ಲಂಡನ್:ವಿಲ್ಲೋ ಮರದ ಬದಲಾಗಿ ಬಿದಿರಿನಿಂದ ಬ್ಯಾಟ್ ತಯಾರಿಸುವ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರ ಆಲೋಚನೆಯನ್ನು ಎಂಸಿಸಿ(ಮೇರಿಲೆಬೋನ್ ಕ್ರಿಕೆಟ್ ಕ್ಲಬ್) ತಿರಸ್ಕರಿಸಿದೆ. ಪ್ರಸ್ತುತ ಗವರ್ನಿಂಗ್ ಕೌನ್ಸಿಲ್ನ ನಿಯಮಗಳ ಪ್ರಕಾರ ಬಿದಿರಿನಿಂದ ಬ್ಯಾಟ್ ತಯಾರಿಸುವುದು ಕಾನೂನು ಬಾಹಿರ ಎಂದು ತಿಳಿಸಿದೆ.
ಎರಡು ದಿನಗಳ ಹಿಂದೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರಾದ ಡ್ಯಾರ್ಶಿಲ್ ಶಾ ಮತ್ತು ಬೆನ್ ಟಿಂಕ್ಲರ್-ಡೇವಿಸ್ ಬಿದಿರಿನಿಂದ ಕ್ರಿಕೆಟ್ ಬ್ಯಾಟ್ ತಯಾರಿಸುವುದು ತುಂಬಾ ಕಡಿಮೆ ಖರ್ಚು ಮತ್ತು ಹೆಚ್ಚು ಬಲಿಷ್ಠವಾಗಿರಲಿದೆ. ಮರಗಳು ಸಹಾ ತುಂಬಾ ಹೇರಳವಾಗಿ ಸಿಗಲಿವೆ ಎಂದು ಲೇಖನವೊಂದರಲ್ಲಿ ಉಲ್ಲೇಖಿಸಿದ್ದರು. ಇದೀಗ ಅವರ ಆಲೋಚನೆಯನ್ನು ಎಂಸಿಸಿ ಆರಂಭದಲ್ಲೇ ಮೊಟಕುಗೊಳಿಸಿದೆ.