ಕರ್ನಾಟಕ

karnataka

ETV Bharat / sports

ದ್ವಿತೀಯಾರ್ಧದಲ್ಲಿ ಆರ್​ಸಿಬಿಗೆ ಆಪದ್ಬಾಂಧವನಾದ ಆಸೀಸ್ ಆಲ್​ರೌಂಡರ್: ಗ್ಲೇನ್​ ಮ್ಯಾಕ್ಸ್​ವೆಲ್ 2.0​

2020ರ ಐಪಿಎಲ್​ನಲ್ಲಿ ಕೇವಲ ಒಂದೇ ಒಂದು ಸಿಕ್ಸರ್​ ಮತ್ತು ಅರ್ಧಶತಕ ಸಿಡಿಸಲಾಗದ ಮ್ಯಾಕ್ಸ್​ವೆಲ್​ರನ್ನು ಖರೀದಿಸುವುದು ಮೂರ್ಖತನ. ಅವರ ಹಿಂದೆ ಹೋಗಬಾರದೆಂದು ಹಲವು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟರೂ, ಆರ್​ಸಿಬಿ ಮತ್ತು ನಾಯಕ ವಿರಾಟ್​ ಕೊಹ್ಲಿ ಆಸೀಸ್​ ಆಲ್​ರೌಂಡರ್​ ಮೇಲೆ ನಂಬಿಕೆಯಿಟ್ಟು ಬರೋಬ್ಬರಿ 14.25 ಕೋಟಿ ರೂ ಖರೀದಿಸಿತ್ತು. ಇದೀಗ ತಮ್ಮ ಮೇಲೆ ಫ್ರಾಂಚೈಸಿ ಮತ್ತು ನಾಯಕ ಇಟ್ಟಿದ್ದ ನಂಬಿಕೆಯ ಜೊತೆಗೆ ತಾವು ತೆಗೆದುಕೊಂಡ ಬೆಲೆಗೆ ತಕ್ಕ ಆಟ ಆಡಿ ಸೈ ಎನಿಸಿಕೊಂಡಿದ್ದಾರೆ.

ಗ್ಲೇನ್ ಮ್ಯಾಕ್ಸ್​ವೆಲ್

By

Published : Oct 9, 2021, 1:55 PM IST

ದುಬೈ: ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ 2016ರ ಐಪಿಎಲ್​ನಲ್ಲಿ ಫೈನಲ್​ ತಲುಪಿದ ನಂತರ ಸತತ 3 ಬಾರಿ ಯಾವ ತಂಡವೂ ಕಂಡಿರದಂತಹ ಹೀನಾಯ ಸ್ಥಿತಿ ತಲುಪಿತ್ತು. ಆದರೆ 2020ರ ರಲ್ಲಿ ಅದ್ಭುತ ರೀತಿಯಲ್ಲಿ ಕಮ್​ಬ್ಯಾಕ್​ ಮಾಡಿ ಪ್ಲೇ ಆಫ್​ ತಲುಪಿದ್ದ ಬೆಂಗಳೂರು ಫ್ರಾಂಚೈಸಿ ಈ ವರ್ಷವೂ ಕೆಲವು ಫ್ರಾಬಲ್ಯಯುತ ಗೆಲುವುಗಳೊಂದಿಗೆ ಸತತ 2ನೇ ಬಾರಿ ಪ್ಲೇ ಆಫ್​ ತಲುಪಿದೆ.

ಮೊದಲಾರ್ಧದಲ್ಲಿ 7ರಲ್ಲಿ 5 ಗೆಲುವು ಪಡೆದಿದ್ದ ವಿರಾಟ್ ಬಳಗ ದ್ವಿತೀಯಾರ್ಧದದಲ್ಲಿ ಆರಂಭದಲ್ಲಿ ಮುಗ್ಗರಿಸಿದರೂ ಆಡಿದ 7 ಪಂದ್ಯಗಳಲ್ಲಿ 4 ಗೆಲುವು ಮತ್ತು 3 ಸೋಲು ಪಡೆದು 2021ರ ಲೀಗ್​ನಲ್ಲಿ ಅಗ್ರ 3ರಲ್ಲಿ ಮುಗಿಸಿದೆ. ಈ ಮೂಲಕ ಸತತ 2ನೇ ಬಾರಿ ಪ್ಲೇ ಆಫ್​ ಪ್ರವೇಶಿಸಿದೆ. ಈ ಯಶಸ್ಸಿನ ಶ್ರೇಯ ತಂಡದ ಬೌಲರ್​ಗಳು ಮತ್ತು ಆಸ್ಟ್ರೇಲಿಯಾ ಆಲ್​ರೌಂಡರ್​ ಗ್ಲೇನ್​ ಮ್ಯಾಕ್ಸ್​ವೆಲ್​ಗೆ ಸಲ್ಲುತ್ತದೆ. ಏಕೆಂದರೆ ತಂಡದ ಅಗ್ರ ಕ್ರಮಾಂಕ ಮತ್ತು ಮಧ್ಯಮ ಕ್ರಮಾಂಕದ ವೈಫಲ್ಯದ ನಡುವೆಯೂ ಯುಎಇಯ ಕಠಿಣ ಪಿಚ್​ಗಳಲ್ಲೂ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

2020ರ ಐಪಿಎಲ್​ನಲ್ಲಿ ಕೇವಲ ಒಂದೇ ಒಂದು ಸಿಕ್ಸರ್​ ಮತ್ತು ಅರ್ಧಶತಕ ಸಿಡಿಸಲಾಗದ ಮ್ಯಾಕ್ಸ್​ವೆಲ್​ರನ್ನು ಖರೀದಿಸುವುದು ಮೂರ್ಖತನ. ಅವರ ಹಿಂದೆ ಹೋಗಬಾರದೆಂದೂ ಹಲವು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟರೂ, ಆರ್​ಸಿಬಿ ಮತ್ತು ನಾಯಕ ವಿರಾಟ್​ ಕೊಹ್ಲಿ ಆಸೀಸ್​ ಆಲ್​ರೌಂಡರ್​ ಮೇಲೆ ನಂಬಿಕೆಯಿಟ್ಟು ಬರೋಬ್ಬರಿ 14.25 ಕೋಟಿ ರೂ ಖರೀದಿಸಿತ್ತು. ಇದೀಗ ತಮ್ಮ ಮೇಲೆ ಫ್ರಾಂಚೈಸಿ ಮತ್ತು ನಾಯಕ ಇಟ್ಟಿದ್ದ ನಂಬಿಕೆಯ ಜೊತೆಗೆ ತಾವು ತೆಗೆದುಕೊಂಡ ಬೆಲೆಗೆ ತಕ್ಕ ಆಟ ಆಡಿ ಸೈ ಎನಿಸಿಕೊಂಡಿದ್ದಾರೆ.

ಮ್ಯಾಕ್ಸ್​ವೆಲ್ 2021ರಲ್ಲಿ ಆಡಿರುವ 13 ಇನ್ನಿಂಗ್ಸ್​ಗಳಲ್ಲಿ ಕ್ರಮವಾಗಿ 39, 59 ,78,22, 25,0,10,11,56, 50, 57, 40, 51 ರನ್​ಗಳಿಸಿದ್ದಾರೆ. ಒಟ್ಟಾರೆ 6 ಅರ್ಧಶತಕ ಸೇರಿದಂತೆ 498 ರನ್​ಗಳಿಸಿ ಲೀಗ್​ನಲ್ಲಿ ಗರಿಷ್ಠ ರನ್​ಗಳಿಸಿದ 5ನೇ ಬ್ಯಾಟರ್​ ಎನಿಸಿಕೊಂಡಿದ್ದಾರೆ. ಅದರಲ್ಲೂ ಯುಎಇಯಲ್ಲಿ ಆಡಿರುವ 7 ಪಂದ್ಯಗಳಿಂದ 254 ರನ್​ ಗಳಿಸಿದ್ದಾರೆ.

ಒಟ್ಟಿನಲ್ಲಿ ಎಬಿ ಡಿ ವಿಲಿಯರ್ಸ್​ ಮತ್ತು ವಿರಾಟ್​ ಕೊಹ್ಲಿಯ ಮೇಲೆ ಅವಲಂಭಿತರಾಗಿರುತ್ತಿದ್ದ ತಂಡಕ್ಕೆ ಮ್ಯಾಕ್ಸ್​ವೆಲ್ ಸೇರ್ಪಡೆ ಸಾಕಷ್ಟು ಒತ್ತಡವನ್ನು ಕಡಿಮೆ ಮಾಡಿದೆ. ಈ ಆವೃತ್ತಿಯಲ್ಲಿ ಮೊದಲಾರ್ಧದಲ್ಲಿ ವಿಲಿಯರ್ಸ್ ಉತ್ತಮ ಪ್ರದರ್ಶನ ತೋರಿದರೆ 2ನೇ ಹಂತದಲ್ಲಿ ಮ್ಯಾನೇಜ್​ಮೆಂಟ್​ ತೆಗೆದುಕೊಂಡ ಕೆಲವು ನಿರ್ಧಾರಗಳಿಂದ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ಆದರೆ ಮ್ಯಾಕ್ಸ್​ವೆಲ್​ ಎಬಿಡಿ ವೈಫಲ್ಯತೆಯನ್ನು ತಮ್ಮ ಪ್ರದರ್ಶನದ ಮೂಲಕ ಮರೆ ಮಾಡಿದ್ದಾರೆ. ಇದೀಗ ಪ್ಲೇ ಆಫ್ ತಲುಪಿರುವ ಬೆಂಗಳೂರು ತಂಡ ಪ್ರಶಸ್ತಿ ಗೆಲ್ಲಬೇಕಾದರೆ ಮ್ಯಾಕ್ಸ್​ವೆಲ್​ಗೆ ಕೊಹ್ಲಿ, ಎಬಿಡಿ ಸಾಥ್​ ನೀಡಿದರೆ 14 ವರ್ಷಗಳ ಐಪಿಎಲ್ ಟ್ರೋಫಿ ಎತ್ತ ಹಿಡಿಯುವ ಆರ್​ಸಿಬಿ ಕನಸು ನನಸಾಗಲಿದೆ.

ಇದನ್ನು ಓದಿ:ಐಪಿಎಲ್​ನಲ್ಲಿ 100ನೇ ಜಯ ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

ABOUT THE AUTHOR

...view details