ಕರ್ನಾಟಕ

karnataka

ETV Bharat / sports

ODI Rankings: ಅಗ್ರಸ್ಥಾನ ಉಳಿಸಿಕೊಂಡ ಮಿಥಾಲಿ, ಟಾಪ್​ 5ಗೆ ಮರಳಿದ ಸೆಟರ್ಥ್​​ವೈಟ್​ - ಐಸಿಸಿ ಏಕದಿನ ರ‍್ಯಾಂಕಿಂಗ್

ಮಂಗಳವಾರ ಐಸಿಸಿ ಏಕದಿನ ರ‍್ಯಾಂಕಿಂಗ್ ಬಿಡುಗಡೆ ಮಾಡಿದ್ದು, ಮಿಥಾಲಿ 762 ರೇಟಿಂಗ್ ಅಂಕಗಳೊಂದಿಗೆ ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಭಾರತದ ಆರಂಭಿಕ ಬ್ಯಾಟರ್​ ಸ್ಮೃತಿ ಮಂದಾನ 7ನೇ ಶ್ರೇಯಾಂಕದಲ್ಲಿದ್ದಾರೆ.

ODI Rankings
ಮಿಥಾಲಿ ರಾಜ್​

By

Published : Sep 21, 2021, 5:37 PM IST

ದುಬೈ: ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್​ ವಿಶ್ವ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ನ್ಯೂಜಿಲ್ಯಾಂಡ್​ನ ಸ್ಟಾರ್ ಬ್ಯಾಟರ್​ ಆ್ಯಮಿ ಸೆಟರ್ಥ್​ವೈಟ್​ ಟಾಪ್​ 5ಗೆ ಮತ್ತೆ ಮರಳಿದ್ದಾರೆ.

ಮಂಗಳವಾರ ಐಸಿಸಿ ಏಕದಿನ ರ‍್ಯಾಂಕಿಂಗ್ ಬಿಡುಗಡೆ ಮಾಡಿದ್ದು, ಮಿಥಾಲಿ 762 ರೇಟಿಂಗ್ ಅಂಕಗಳೊಂದಿಗೆ ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಭಾರತದ ಆರಂಭಿಕ ಬ್ಯಾಟರ್​ ಸ್ಮೃತಿ ಮಂದಾನ 7ನೇ ಶ್ರೇಯಾಂಕದಲ್ಲಿದ್ದಾರೆ.

ಇಂಗ್ಲೆಂಡ್ ವಿರುದ್ಧ ಅಜೇಯ 79 ರನ್​ ಸಿಡಿಸಿದ್ದ ಸೆಟರ್ಥ್​ವೈಟ್​ ಮತ್ತೆ ಟಾಪ್​ 5ಗೆ ಮರಳಿದ್ದಾರೆ. ದಕ್ಷಿಣ ಆಫ್ರಿಕಾದ ಲಿಜೆಲ್ಲೆ ಲೀ 2ನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಹೀಲಿ ಮತ್ತು ಇಂಗ್ಲೆಂಡ್​ನ ಟಮ್ಮಿ ಬ್ಬ್ಯೂಮಾಂಟ್​ 4ನೇ ಸ್ಥಾನದಲ್ಲಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ 89 ರನ್​ಗಳಿಸಿದ್ದ ಆಂಗ್ಲರ ನಾಯಕಿ ಹೀದರ್ ನೈಟ್(9) ಟಾಪ್​ 10ಗೆ ಪ್ರವೇಶಿಸಿದ್ದಾರೆ.

ಬೌಲರ್​ಗಳ ಶ್ರೇಯಾಂಕದಲ್ಲಿ ಭಾರತದ ಜೂಲನ್ ಗೋಸ್ವಾಮಿ ಒಂದು ಸ್ಥಾನ ಮೇಲೇರಿ 4ನೇ ಶ್ರೇಯಾಂಕ ಪಡೆದಿದ್ದರೆ, ಪೂನಮ್ ಯಾದವ್​ 9ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಜೆಸ್​ ಜೊನಾಸೆನ್​ ಮತ್ತು ಮೆಗನ್​ ಶೂಟ್ ಮೊದಲೆರಡು ಸ್ಥಾನ ಕಾಯ್ದುಕೊಂಡಿದ್ದಾರೆ.

ಆಲ್​ರೌಂಡರ್​ ದೀಪ್ತಿ ಶರ್ಮಾ ಒಂದು ಸ್ಥಾನ ಮೇಲೇರಿ 4ರಲ್ಲಿದ್ದರೆ, ಆಸೀಸ್​ ಸ್ಟಾರ್ ಎಲಿಸ್ ಪೆರ್ರಿ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ: ಭಾರತ - ಆಸ್ಟ್ರೇಲಿಯಾ ಏಕದಿನ ಪಂದ್ಯ: ಕ್ರಿಕೆಟ್​ ಜೀವನದಲ್ಲಿ 20 ಸಾವಿರ ರನ್ ಗಳಿಸಿ ದಾಖಲೆ ಬರೆದ ಮಿಥಾಲಿ

ABOUT THE AUTHOR

...view details