ಕರ್ನಾಟಕ

karnataka

ETV Bharat / sports

'ವಿಶ್ವದ ಕ್ರಿಕೆಟ್ ತಂಡಗಳೇ ಹುಷಾರಾಗಿರಿ'.. ದ್ರಾವಿಡ್​ ಕೋಚ್​​ ನೇಮಕದ ಬೆನ್ನಲ್ಲೇ ಮೈಕಲ್ ವಾನ್ ಎಚ್ಚರಿಕೆ ಟ್ವೀಟ್​

ಕನ್ನಡಿಗ ರಾಹುಲ್ ದ್ರಾವಿಡ್​ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಲು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಲು ಶುರುವಾಗುತ್ತಿದ್ದಂತೆ ವಿಶ್ವ ಕ್ರಿಕೆಟ್​​ಗೆ ಮೈಕಲ್​ ವಾನ್​​ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ.

Rahul Dravid
Rahul Dravid

By

Published : Oct 16, 2021, 4:12 PM IST

Updated : Oct 16, 2021, 4:26 PM IST

ಹೈದರಾಬಾದ್​:ಟೀಂ ಇಂಡಿಯಾ ಪುರುಷರ ಕ್ರಿಕೆಟ್​​​ ತಂಡದ ಮುಖ್ಯ ಕೋಚ್​​ ಆಗಿ ರಾಹುಲ್​ ದ್ರಾವಿಡ್​​​​ ಆಯ್ಕೆಯಾಗಿದ್ದಾರೆಂಬ ಮಾತು ಕೇಳಿ ಬರಲು ಶುರುಗೊಂಡಿದೆ. ಇದರ ಬೆನ್ನಲ್ಲೇ ಅನೇಕ ಕ್ರಿಕೆಟ್​ ದಿಗ್ಗಜರು ಇದರ ಬಗ್ಗೆ ತಮ್ಮ ತಮ್ಮ ಟ್ವಿಟರ್​​ ಅಕೌಂಟ್​ನಲ್ಲಿ ಬರೆದುಕೊಳ್ಳುತ್ತಿದ್ದಾರೆ.

ಸದ್ಯ ಇದರ ಬಗ್ಗೆ ಇಂಗ್ಲೆಂಡ್​​​ ತಂಡದ ಮಾಜಿ ನಾಯಕ ಮೈಕಲ್​ ವಾನ್​ ಟ್ವಿಟರ್​​ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಒಂದು ವೇಳೆ, ಭಾರತೀಯ ಕ್ರಿಕೆಟ್ ತಂಡದ ಮುಂದಿನ ಕೋಚ್​​ ಆಗಿ ರಾಹುಲ್​​ ದ್ರಾವಿಡ್​​ ಆಯ್ಕೆ ಖಚಿತವಾದರೆ 'ವಿಶ್ವ ಕ್ರಿಕೆಟ್ ತಂಡಗಳು​​ ಹುಷಾರಾಗಿರಬೇಕು' ಎಂದು ಟ್ವೀಟ್​ ಮಾಡಿದ್ದಾರೆ.

ಮೈಕಲ್​ ವಾನ್​

ಐಸಿಸಿ ಟಿ - 20 ವಿಶ್ವಕಪ್​ ಮುಕ್ತಾಯದೊಂದಿಗೆ ರವಿಶಾಸ್ತ್ರಿ ಕೋಚ್​​​ ಅವಧಿ ಮುಕ್ತಾಯಗೊಳ್ಳಲಿದ್ದು, ಇದಾದ ಬಳಿಕ ತಂಡದ ಕೋಚ್​​ ಆಗಿ ಯಾರು ನೇಮಕಗೊಳ್ಳಲಿದ್ದಾರೆ ಎಂಬ ಕುತೂಹಲ ಉಂಟಾಗಿತ್ತು. ಸದ್ಯ ಉತ್ತರ ಸಿಕ್ಕಿದ್ದು, ಟೀಂ ಇಂಡಿಯಾ ದಿ ವಾಲ್ ಖ್ಯಾತಿಯ ರಾಹುಲ್​​ ದ್ರಾವಿಡ್​ಗೆ ಬಿಸಿಸಿಐ ಮಣೆ ಹಾಕಿದೆ ಎನ್ನಲಾಗಿದೆ.

ಆದರೆ, ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ಮಂಡಳಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಈಗಾಗಲೇ ಅಂಡರ್​​-19 ಕೋಚ್​ ಹಾಗೂ ಎನ್​​ಸಿಎ ಅಧ್ಯಕ್ಷರಾಗಿ ಅನುಭವ ಹೊಂದಿರುವ ರಾಹುಲ್​ ದ್ರಾವಿಡ್​, ಶ್ರೀಲಂಕಾದಲ್ಲಿ ಟೀಂ ಇಂಡಿಯಾ ಹಿರಿಯ ತಂಡದ ಕೋಚ್​​ ಆಗಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿರಿ:ಚಿನ್ನ ತಲಾ ಕಮ್ಮಿಂಗ್‌.. IPL ಚಾಂಪಿಯನ್‌ ಧೋನಿಗೆ ಡಬಲ್ ಸಂಭ್ರಮ.. ಇದಕ್ಕೆ ಕೂಲ್‌ ಮಡದಿಯೇ 'ಸಾಕ್ಷಿ'!

ವಾಸೀಂ ಜಾಫರ್ ಟ್ವೀಟ್​

ನಿನ್ನೆಯವರೆಗೂ ರಾಹುಲ್​ ದ್ರಾವಿಡ್​​ NCA ಅಧ್ಯಕ್ಷರಾಗಿ ಉಳಿದುಕೊಳ್ಳಲಿದ್ದಾರೆ ಎಂಬ ಸುದ್ದಿ ವರದಿಯಾಗಿದ್ದವು. ಆದರೆ, ಇಂದು ಮುಂಜಾನೆ ಸುದ್ದಿ ಮಾತ್ರ ಅವರು ಭಾರತದ ಕೋಚ್​ ಆಗಿದ್ದಾರೆ ಎನ್ನಲಾಗಿದೆ. ಹಾಗಾದರೆ ಮಧ್ಯರಾತ್ರಿ ಏನಾಯಿತು? ನನ್ನ ಅತ್ಯುತ್ತಮ ಊಹೆಯೆಂದರೆ ಲಾರ್ಡ್​ ಶಾರ್ದೂಲ್​​​ ಅವರ ಹುಟ್ಟುಹಬ್ಬದ ವೇಳೆ ಕೈಯಲ್ಲಿ ಮೇಣದ ಬತ್ತಿ ಹಿಡಿದುಕೊಂಡು ರಾಹುಲ್​ ಭಾಯ್​ ತರಬೇತಿ ನೀಡಲಿ ಎಂದು ಕೇಳಿಕೊಂಡಿರಬೇಕು ಎಂದಿದ್ದಾರೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ ರಾಹುಲ್​ ದ್ರಾವಿಡ್​ 2023ರವರೆಗೆ ಟೀಂ ಇಂಡಿಯಾ ಕೋಚ್​​ ಆಗಿ ಸೇವೆ ಸಲ್ಲಿಸಲಿದ್ದು, ಅದಕ್ಕಾಗಿ 10 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಇದೆ.

Last Updated : Oct 16, 2021, 4:26 PM IST

ABOUT THE AUTHOR

...view details