ಕರ್ನಾಟಕ

karnataka

ETV Bharat / sports

ಕೊಹ್ಲಿ ಪರ ಮಾತನಾಡಿದ ಪಾಕ್​ ಕ್ರಿಕೆಟರ್​ಗೆ ಫಿಕ್ಸರ್ ಎಂದು ಹೀಯಾಳಿಸಿದ ಮೈಕಲ್ ವಾನ್​ - ಸಲ್ಮಾನ್​ ಬಟ್​ ಮ್ಯಾಚ್​ ಫಿಕ್ಸಿಂಗ್

ಕೊಹ್ಲಿ 100 ಕೋಟಿಗೂ ಹೆಚ್ಚು ಜನರಿರುವ ರಾಷ್ಟ್ರದಿಂದ ಬಂದಿದ್ದಾರೆ. ಅದು ಅವರನ್ನು ಹೆಚ್ಚು ಜನಪ್ರಿಯರಾಗುವಂತೆ ಮಾಡಿರುವುದರಲ್ಲಿ ಯಾವುದೇ ಅನುಮಾನವಿಲ್ಲ. 70 ಶತಕ ಸಿಡಿಸಿರುವ ಅವರನ್ನು ನಾಯಕನಾಗಿ ಇನ್ನಿಂಗ್ಸ್ ಆರಂಭಿಸಿದರೂ ಏಕದಿನ ಕ್ರಿಕೆಟ್​ನಲ್ಲಿ ಒಂದೇ ಒಂದು ಶತಕವನ್ನು ಸಿಡಿಸಲಾಗದ ಮೈಕಲ್ ವಾನ್ ಬೇರೆ ಆಟಗಾರಿಗೆ ಹೋಲಿಕೆ ಮಾಡಿ ಮಾತನಾಡುವುದು ಸರಿಯಲ್ಲ..

ಮೈಕಲ್ ವಾನ್ -ವಿರಾಟ್​ ಕೊಹ್ಲಿ
ಮೈಕಲ್ ವಾನ್ -ವಿರಾಟ್​ ಕೊಹ್ಲಿ

By

Published : May 16, 2021, 7:55 PM IST

Updated : May 16, 2021, 9:08 PM IST

ನವದೆಹಲಿ : ಇಂಗ್ಲೆಂಡ್ ಪ್ರವಾಸದಲ್ಲಿ ನ್ಯೂಜಿಲ್ಯಾಂಡ್​ ನಾಯಕ ಕೇನ್ ವಿಲಿಯಮ್ಸನ್​ 2 ಪಂದ್ಯಗಳಲ್ಲಿ ಕೊಹ್ಲಿ 5 ಪಂದ್ಯಗಳಲ್ಲಿ ಗಳಿಸುವುದಕ್ಕಿಂತ ಹೆಚ್ಚು ರನ್​ಗಳಿಸಿದ್ದಾರೆ.

ನನ್ನ ಪ್ರಕಾರ ಕೊಹ್ಲಿ ಸಾಮಾಜಿಕ ಜಾಲಾತಾಣಗಳಿಂದ ಪ್ರಸಿದ್ಧರಾಗಿದ್ದಾರೆ. ಆದ್ರೆ, ವಿಲಿಯಮ್ಸನ್​ ವಿಶ್ವದ ಅತ್ಯುತ್ತಮ ಕ್ರಿಕೆಟಿಗ ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್​ ವಾನ್​ ಹೇಳಿದ್ದರು.

ಈ ಹೇಳಿಕೆಗೆ ಕಿಡಿ ಕಾರಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗರ ಸಲ್ಮಾನ್ ಬಟ್, ಕೊಹ್ಲಿ 100 ಕೋಟಿಗೂ ಹೆಚ್ಚು ಜನರಿರುವ ರಾಷ್ಟ್ರದಿಂದ ಬಂದಿದ್ದಾರೆ. ಅದು ಅವರನ್ನು ಹೆಚ್ಚು ಜನಪ್ರಿಯರಾಗುವಂತೆ ಮಾಡಿರುವುದರಲ್ಲಿ ಯಾವುದೇ ಅನುಮಾನವಿಲ್ಲ.

ಆದರೆ, ಕೊಹ್ಲಿ ಪ್ರಸ್ತುತ ಸಕ್ರಿಯ ಕ್ರಿಕಟರ್​ಗಳಲ್ಲಿ ಆಡುವ ಯಾವುದೇ ಕ್ರಿಕೆಟರ್​ಗಳಿಂತ ಹೆಚ್ಚು ಅಂತಾರಾಷ್ಟ್ರೀಯ (70) ಶತಕಗಳನ್ನು ಸಿಡಿಸಿದ್ದಾರೆ. ಅವರು ತಮ್ಮ ಅದ್ಭುತ ಪ್ರದರ್ಶನದಿಂದ ಕ್ರಿಕೆಟ್​ನಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. 70 ಶತಕ ಸಿಡಿಸಿರುವ ಅವರ ತಮ್ಮ ಸಮಕಾಲೀನರಿಂದ ಸಾಧ್ಯವಾಗದಷ್ಟು ಶತಕ ಸಿಡಿಸಿ ಮುಂದಿದ್ದಾರೆ.

ಆದರೆ, ಇಂತಹ ಆಟಗಾರನನ್ನು ಸ್ವತಃ ನಾಯಕನಾಗಿ ಇನ್ನಿಂಗ್ಸ್ ಆರಂಭಿಸಿದರೂ ಏಕದಿನ ಕ್ರಿಕೆಟ್​ನಲ್ಲಿ ಒಂದೇ ಒಂದು ಶತಕವನ್ನು ಸಿಡಿಸಲಾಗದ ಮೈಕಲ್ ವಾನ್ ಬೇರೆ ಆಟಗಾರಿಗೆ ಹೋಲಿಕೆ ಮಾಡಿ ಮಾತನಾಡುವುದು ಸರಿಯಲ್ಲ ಎಂದು ಬಟ್, ಮೈಕಲ್ ವಾನ್ ಕಾಲೆಳೆದಿದ್ದರು.

ಈ ಸುದ್ದಿ ಭಾರಿ ಸದ್ದು ಮಾಡುತ್ತಿದ್ದಂತೆ ಪ್ರತಿಕ್ರಿಯಿಸಿರುವ ಮೈಕಲ್ ವಾನ್ ," ಸಲ್ಮಾನ್ ನನ್ನ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ನಾನು ನೋಡಿದ್ದೇನೆ. ಅದು ಒಳ್ಳೆಯದೇ, ಆತ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ.

ಆದರೆ, ಇಂತಹ ಆಲೋಚನೆ ಆತನಿಗೆ 2010ರಲ್ಲಿ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗುವಾಗ ಇರಬೇಕಿತ್ತೆಂದು ನಾನು ಬಯಸುತ್ತಿದ್ದೇನೆ" ಎಂದು ಸಲ್ಮಾನ್ ಭಟ್ ಹೇಳಿಕೆಗೆ ಇಂಗ್ಲೆಂಡ್ ಮಾಜಿ ನಾಯಕ ತಿರುಗೇಟು ನೀಡಿದ್ದಾರೆ.

ಆದರೂ ಮೈಕಲ್​ ವಾನ್ ಭಾರತೀಯ ಆಭಿಮಾನಿಗಳನ್ನು ಕೆರಳಿಸುವ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಆಸ್ಟ್ರೇಲಿಯಾ ಪ್ರವಾಸದ ವೇಳೆ ಕೂಡ ಕೊಹ್ಲಿ ಇಲ್ಲದ ಭಾರತ ತಂಡ 4-0ಯಲ್ಲಿ ಸರಣಿ ಕಳೆದುಕೊಳ್ಳಲಿದೆ ಎಂದು ಟ್ವೀಟ್ ಮಾಡಿದ್ದರು.

ಆದರೆ, ಭಾರತ 2-1ರಲ್ಲಿ ಗೆದ್ದ ನಂತರ ಭಾರತೀಯ ಅಭಿಮಾನಿಗಳಿಂದ ಟ್ರೋಲ್​ಗೂ ತುತ್ತಾಗಿದ್ದರು. ಇದೀಗ ಕೊಹ್ಲಿ ಮೇಲೆ ಹೇಳಿಕೆ ನೀಡಿದ್ದಾರೆ. ಇದಕ್ಕೆ ಕೊಹ್ಲಿ ಹೇಗೆ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಕಾದು ನೋಡಬೇಕಿದೆ.

ಇದನ್ನು ಓದಿ:ದೇಶ ಇಂತಹ ಸ್ಥಿತಿ ತಲುಪಿರುವುದಕ್ಕೆ ನಿಮ್ಮಂತಹ ಜನರೇ ಕಾರಣ : ಹನುಮ ವಿಹಾರಿ ಕಿಡಿ

Last Updated : May 16, 2021, 9:08 PM IST

ABOUT THE AUTHOR

...view details