ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ನ ಸೂಪರ್ ಸ್ಮ್ಯಾಷ್ನಲ್ಲಿ ಶನಿವಾರ ನಡೆದ ವೆಲ್ಲಿಂಗ್ಟನ್ ಮತ್ತು ಸೆಂಟ್ರೆಲ್ ಡಿಸ್ಟ್ರಿಕ್ಟ್ ನಡುವಿನ ಪಂದ್ಯದಲ್ಲಿ ವೆಲ್ಲಿಂಗ್ಟನ್ ನಾಯಕ ಮೈಕಲ್ ಬ್ರೇಸ್ವೆಲ್ ಕೇವಲ 65 ಎಸೆತಗಳಲ್ಲಿ ಅಜೇಯ 141 ರನ್ ಸಿಡಿಸಿ 228ರನ್ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಬೆನ್ನೆಟ್ಟಲು ನೆರವಾಗಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಸೆಂಟ್ರಲ್ ಡಿಸ್ಟ್ರಿಕ್ಟ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 227 ರನ್ಗಳಿಸಿತ್ತು. ಜೋಶ್ ಕ್ಲಾರ್ಕ್ಸನ್ ಅಜೇಯ 76, ಬೇಲೆ ವಿಗಿನ್ಸ್ 45 , ಟಾಮ್ ಬ್ರುಸ್ 36 ರನ್ಗಳಿಸಿದ್ದರು.
24ಕ್ಕೆ4 ವಿಕೆಟ್! ಆದ್ರೂ ಚೇಸಿಂಗ್ ಯಶಸ್ವಿ
228 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿಟ್ಟಿದ ವೆಲ್ಲಿಂಗ್ಟನ್ ತಂಡ ಮೊದಲ ಓವರ್ನಲ್ಲೆ 2 ವಿಕೆಟ್ ಕಳೆದುಕೊಂಡಿತ್ತು. 2ನೇ ಓವರ್ನಲ್ಲಿ 3, 4ನೇ ಓವರ್ನಲ್ಲಿ 4ನೇ ವಿಕೆಟ್ ಕಳೆದುಕೊಂಡಿತ್ತು. 5ನೇ ಓವರ್ ಮುಗಿಯುವ ವೇಳೆ ವೆಲ್ಲಿಂಗ್ಟನ್ 5 ವಿಕೆಟ್ ಕಳೆದುಕೊಂಡು 43 ರನ್ಗಳಿಸಿತ್ತು. ಆ ವೇಳೆಗೆ ತಂಡಕ್ಕೆ 90 ಎಸೆತಗಳಲ್ಲಿ ತಂಡಕ್ಕೆ ಗೆಲ್ಲಲು 184 ರನ್ಗಳ ಅಗತ್ಯವಿತ್ತು.