ಡೆಹ್ರಾಡೂನ್ (ಉತ್ತರಾಖಂಡ): ವಿಶ್ವಕಪ್ ಸೆಮೀಸ್ನಲ್ಲಿ 7 ವಿಕೆಟ್ ಪಡೆದು ಮಿಂಚಿದ ಶಮಿ ದೇಶಕ್ಕೆ ಈಗ ಸೂಪರ್ ಸ್ಟಾರ್ ಇದ್ದಂತೆ. ಅವರ ಬೌಲಿಂಗ್ ಪ್ರದರ್ಶನಕ್ಕೆ ದೇಶದ ಮೂಲೆ ಮೂಲೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಮೊಹಮ್ಮದ್ ಶಮಿಯ ಒಳಗಿನ ನೋವು ಹೆಚ್ಚಿನವರಿಗೆ ತಿಳಿದಿಲ್ಲ. ಮೊಹಮ್ಮದ್ ಶಮಿ ವಿವಾದಗಳ ಜಾಲದಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಅವರ ಮೇಲೆ ಅವರ ಪತ್ನಿಯಿಂದ ದೇಶದ್ರೋಹದ ಆರೋಪ ಮಾತ್ರವಲ್ಲದೆ, ಕೌಟುಂಬಿಕ ಕಲಹಗಳು ಅವರನ್ನು ಇನ್ನೂ ಕಾಡಿದ್ದವು.
ಜೀವನದ ಈ ಎಲ್ಲ ಬಿರುಗಾಳಿಗಳ ವಿರುದ್ಧ ಹೋರಾಡುತ್ತಿರುವ ಮೊಹಮ್ಮದ್ ಶಮಿ 2023ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತದ ಹೆಮ್ಮೆಯಾಗಿ ಉಳಿದಿದ್ದಾರೆ. ಈ ಎಲ್ಲ ವಿವಾದಗಳನ್ನು ಬದಿಗಿಟ್ಟು, ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ನ 7 ವಿಕೆಟ್‌ಗಳನ್ನು ಕಬಳಿಸಿ ಭಾರತಕ್ಕೆ ಫೈನಲ್ ದಾರಿ ತೋರಿದರು. ಶಮಿಯ ಆ ಬೌಲಿಂಗ್ ಪ್ರದರ್ಶನ ಮುಂಬೈನಲ್ಲಿ ಬಾರದಿದ್ದರೆ, 2019 ವಿಶ್ವಕಪ್ ರೀತಿಯಲ್ಲೇ ಟೀಮ್ ಇಂಡಿಯಾ ಸೆಮೀಸ್ನಿಂದ ಹೊಗುಳಿಯಬೇಕಿತ್ತು.
ಮೊಹಮ್ಮದ್ ಶಮಿ ಅವರ ಆಪ್ತ ಸ್ನೇಹಿತ ಉಮೇಶ್ ಶರ್ಮಾ ಅವರ ಸಂಕಷ್ಟದ ಕಾಲದಲ್ಲಿ ಅವರೊಂದಿಗೆ ಕಳೆದ ದಿನಗಳ ಬಗ್ಗೆ ನೆನೆದಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದ ಆಟಗಾರ ಇಂದು ದೇಶವೇ ಮೆಚ್ಚುವಂತೆ ಆಡುತ್ತಿದ್ದಾನೆ. ಶಮಿ ಎಲ್ಲರಿಂದಲೂ ನಿಂದನೆಗೆ ಒಳಗಾಗುತ್ತಿದ್ದ ಸಂದರ್ಭದಲ್ಲಿ ಸ್ನೇಹಿತರಾದ ಹರಿದ್ವಾರದ ಖಾನ್‌ಪುರ ವಿಧಾನಸಭಾ ಕ್ಷೇತ್ರದ ಶಾಸಕ ಉಮೇಶ್ ಶರ್ಮಾ ಅವರ ಸಂಕಷ್ಟದ ಸಮಯದಲ್ಲಿ ಬೆಂಬಲವಾಗಿ ನಿಂತರು.
ಆ ಸಮಯದಲ್ಲಿ ಶಮಿ ಪ್ರಾಣ ಕಳೆದುಕೊಳ್ಳುತ್ತಿದ್ದರು - ಸುರೇಶ್ ರೈನಾ: ಈಟಿವಿ ಭಾರತ್ ಜೊತೆ ಮಾತನಾಡಿದ ಸುರೇಶ್ ರೈನಾ, ಶಮಿ ಇಂದು ವಿಶ್ವಕಪ್‌ನಲ್ಲಿ ಅದ್ಬುತ ಪ್ರದರ್ಶನ ನೀಡುತ್ತಿದ್ದರೆ. ಖಿನ್ನತೆಗೆ ಒಳಗಾಗದಿದ್ದವರೇ ಇಂದು ತಂಡಕ್ಕೆ ದೊಡ್ಡ ಕೊಡುಗೆ ನೀಡುತ್ತಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಅವರು ಜೀವ ಕಳೆದುಕೊಳ್ಳುವ ಚಿಂತನೆ ಮಾಡಿದ್ದರು. ಮೊಹಮ್ಮದ್ ಶಮಿ ಅವರು ತಮ್ಮ ಆಟಕ್ಕೆ ಹೇಗೆ ಹೋರಾಡುತ್ತಿದ್ದಾರೆ ಎಂದು ನಾನು ಆ ಸಮಯದಲ್ಲಿ ನೋಡಿದ್ದೇನೆ. ಆದರೆ, ಅವರ ಮಾನಸಿಕ ಸಮತೋಲನವೂ ಸರಿಯಾಗಿಲ್ಲ. ನಾನು ತಂಡಕ್ಕಾಗಿ ಏನಾದರೂ ಉತ್ತಮವಾಗಿ ಮಾಡಬೇಕು ಎಂಬ ಒಂದೇ ಒಂದು ಭರವಸೆ ಅವರಲ್ಲಿತ್ತು ಎಂದು ಸುರೇಶ್ ರೈನಾ ಹೇಳಿದ್ದಾರೆ.