ ಏನಾದರೂ ಟ್ವಿಸ್ಟ್ ಮಾಡದಿದ್ದರೆ ಇದು ವಿರಾಟ್​ ಕೊಹ್ಲಿ ಅವರ 100ನೇ ಟೆಸ್ಟ್​ ಪಂದ್ಯವಾಗಲಿದೆ. ನಂತರ ಬೆಂಗಳೂರಿನಲ್ಲಿ ಮಾರ್ಚ್​ 12ರಿಂದ 16ರವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 2ನೇ ಟೆಸ್ಟ್​ ಪಂದ್ಯ ನಡೆಯಲಿದೆ. ಇದು ಡೇ ಅಂಡ್​ ನೈಟ್​ ಟೆಸ್ಟ್​ ಪಂದ್ಯವಾಗಿದೆ. ಆದರೆ, ಇದರ ಬಗ್ಗೆ ಕರ್ನಾಟಕ ಕ್ರಿಕೆಟ್​ ಅಸೋಸಿಯೇಷನ್​ ಅಥವಾ ಬಿಸಿಸಿಐ ಇನ್ನೂ ಖಚಿತ ಪಡಿಸಿಲ್ಲ.

ಡೇ ಅಂಡ್​ ನೈಟ್​ ಟೆಸ್ಟ್​ ಎನ್ನುವುದರ ಬಗ್ಗೆ ನಮಗೆ ಮಾಹಿತಿಯಿಲ್ಲ, ಮಾರ್ಚ್​ 12ರಿಂದ 16ರವರೆಗೆ ಪಂದ್ಯ ನಡೆಯಲಿದೆ ಎಂದಷ್ಟೇ ನಮಗೆ ತಿಳಿಸಲಾಗಿದೆ ಎಂದು ಕೆಎಸ್​ಸಿಎ ತಿಳಿಸಿದೆ, ರಾಜ್ಯ ಅಸೋಸಿಯೇಷನ್​ ಬಿಸಿಸಿಐನಿಂದ ಅಧಿಕೃತ ಸೂಚನೆಗಾಗಿ ಕಾಯುತ್ತಿರುವುದಾಗಿ ಮಾಹಿತಿ ನೀಡಿದೆ.

ಇದನ್ನೂ ಓದಿ:ರೋಹಿತ್ ಅಥವಾ ಬೇರೆಯವರ ನಾಯಕತ್ವದಲ್ಲೂ ಕೊಹ್ಲಿ ರನ್​ ಮಳೆ ಸುರಿಸುತ್ತಾರೆ: ಗವಾಸ್ಕರ್ ವಿಶ್ವಾಸ

ABOUT THE AUTHOR

...view details