ಕರ್ನಾಟಕ

karnataka

ETV Bharat / sports

ಆ್ಯಡಂ ಮಿಲ್ನೆ ಬದಲಿಗೆ ಸಿಎಸ್​ಕೆ ಸೇರಿದ 'ಜೂನಿಯರ್ ಮಾಲಿಂಗ' - ಸಿಎಸ್​ಕೆ ಸೇರಿದ ಮತೀಶ ಪತಿರನ

ಮಿಲ್ನೆ ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಆಡುವ ವೇಳೆ ಹ್ಯಾಮ್​ಸ್ಟ್ರಿಂಗ್​ಗೆ ಒಳಗಾಗಿ ಟೂರ್ನಿಯಿಂದ ಹೊರಬಿದ್ದಿದ್ದರು. ಹಾಗಾಗಿ 2020 ಮತ್ತು 2022ರ ಅಂಡರ್​ 19 ವಿಶ್ವಕಪ್​​ನಲ್ಲಿ ಆಡಿದ್ದ ಶ್ರೀಲಂಕಾದ ಅಂಡರ್​ 19 ತಂಡದ ಪತಿರನ ಬದಲಿ ಆಟಗಾರನಾಗಿ ಮೂಲಬೆಲೆ 20 ಲಕ್ಷ ರೂ.ಗೆ ಸಿಎಸ್​ಕೆ ಬಳಗ ಸೇರಿಕೊಂಡಿದ್ದಾರೆ.

Matheesha Pathirana joins Chennai Super Kings
ಚೆನ್ನೈ ಸೂಪರ್ ಕಿಂಗ್ಸ್

By

Published : Apr 21, 2022, 3:21 PM IST

ಮುಂಬೈ:ಕಿವೀಸ್​ ವೇಗಿಯ​ ಬದಲಿಗೆ ಶ್ರೀಲಂಕಾದ ಯುವ ವೇಗಿ ಮತೀಶ ಪತಿರನ 2022ರ ಆವೃತ್ತಿಗೆ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಸೇರಿಕೊಂಡಿದ್ದಾರೆ. ಮಿಲ್ನೆ ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಆಡುವ ವೇಳೆ ಹ್ಯಾಮ್​ಸ್ಟ್ರಿಂಗ್​ಗೆ ಒಳಗಾಗಿ ಟೂರ್ನಿಯಿಂದ ಹೊರಬಿದ್ದಿದ್ದರು. ಹಾಗಾಗಿ 2020 ಮತ್ತು 2022ರ ಅಂಡರ್​ 19 ವಿಶ್ವಕಪ್​​ನಲ್ಲಿ ಆಡಿದ್ದ ಶ್ರೀಲಂಕಾದ ಅಂಡರ್​ 19 ತಂಡದ ಪತಿರನ ಬದಲಿ ಆಟಗಾರನಾಗಿ ಮೂಲಬೆಲೆ 20 ಲಕ್ಷ ರೂ.ಗೆ ಸಿಎಸ್​ಕೆ ಬಳಗ ಸೇರಿಕೊಂಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್​ ಮೆಗಾ ಹರಾಜಿನಲ್ಲಿ 14 ಕೋಟಿ ನೀಡಿ ಖರೀದಿಸಿದ್ದ ದೀಪಕ್ ಚಾಹರ್​ ಕೂಡ 2022ರ ಐಪಿಎಲ್​ನಿಂದ ಹೊರಬಿದ್ದಿದ್ದಾರೆ. ಆದರೆ ಇದುವರೆಗೆ ಅವರ ಬದಲಿಗೆ ಯಾವುದೇ ಬದಲಿ ಆಟಗಾರನನ್ನು ಸಿಎಸ್​ಕೆ ಘೋಷಣೆ ಮಾಡಿಲ್ಲ.

ಬದಲಿ ಆಟಗಾರರಾಗಿ ಫ್ರಾಂಚೈಸಿ ಸೇರಿಕೊಂಡ ಆಟಗಾರರಿವರು:

  • ಗುಜರಾತ್​ ಟೈಟನ್ಸ್​ -ಜೇಸನ್​ ರಾಯ್ ಬದಲಿಗೆ ಅಫ್ಘಾನಿಸ್ತಾನ ರಮಾನುಲ್ಲಾ ಗುರ್ಬಜ್ ಸೇರ್ಪಡೆ
  • ಕೋಲ್ಕತ್ತಾ ನೈಟ್​ ರೈಡರ್ಸ್​- ಇಂಗ್ಲೆಂಡ್​ ಅಲೆಕ್ಸ್ ಹೇಲ್ಸ್ ಬದಲಿಗೆ ಆಸ್ಟ್ರೇಲಿಯಾದ ಆ್ಯರೋನ್ ಫಿಂಚ್​
  • ಲಖನೌ ಸೂಪರ್ ಜೈಂಟ್ಸ್​- ಮಾರ್ಕ್​ವುಡ್​ ಬದಲಿಗೆ ಆಸ್ಟ್ರೇಲಿಯಾದ ಆ್ಯಂಡ್ರ್ಯೂ ಟೈ
  • ರಾಯಲ್ ಚಾಲೆಂಜರ್ಸ್ ಬೆಂಗಳೂರು- ಲುವನೀತ್ ಸಿಸೋಡಿಯಾ ಬದಲಿಗೆ ರಜತ್ ಪಾಟೀದಾರ್
  • ಚೆನ್ನೈ ಸೂಪರ್ ಕಿಂಗ್ಸ್-ಆ್ಯಡಂ ಮಿಲ್ನೆ ಬದಲಿಗೆ ಮತೀಶ ಪತಿರನ

ಇದನ್ನೂ ಓದಿ:ಅಂತರರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಆಲ್​ರೌಂಡರ್ ಕೀರನ್ ಪೊಲಾರ್ಡ್

ABOUT THE AUTHOR

...view details