ಶಾರ್ಜಾ :ಗ್ಲೇನ್ ಮ್ಯಾಕ್ಸ್ವೆಲ್ ಅವರ ಅಬ್ಬರದ ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶಾರ್ಜಾದಂತಹ ಕಠಿಣ ಪಿಚ್ನಲ್ಲೂ 165 ರನ್ಗಳ ಸ್ಪರ್ಧಾತ್ಮಕ ಟಾರ್ಗೆಟ್ ನೀಡುವಲ್ಲಿ ಯಶಸ್ವಿಯಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್ಸಿಬಿಗೆ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಮೊದಲ ವಿಕೆಟ್ಗೆ 68 ರನ್ಗಳ ಜೊತೆಯಾಟ ನೀಡಿ ಭರ್ಜರಿ ಆರಂಭ ಒದಗಿಸಿಕೊಟ್ಟರು. 24 ಎಸೆತಗಳಲ್ಲಿ 2 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದಂತೆ 25 ರನ್ಗಳಿಸಿದರು.
ಇವರು ಆಸೀಸ್ ಆಲ್ರೌಂಡರ್ ಹೆನ್ರಿಕ್ಸ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ನಂತರದ ಎಸೆತದಲ್ಲಿ ಬಡ್ತಿ ಪಡೆದು ಬಂದ ಡೇನಿಯಲ್ ಕ್ರಿಶ್ಚಿಯನ್ ಅದೇ ಓವರ್ನಲ್ಲಿ ಗೋಲ್ಡನ್ ಡಕ್ಗೆ ಬಲಿಯಾದರು. 38 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸೇರಿ 40ರನ್ಗಳಿಸಿದ್ದ ಪಡಿಕ್ಕಲ್ ಕೂಡ ಹೆನ್ರಿಕ್ಸ್ಗೆ ವಿಕೆಟ್ ಒಪ್ಪಿಸಿದರು.