ಕರ್ನಾಟಕ

karnataka

ETV Bharat / sports

ICC World Cup 2023: ನ್ಯೂಜಿಲೆಂಡ್​ ತಂಡಕ್ಕೆ ಎರಡನೇ ಆಘಾತ.. ವಿಶ್ವಕಪ್​ನಿಂದ ಮೈಕೆಲ್ ಬ್ರೇಸ್‌ವೆಲ್ ಔಟ್​ - ETV Bharath Kannada news

ಇಂಗ್ಲಿಷ್ ಟಿ20 ಬ್ಲಾಸ್ಟ್‌ನಲ್ಲಿ ಆಡುವ ವೇಳೆ ಗಾಯಕ್ಕೆ ತುತ್ತಾದ ಕಿವೀಸ್​ ಸ್ಟಾರ್​ ಆಲ್​ರೌಂಡರ್​ ಮೈಕೆಲ್​ ಬ್ರೇಸ್​ವೆಲ್​ ವಿಶ್ವಕಪ್​ನಿಂದ ಹೊಗುಳಿಯಲಿದ್ದಾರೆ.

Michael Bracewell
ಮೈಕೆಲ್ ಬ್ರೇಸ್‌ವೆಲ್

By

Published : Jun 14, 2023, 7:13 PM IST

ವಿಶ್ವಕಪ್​ಗೆ ಇನ್ನು ಆರು ತಿಂಗಳು ಬಾಕಿ ಇದ್ದು, ಎಲ್ಲಾ ತಂಡಗಳು ತಯಾರಿಗೆ ಅಣಿಯಾಗುತ್ತಿದ್ದರೆ ನ್ಯೂಜಿಲೆಂಡ್​ ಮಾತ್ರ ಗಾಯದ ಸುಳಿಯಲ್ಲಿ ಸಿಲುಕಿಕೊಂಡಿದೆ. ಸದ್ಯ ಕಿವೀಸ್​ ತಂಡದ ಇಬ್ಬರು ಸ್ಟಾರ್​ ಆಟಗಾರರು 2023ರ ವಿಶ್ವಕಪ್​ನಿಂದ ಗಾಯದ ಕಾರಣಕ್ಕೆ ಹೊರಗುಳಿಯಲಿದ್ದಾರೆ. ಅಕ್ಟೋಬರ್​ ಮತ್ತು ನವೆಂಬರ್​​ನಲ್ಲಿ​ ಭಾರತದಲ್ಲಿ 2023ರ ವಿಶ್ವಕಪ್​ ನಡೆಯಲಿದೆ. ಮುಂದಿನ ವಾರ ವೇಳಾ ಪಟ್ಟಿಯೂ ಬಿಡುಗಡೆ ಆಗಲಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಹೀಗಿರುವಾಗ ಬ್ಲಾಕ್​ ಕ್ಯಾಪ್ಸ್​ನ ಮೈಕೆಲ್ ಬ್ರೇಸ್‌ವೆಲ್ ಗಾಯಕ್ಕೆ ತುತ್ತಾಗಿದ್ದಾರೆ. ಸ್ಪಿನ್ ಬೌಲಿಂಗ್ ಆಲ್​ರೌಂಡರ್ ಇಂಗ್ಲಿಷ್ ಟಿ20 ಬ್ಲಾಸ್ಟ್‌ನಲ್ಲಿ ವೋರ್ಸೆಸ್ಟರ್‌ಶೈರ್ ರಾಪಿಡ್ಸ್ ಪರ ಆಡುತ್ತಿದ್ದಾಗ ಗಾಯಕ್ಕೆ ತುತ್ತಾದರು. ಕಳೆದ ಶುಕ್ರವಾರ ವೋರ್ಸೆಸ್ಟರ್‌ಶೈರ್‌ಗೆ ಬ್ಯಾಟಿಂಗ್ ಮಾಡುವಾಗ ಬ್ರೇಸ್‌ವೆಲ್ 11 ರನ್‌ ಗಳಿಸಿ ಆಡುತ್ತಿದ್ದಾಗ ಅಕಿಲ್ಸ್ ಸ್ನಾಯುರಜ್ಜು ನೋವಿಗೆ ಒಳಗಾದರು. ಇದರಿಂದ ಪಂದ್ಯದ ನಡುವಿನಲ್ಲೇ ಮೈದಾನದಿಂದ ಹೊರನಡೆದರು.

32 ವರ್ಷ ವಯಸ್ಸಿನ ಮೈಕಲ್ ಯುಕೆಯಲ್ಲಿ ನಾಳೆ (ಗುರುವಾರ) ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಅವರಿಗೆ ಆರರಿಂದ ಎಂಟು ತಿಂಗಳ ವಿಶ್ರಾಂತಿಯ ಅಗತ್ಯ ಇದೆ ಎನ್ನಲಾಗಿದೆ. ನಂತರ ಅವರು ತಂಡದಲ್ಲೇ ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ನಡೆಯಲಿರುವ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರಿಂದ ಅವರು ಹೊರಗುಳಿಯಲಿದ್ದಾರೆ.

ನ್ಯೂಜಿಲೆಂಡ್ ಕೋಚ್ ಗ್ಯಾರಿ ಸ್ಟೆಡ್ ಅವರು ಬ್ರೇಸ್‌ವೆಲ್ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ಹೇಳುವಂತೆ, "ಬ್ರೇಸ್‌ವೆಲ್ ಗಾಯಕ್ಕೆ ತುತ್ತಾಗಿರುವುದು ತಂಡಕ್ಕೆ ಕಹಿ ಸುದ್ದಿಯಾಗಿದೆ. ಆಟಗಾರರು ಗಾಯಕ್ಕೆ ಒಳಗಾದಾಗ ರಾಷ್ಟ್ರೀಯ ತಂಡವು ಸಂಕಷ್ಟಕ್ಕೆ ಒಳಗಾಗುತ್ತದೆ, ಅದರಲ್ಲೂ ಸ್ಟಾರ್​ ಬ್ಯಾಟರ್​ಗಳು ಮಹತ್ವದ ಸರಣಿಯಿಂದ ಕೈತಪ್ಪುವುದು ಬೇಸರದ ವಿಷಯವಾಗಿದೆ. ಮೈಕೆಲ್ ತಂಡಕ್ಕೆ ಪ್ರವೇಶ ಪಡೆದಾಗಿನಿಂದ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಕ್ರಿಕೆಟ್​ನ ಮೂರು ಮಾದರಿಯಲ್ಲಿ ಅಸಾಧಾರಣ ಕೌಶಲ್ಯಗಳನ್ನು ಮೈಕಲ್​ ಹೊಂದಿದ್ದರು. ಭಾರತದಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ನಮಗೆ ಪ್ರಮುಖ ಆಟಗಾರ ಎಂದು ಪರಿಗಣಿಸಲಾಗಿತ್ತು. ಗಾಯವೂ ಕ್ರಿಡೆಯ ಒಂದು ಭಾಗವಾಗಿದೆ, ನಾವು ಇದನ್ನು ಒಪ್ಪಿಕೊಳ್ಳಬೇಕು ಮತ್ತು ಮೈಕಲ್​ ಅವರ ಚೇತರಿಕೆಗೆ ಹೆಚ್ಚಿನ ಗಮನ ನೀಡಬೇಕು" ಎಂದಿದ್ದಾರೆ.

ನ್ಯೂಜಿಲೆಂಡ್​ ತಂಡಕ್ಕೆ ಇದು ಎರಡನೇ ಆಘಾತವಾಗಿದೆ. ಇಂಡಿಯನ್​ ಪ್ರೀಮಿಯರ್​ ಲೀಗ್​ನ ಮೊದಲ ಪಂದ್ಯದಲ್ಲಿ ಗಾಯಗೊಂಡ ಕೇನ್ ವಿಲಿಯಮ್ಸನ್ ಸಹ ವಿಶ್ವಕಪ್​ನಿಂದ ಹೊರಗುಳಿದಿದ್ದಾರೆ.

ಮೈಕಲ್​ ಬ್ರೆಸ್​ವೆಲ್​ ಈವರೆಗೆ ನ್ಯೂಜಿಲೆಂಡ್​ ಪರ 19 ಏಕದಿನ ಪಂದ್ಯದಲ್ಲಿ 16 ಇನ್ನಿಂಗ್ಸ್​ ಆಡಿದ್ದು, 42.5 ರ ಸರಾಸರಿಯಲ್ಲಿ ಎರಡು ಶತಕ ಸಹಿತ 510 ರನ್​ ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್​ 140 ಆಗಿದೆ. ಟಿ 20ಯಲ್ಲಿ 16 ಪಂದ್ಯದಲ್ಲಿ 11 ಇನ್ನಿಂಗ್ಸ್​ ಆಡಿದ್ದು, 1 ಅರ್ಧಶತಕ ಸಹಿತ 113 ರನ್​ ಕಲೆಹಾಕಿದ್ದಾರೆ. ಇನ್ನು ಟಸ್ಟ್​ನಲ್ಲಿ 8 ಪಂದ್ಯದಲ್ಲಿ 14 ಇನ್ನಿಂಗ್ಸ್​ ಆಡಿದ್ದು, 19.9 ರ ಸರಾಸರಿಯಲ್ಲಿ 259 ರನ್​ ಗಳಿಸಿದ್ದಾರೆ.

ಇದನ್ನೂ ಓದಿ:ಭಾರತದ ಟೆಸ್ಟ್ ಕ್ರಿಕೆಟ್‌ ತಂಡ ಬದಲಾಗುತ್ತಾ? ಪ್ರಥಮ ದರ್ಜೆ ಪಂದ್ಯಗಳಲ್ಲಿ ಗಮನ ಸೆಳೆದ ಪ್ರತಿಭೆಗಳಿಗೆ ಸಿಗುವುದೇ ಅವಕಾಶ?​​

ABOUT THE AUTHOR

...view details