ಲಂಡನ್: ಭಾರತದ ವಿರುದ್ಧ ಗುರುವಾರದಿಂದ ಆರಂಭವಾಗಲಿರುವ 4ನೇ ಟೆಸ್ಟ್ ಪಂದ್ಯಕ್ಕೆ ಜೋಸ್ ಬಟ್ಲರ್ ಅನುಪಸ್ಥಿತಿಯಲ್ಲಿ ಆಲ್ರೌಂಡರ್ ಮೊಯೀನ್ ಅಲಿ ಇಂಗ್ಲೆಂಡ್ ತಂಡದ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.
ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಜೋಸ್ ಬಟ್ಲರ್ ಪಿತೃತ್ವ ರಜೆ ತೆಗೆದಕೊಂಡು ಸರಣಿಯಿಂದ ಹಿಂದೆ ಸರಿದ ನಂತರ ಮೊಯೀನ್ ಅಲಿಯನ್ನು ಇಸಿಬಿ ಉಳಿದ ಎರಡು ಟೆಸ್ಟ್ ಪಂದ್ಯಗಳಿಗೆ ಉಪನಾಯಕನಾಗಿ ಆಯ್ಕೆ ಮಾಡಿದೆ. 34 ವರ್ಷದ ಮೊಯೀನ್ ಅಲಿ ಇಂಗ್ಲೆಂಡ್ ಪರ 63 ಟೆಸ್ಟ್ ಪಂದ್ಯಗಳನ್ನಾಡಿದ್ದು, 5 ಶತಕಗಳ ಸಹಿತ 2879 ರನ್ ಮತ್ತು 193 ವಿಕೆಟ್ ವಿಕೆಟ್ ಪಡೆದಿದ್ದಾರೆ. 5 ಬಾರಿ 5 ವಿಕೆಟ್ ಪಡೆದಿದ್ದಾರೆ.