ಇಸ್ಲಾಮಾಬಾದ್(ಪಾಕಿಸ್ತಾನ): ಪಾಕಿಸ್ತಾನದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದ ಮಿಕ್ಕಿ ಆರ್ಥರ್ ತಂಡದ ನಿರ್ದೇಶಕರಾಗಿ ನೇಮಕಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ಈ ಬಾರಿ ಅವರು ಹೊಸ ಸೆಟ್ಅಪ್ನಲ್ಲಿ ಪಿಸಿಬಿಗೆ ಸೇರಿದ್ದಾರೆ. ಆರ್ಥರ್ ಆನ್‌ಲೈನ್ ನಿರ್ದೇಶಕರಾಗಿ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ವರದಿಗಳಲ್ಲಿ ಈ ಮಾಹಿತಿ ಮುನ್ನೆಲೆಗೆ ಬಂದಿದೆ. ಆರ್ಥರ್ ಅವರು ಈಗಾಗಲೇ ಡರ್ಬಿಶೈರ್‌ನ ಪೂರ್ಣ ಸಮಯದ ತರಬೇತುದಾರರಾಗಿ ನೇಮಕಗೊಂಡಿರುವುದರಿಂದ ರಾಷ್ಟ್ರೀಯ ತಂಡದೊಂದಿಗೆ ಆಫ್‌ಲೈನ್ ಸೆಟ್ - ಅಪ್‌ನಲ್ಲಿ ಲಭ್ಯ ಇರುವುದಿಲ್ಲ.
ನಿರ್ಗಮಿಸುವ ಪಾಕಿಸ್ತಾನದ ಕೋಚ್ ಸಕ್ಲೇನ್ ಮುಷ್ತಾಕ್ ಅವರ ಉತ್ತರಾಧಿಕಾರಿಗಾಗಿ ಪಿಸಿಬಿ ತನ್ನ ಹುಡುಕಾಟವನ್ನು ಮುಂದುವರೆಸುವುದಾಗಿ ಘೋಷಣೆ ಮಾಡಿತ್ತು. ಪಿಸಿಬಿ ಮಾಡಿರುವ ಘೋಷಣೆಯ ಮೂರು ವಾರಗಳ ಮೊದಲು ಆರ್ಥರ್ ಮತ್ತು ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ನಡುವೆ ಮಾತುಕತೆ ಮುಗಿದಿತ್ತು. ಉಭಯ ಪಕ್ಷಗಳ ಮಾತುಕತೆ ವೇಳೆ, ಆರ್ಥರ್ ಅವರು ಡರ್ಬಿಶೈರ್‌ನೊಂದಿಗೆ ದೀರ್ಘಾವಧಿಯ ಒಪ್ಪಂದವನ್ನು ಹೊಂದಿದ್ದು, ಅವರು ರದ್ದುಗೊಳಿಸಲು ಬಯಸುವುದಿಲ್ಲ ಎಂದು ತಿಳಿದಿತ್ತು.
ಎರಡೆರಡು ಹುದ್ದೆಗಳು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದರ ಕುರಿತು ಎರಡು ಪಕ್ಷಗಳು ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ. ಆದರೆ ಪಿಸಿಬಿಯ ತಾತ್ಕಾಲಿಕ ಅಧ್ಯಕ್ಷ ನಜಮ್ ಸೇಥಿ ಅವರು ಕಳೆದ ವಾರ ತಾನು ಇನ್ನೂ ಆರ್ಥರ್‌ಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಒಪ್ಪಂದವನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಮತ್ತು ಆರ್ಥರ್ ಏಪ್ರಿಲ್ 1 ರಂದು ತಂಡದ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಬಹುದಾಗಿದೆ.
ಮಾಜಿ ಪಾಕಿಸ್ತಾನಿ ಫೀಲ್ಡಿಂಗ್ ತರಬೇತುದಾರ ಮತ್ತು ಅವರ ಹೈ-ಪರ್ಫಾರ್ಮೆನ್ಸ್ ಸೆಂಟರ್‌ನ ಮಾಜಿ ನಿರ್ದೇಶಕ ಗ್ರಾಂಟ್ ಬ್ರಾಡ್‌ಬರ್ನ್ ಅವರು ತಂಡದ ಉನ್ನತ ಸಹಾಯಕ ತರಬೇತುದಾರರಾಗಿ ಸೇವೆ ಸಲ್ಲಿಸಲು ನಿರ್ಧರಿಸಿದ್ದಾರೆ. ತಂಡಕ್ಕೆ ಸಾಮಾನ್ಯವಾಗಿ ಮುಖ್ಯ ಕೋಚ್ ಇರುವುದಿಲ್ಲ.. ಆದರೆ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ಗೆ ಮೂವರು ತರಬೇತುದಾರರು ಇರುತ್ತಾರೆ.
ಇಂಗ್ಲಿಷ್ ಕೌಂಟಿ ಋತುವಿನಲ್ಲಿ ಆರ್ಥರ್ ತಂಡದೊಂದಿಗೆ ಆಳವಾಗಿ ಭಾಗವಹಿಸುವುದಿಲ್ಲ. ಉದಾಹರಣೆಗೆ ಪಾಕಿಸ್ತಾನ ಜುಲೈನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಸೆಪ್ಟೆಂಬರ್‌ನಲ್ಲಿ ಏಷ್ಯಾಕಪ್‌ಗೆ ಆತಿಥ್ಯ ವಹಿಸಲಿದೆ. ಕೌಂಟಿ ಋತುವಿನ ಮುಕ್ತಾಯದ ನಂತರ, ಆರ್ಥರ್ ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ODI ವಿಶ್ವಕಪ್ ಮತ್ತು ಚಳಿಗಾಲದ ನಂತರ ಆಸ್ಟ್ರೇಲಿಯಾದ ಟೆಸ್ಟ್ ಪ್ರವಾಸದಂತಹ ಪ್ರಮುಖ ಪ್ರವಾಸಗಳಿಗೆ ತಮ್ಮ ತಂಡದೊಂದಿಗೆ ಪ್ರಯಾಣಿಸಲು ನಿರೀಕ್ಷಿಸಲಾಗಿದೆ.