ಮುಂಬೈ :ವಿವಾಹದ ಕಾರಣ ಐಪಿಎಲ್ನ 15ನೇ ಆವೃತ್ತಿಯ ಮೊದಲ ಕೆಲವು ಪಂದ್ಯಗಳಿಗೆ ಅಲಭ್ಯರಾಗಿದ್ದ ಆರ್ಸಿಬಿಯ ಗ್ಲೆನ್ ಮ್ಯಾಕ್ಸ್ವೆಲ್ ಈಗಾಗಲೇ ಮುಂಬೈಗೆ ಆಗಮಿಸಿದ್ದಾರೆ. ಆದರೆ, ಇಂದು ನಡೆಯಲಿರುವ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಕಣಕ್ಕಿಳಿಯುತ್ತಿಲ್ಲ. ಕ್ವಾರಂಟೈನ್ ಮುಗಿಸಿದ್ದರೂ ಆಸೀಸ್ ಆಲ್ರೌಂಡರ್ ಏಕೆ ಕಣಕ್ಕಿಳಿಯುತ್ತಿಲ್ಲ ಎನ್ನುವುದನ್ನು ಆರ್ಸಿಬಿ ಮುಖ್ಯ ಕೋಚ್ ಮೈಕ್ ಹೆಸನ್ ವಿವರಿಸಿದ್ದಾರೆ.
ಸೋಮವಾರ ಆರ್ಸಿಬಿ ತಂಡದ ಅಭ್ಯಾಸ ಸೆಸನ್ನಲ್ಲಿ ಕಾಣಿಸಿಕೊಂಡಿದ್ದ ಕಾಣಿಸಿಕೊಂಡಿ ಮ್ಯಾಕ್ಸ್ವೆಲ್ ಇಂದು ನಡೆಯುವ ಪಂದ್ಯದಲ್ಲಿ ಆಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿ ಅಂತಾರಾಷ್ಟ್ರೀಯ ಪಂದ್ಯ ನಡೆಯುವಾಗ ಯಾವುದೇ ಆಟಗಾರರು ರಾಷ್ಟ್ರೀಯ ತಂಡ ತ್ಯಜಿಸಿ ಆಡುವುದಕ್ಕೆ ಅವಕಾಶ ನೀಡಿಲ್ಲದ ಕಾರಣ ಅವರು ಅನಿವಾರ್ಯವಾಗಿ ಇಂದು ಬೆಂಚ್ ಕಾಯಬೇಕಿದೆ.
ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ಪ್ರವಾಸದಲ್ಲಿದೆ. ಮಂಗಳವಾರ ಏಕೈಕ ಟಿ20 ಪಂದ್ಯವನ್ನಾಡಲಿದೆ. ಹಾಗಾಗಿ, ತಂಡದಿಂದ ಹೊರ ಬಂದಿರುವ ಆಟಗಾರರು ಕೂಡ ಏಪ್ರಿಲ್ 5ರನಂತರ ಮಾತ್ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡಲು ಸಿಎ ಸೂಚನೆ ನೀಡಿದೆ. "ಏಪ್ರಿಲ್ 6ಕ್ಕೂ ಮೊದಲು ಯಾವುದೇ ಗುತ್ತಿಗೆಯಲ್ಲಿರುವ ಆಟಗಾರರು ಐಪಿಎಲ್ಗೆ ಲಭ್ಯರಿರುವುದಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಈಗಾಗಲೇ ಖಚಿತಪಡಿಸಿದೆ.