ಕರ್ನಾಟಕ

karnataka

ETV Bharat / sports

ಪಾಕಿಸ್ತಾನದ ವಿರುದ್ಧ ಜಯಗಳಿಸಿದ ಭಾರತಕ್ಕೆ ಅಭಿನಂದಿಸಿದ ಮೋದಿ, ರಾಹುಲ್​ - ಈಟಿವಿ ಭಾರತ್​ ಕನ್ನಡ

ಏಷ್ಯಾ ಕಪ್​ ಪಂದ್ಯದಲ್ಲಿ ಭಾರತ ಜಯಗಳಿಸಿದ್ದಕ್ಕೆ ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್​ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

Modi and Rahul Gandhi congratulated India for victory over Pakistan
ಅಭಿನಂದಿಸಿದ ಮೋದಿ, ರಾಹುಲ್​

By

Published : Aug 29, 2022, 7:30 AM IST

ನವದೆಹಲಿ:ಪಾಕಿಸ್ತಾನ ಬಿಗಿ ಬೌಲಿಂಗ್​ಗೆ ಸಾಂಘಿಕ ಹೋರಾಟ ನಡೆಸಿ ಭಾರತ ತಂಡ ಜಯಗಳಿಸಿದ್ದು, ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್​ ಮಾಡಿ ಅಭಿನಂದಿಸಿದ್ದಾರೆ. ಟಾಸ್​ ಗೆದ್ದು ಬೌಲಿಂಗ್​ ಆಯ್ದು 147ರನ್​ಗೆ ಪಾಕಿಸ್ತಾನ ತಂಡವನ್ನು ಭಾರತೀಯ ವೇಗಿಗಳು ಕಟ್ಟಿಹಾಕಿದರು. ಭಾರತಕ್ಕೆ ವಿರಾಟ್​ ಕೊಹ್ಲಿ, ರವೀಂದ್ರ ಜಡೇಜಾ ಮತ್ತು ಹಾರ್ದಿಕ್​ ಪಾಂಡ್ಯರ ಜವಾಬ್ದಾರಿಯುತ ಆಟ 5ವಿಕೆಟ್​ಗಳ ಜಯಕ್ಕೆ ಕಾರಣವಾಯಿತು.

‘ಇಂದಿನ ಏಷ್ಯಾ ಕಪ್ 2022 ಪಂದ್ಯದಲ್ಲಿ ಟೀಂ ಇಂಡಿಯಾ ಅದ್ಭುತ ಆಲ್ ರೌಂಡ್ ಪ್ರದರ್ಶನ ನೀಡಿದೆ. ತಂಡವು ಅತ್ಯುತ್ತಮ ಕೌಶಲ್ಯ ಮತ್ತು ಶಕ್ತಿ ಪ್ರದರ್ಶಿಸಿದೆ. ಗೆಲುವಿಗಾಗಿ ಅಭಿನಂದನೆಗಳು’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಾಂಪ್ರದಾಯಿಕ ಎದುರಾಳಿಗಳನ್ನು ಸೋಲಿಸಿದ ನಂತರ ಭಾರತ ಕ್ರಿಕೆಟ್ ತಂಡದ ಪ್ರದರ್ಶನವನ್ನು ಭಾನುವಾರ ಶ್ಲಾಘಿಸಿದ್ದಾರೆ. ರಾಹುಲ್​ ಗಾಂಧಿ ‘ಭಾರತ ತಂಡ ಉತ್ತಮವಾಗಿ ಆಡಿದೆ ಇದೊಂದು ರೋಚಕ ಪಂದ್ಯವಾಗಿತ್ತು. ಕ್ರೀಡೆಯ ಸೌಂದರ್ಯ ಎಂದರೆ ಅದು ದೇಶವನ್ನು ಹೇಗೆ ಪ್ರೇರೇಪಿಸುತ್ತದೆ ಮತ್ತು ಒಂದುಗೂಡಿಸುತ್ತದೆ - ಅತ್ಯಂತ ಸಂತೋಷ ಮತ್ತು ಹೆಮ್ಮೆಯ ಭಾವನೆಯೊಂದಿಗೆ.’ಎಂದು ಟ್ವೀಟ್​ ಮಾಡಿದ್ದಾರೆ.

ಹುರ್ರೇ! ನಾವು ಗೆದ್ದಿದ್ದೇವೆ. ಅದ್ಬುತ ಪ್ರದರ್ಶನಕ್ಕಾಗಿ ಮತ್ತು ಜಯಗಳಿಸಿದ ಟೀಮ್ ಇಂಡಿಯಾಕ್ಕೆ ಅಭಿನಂದನೆಗಳು. ಉತ್ತಮವಾಗಿ ಆಡಿದ್ದೀರಿ ಬ್ಲೂ ಬಾಯ್ಸ್​ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ :Asia Cup 2022: ಪಾಕ್​ ವಿರುದ್ಧ ಅಬ್ಬರಿಸಿದ ಪಾಂಡ್ಯ.. ವಿಶ್ವಕಪ್​ ಸೋಲಿಗೆ ಸೇಡು ತೀರಿಸಿಕೊಂಡ ಭಾರತ

ABOUT THE AUTHOR

...view details