ಚೆನ್ನೈ:ಐಪಿಎಲ್ನ ಆರಂಭದಲ್ಲೇ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್ವೆಲ್ ಆರ್ಸಿಬಿಗೆ ಬಹುಪಯೋಗಿ ಆಟಗಾರನೆಂದು ಸಾಬೀತುಪಡಿಸಿದ್ದಾರೆ ಎಂದು ಬೆಂಗಳೂರ ಫ್ರಾಂಚೈಸಿ ಮುಖ್ಯ ಕೋಚ್ ಸೈಮನ್ ಕ್ಯಾಟಿಚ್ ಅಭಿಪ್ರಾಯಪಟ್ಟಿದ್ದಾರೆ.
ಫೆಬ್ರವರಿಯಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ 32 ವರ್ಷದ ಆಸೀಸ್ ಆಲ್ರೌಂಡರ್ರನ್ನು ಆರ್ಸಿಬಿ ಸಿಎಸ್ಕೆ ಜೊತೆಗೆ ಭಾರಿ ಪೈಪೋಟಿ ನಡೆಸಿ 14.25 ಕೋಟಿ ರೂ.ಗಳಿಗೆ ಖರೀದಿಸಿತ್ತು. ಇದೀಗ ಮೊದಲೆರಡು ಪಂದ್ಯಗಳಲ್ಲೇ ತಾವು ಪಡೆದ ಮೊತ್ತಕ್ಕೆ ಸತತ 2 ಅದ್ಭುತ ಇನ್ನಿಂಗ್ಸ್ ಮೂಲಕ ಮ್ಯಾಕ್ಸ್ವೆಲ್ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಜೊತೆಗೆ ಐಪಿಎಲ್ನಲ್ಲಿ ದೀರ್ಘ ಕಾಲದಿಂದಲೂ ಹೊಂದಿರುವ ಕಳಪೆ ಪ್ರದರ್ಶನದ ಟ್ಯಾಗ್ ಕಳಚಲು ಎದುರು ನೋಡುತ್ತಿದ್ದಾರೆ ಎಂದು ಆರ್ಸಿಬಿ ಕೋಚ್ ಕ್ಯಾಟಿಚ್ ತಿಳಿಸಿದ್ದಾರೆ.
"ಅವರು (ಮ್ಯಾಕ್ಸ್ವೆಲ್) ತುಂಬಾ ಪ್ರಬುದ್ಧತೆ ತೋರುತ್ತಿದ್ದಾರೆ. ಅದರಲ್ಲೂ ಈ ದಿನದ(ಹೈದರಾಬಾದ್ ವಿರುದ್ಧ) ಪಂದ್ಯದಲ್ಲಿ ಅವರ ಆಟ ಅದ್ಭುತವಾಗಿತ್ತು. ಅವರ ಸುತ್ತಲಿನ ಬ್ಯಾಟ್ಸ್ಮನ್ಗಳು ವಿಕೆಟ್ ಕೈಚೆಲ್ಲುತ್ತಿದ್ದರೆ, ಇವರು ಮಾತ್ರ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥೈಸಿಕೊಂಡು ಆಟವನ್ನು ಮತ್ತಷ್ಟು ಆಳಕ್ಕೆ ಕೊಂಡೊಯ್ದರು. ಕೊನೆಯಲ್ಲಿ ತಂಡಕ್ಕೆ ಅಗತ್ಯವಿದ್ದ ತ್ವರಿತ ರನ್ಗಳನ್ನು ದೊರೆಕಿಸಿಕೊಟ್ಟಿರುವುದರ ಶ್ರೇಯ ಅವರ ಅಪಾರ ಅನುಭವಕ್ಕೆ ಸಲ್ಲುತ್ತದೆ" ಎಂದು ಕ್ಯಾಟಿಚ್ ಪಂದ್ಯದ ನಂತರ ಹೇಳಿದ್ದಾರೆ.