ಮುಂಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧ ನಿರಾಶಾದಾಯಕ ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಇಂದು ನಡೆಯಲಿರುವ 2ನೇ ಪಂದ್ಯದಲ್ಲಿ, ಟೂರ್ನಿಯಲ್ಲಿ ತಲಾ ಒಂದು ಸೋಲು-ಗೆಲುವು ಕಂಡಿರುವ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಸೆಣಸಾಡಲಿದೆ.
ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲ ಪಂದ್ಯದಲ್ಲಿ ಅನುಭವಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೂಪರ್ ಬ್ಯಾಟಿಂಗ್ ಪ್ರದರ್ಶಿಸಿ 7 ವಿಕೆಟ್ಗಳ ಜಯ ಸಾಧಿಸಿ ಶುಭಾರಂಭ ಮಾಡಿತ್ತು. ಆದರೆ ತನ್ನ 2ನೇ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಗೆಲುವಿನ ಸನಿಹ ಬಂದು ಸೋಲೊಪ್ಪಿಕೊಂಡಿತ್ತು.
ಇತ್ತ ಮೊದಲ ಪಂದ್ಯದಲ್ಲಿ 221 ರನ್ಗಳ ಬೃಹತ್ ಮೊತ್ತ ಕಲೆ ಹಾಕಿ 4 ರನ್ಗಳ ರೋಚಕ ಜಯ ಸಾಧಿಸಿದ್ದ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತನ್ನ 2ನೇ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಕೇವಲ 106 ರನ್ಗಳಿಸಿತ್ತು. ಈ ಮೊತ್ತವನ್ನು ಧೋನಿ ಪಡೆ 4 ವಿಕೆಟ್ ಕಳೆದುಕೊಂಡು ಸುಲಭವಾಗಿ ಬೆನ್ನಟ್ಟಿತ್ತು.
ಉಭಯ ತಂಡಗಳ ಶಕ್ತಿ
ಪಂಜಾಬ್ಗೆ ರಾಹುಲ್, ಮಯಾಂಕ್, ಕ್ರಿಸ್ ಗೇಲ್, ಪೂರನ್, ಶಾರುಖ್ ಖಾನ್ ರಂತಹ ಸ್ಫೋಟಕ ಬ್ಯಾಟ್ಸ್ಮನ್ಗಳನ್ನೇ ನೆಚ್ಚಿಕೊಂಡಿದೆ.
ಡೆಲ್ಲಿಗೆ ಬ್ಯಾಟಿಂಗ್ಗಿಂತಲೂ ಬೌಲಿಂಗ್ ಪ್ರಮುಖ ಅಸ್ತ್ರವಾಗಿದೆ. ಇಂದಿನ ಪಂದ್ಯದಲ್ಲಿ ರಬಾಡ ಜೊತೆಗೆ ಕ್ವಾರಂಟೈನ್ ಮುಗಿಸಿರುವ ಎನ್ರಿಚ್ ನೋಕಿಯಾ ತಂಡ ಸೇರಿಕೊಂಡಿದ್ದಾರೆ. ಪಂತ್ ಬಳಗಕ್ಕೆ ಇದು ಆನೆ ಬಲ ತಂದುಕೊಟ್ಟಿದೆ.
ಪಂಜಾಬ್ ತಂಡ ಕೂಡ ಸತತ 2 ಪಂದ್ಯಗಳಲ್ಲಿ ಸೊನ್ನೆ ಸುತ್ತಿರುವ ನಿಕೋಲಸ್ ಪೂರನ್ ಬದಲಿಗೆ ನಂಬರ್ 1 ಟಿ20 ಬ್ಯಾಟ್ಸ್ಮನ್ ಡೇವಿಡ್ ಮಲನ್ ಅಥವಾ ಸ್ಟಾರ್ ಆಲ್ರೌಂಡರ್ ಹೆನ್ರಿಕ್ಸ್ರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ.
ಮುಖಾಮುಖಿ