ಬೆಂಗಳೂರು:ಐಪಿಎಲ್ನ್ನು ಇನ್ನಷ್ಟೂ ಕುತೂಹಲಕಾರಿಯಾಗಿ ಮಾಡಲು ಬಿಸಿಸಿಐ ಈ ಬಾರಿಯ ಐಪಿಎಲ್ನಲ್ಲಿ ಹೊಸ ನಿಯಮವನ್ನು ಪರಿಚಯಿಸಿದೆ. ಈ ನಿಯಮದಂತೆ ಪಂದ್ಯದ ಮಧ್ಯೆ ಇಂಪ್ಯಾಕ್ಟ್ ಆಟಗಾರರನ್ನು ಆಡಿಸುವ ಅವಕಾಶ ಮಾಡಿಕೊಡಲಾಗಿದೆ. ಅದರಂತೆ ಟಾಸ್ ನಂತರವೂ ಆಡುವ 11 ರಲ್ಲಿ ಐದು ಆಟಗಾರರನ್ನು ಬದಲಾವಣೆಯ ಆಟಗಾರರಾಗಿ ಮಾಡಿಕೊಳ್ಳುವ ಅವಕಾಶ ಇದೆ.
ಬಿಸಿಸಿಐ 2023ರ ಐಪಿಎಲ್ನಲ್ಲಿ ಕೆಲ ನಿಯಮಗಳಿಗೆ ಬದಲಾವಣೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕ ಮೈಕ್ ಹೆಸ್ಸನ್ ಉತ್ತಮ ನಿಯಮ ಎಂದು ಬಣ್ಣಿಸಿದ್ದಾರೆ. ಅಲ್ಲದೇ ಇದು ಪಂದ್ಯಾವಳಿಯನ್ನು ಇನ್ನಷ್ಟೂ ಕುತೂಹಲಕಾರಿಯಾಗಿ ಮಾಡಲಿದೆ ಎಂದು ಹೇಳಿದ್ದಾರೆ.
ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಪ್ರಕಾರ, ಎಲ್ಲಾ ಹತ್ತು ತಂಡಗಳು ಟಾಸ್ ಸಮಯದಲ್ಲಿ ಆಡುವ ಹನ್ನೊಂದನ್ನು ಹೊರತುಪಡಿಸಿ ಭಾರತೀಯ ಆಟಗಾರರಾದ ಐದು ಬದಲಿ ಆಟಗಾರರನ್ನು ಗುರುತಿಸಬೇಕಾಗಿದೆ. ಹೆಸರಿಸಲಾದ ಬದಲಿಗಳಲ್ಲಿ, ಒಬ್ಬ ಆಟಗಾರನನ್ನು ಮಾತ್ರ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಬಹುದು. ಒಂದು ತಂಡವು ಇನ್ನಿಂಗ್ಸ್‌ನ ಆರಂಭದ ಮೊದಲು ಅಥವಾ ಓವರ್ ಮುಗಿದ ನಂತರ ಪ್ರಭಾವಿ ಆಟಗಾರನನ್ನು ತರಬಹುದು. ಬ್ಯಾಟರ್‌ನ ಸಂದರ್ಭದಲ್ಲಿ, ವಿಕೆಟ್ ಪತನದ ಸಮಯದಲ್ಲಿ ಬದಲಾವಣೆಯನ್ನು ಮಾಡಬಹುದು ಅಥವಾ ಬ್ಯಾಟರ್ ಪಂದ್ಯದ ನಡುವೆ ಸ್ವ ನಿವೃತ್ತಿ ಪಡೆದು ಇಂಪ್ಯಾಕ್ಟ್ ಪ್ಲೇಯರ್ಗೆ ಅವಕಾಶ ಮಾಡಿಕೊಡಬಹುದು.
ಈ ಬಗ್ಗೆ ಮಾತನಾಡಿದ ಮೈಕ್ ಹೆಸ್ಸನ್, "ಹರಾಜಿನ ಮೊದಲು ನಾವು ಇಂಪ್ಯಾಕ್ಟ್ ಪ್ಲೇಯರ್ ಪರಿಚಯಿಸುವ ಬಗ್ಗೆ ಕೇಳಲಾಗಿತ್ತು. ಅದರಂತೆ ನಿಯಮ ತಂದಿದ್ದಾರೆ. ಈ ನೀತಿಯಂತೆ ಆಲ್ರೌಂಡರ್ಗಳು ಹೆಚ್ಚು ಅವಕಾಶ ಪಡೆದುಕೊಳ್ಳಲಿದ್ದು, ಕೆಲ ತಂತ್ರಗಳನ್ನು ಪಂದ್ಯದ ನಡುವೆ ಮಾಡಲು ಸಾಧ್ಯೆತೆ ಇದೆ. ನನಗೆ ಇದು ತುಂಬಾ ಇಷ್ಟವಾಗಿದೆ. ಇದು ಸ್ವಲ್ಪ ಒಳಸಂಚು ತಂದಿದೆ ಎಂದು ನಾನು ಭಾವಿಸಿದೆ. ನೀವು ಯಾವಾಗ ಬೇಕಾದರೂ ಆಟಗಾರನನ್ನು ಪರಿಚಯಿಸಬಹುದು. ಇದು ಉತ್ತಮ ಬೆಳವಣಿಗೆಯಾಗಿದೆ. ಮೊದಲು ಬ್ಯಾಟಿಂಗ್ ಮಾಡುವ ತಂಡ ಬ್ಯಾಟರ್ನ್ನು ಈ ನಿಯಮದಡಿ ತಂದರೆ ಎದುರಾಳಿ ತಕ್ಕ ಬೌಲರ್ನ್ನು ಕಣಕ್ಕಿಳಿಸಿ ಯೋಜನೆಯನ್ನು ಅಡಿಮೇಲಾಗಿ ಮಾಡಬಹುದು. ಈ ರೀತಿಯ ಅವಕಾಶ ಪಂದ್ಯವನ್ನು ಇನ್ನಷ್ಟೂ ಕುತೂಹಲ ಮಾಡಲಿದೆ" ಎಂದು ಹೇಳಿದ್ದಾರೆ.