ಅಡಿಲೇಡ್: ಡೇವಿಡ್ ವಾರ್ನರ್ ಮತ್ತು ಮಾರ್ನಸ್ ಲಾಬುಶೇನ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ಅಡಿಲೇಡ್ ಓವಲ್ನಲ್ಲಿ ನಡೆಯುತ್ತಿರುವ ಡೇ ಅಂಡ್ ನೈಟ್ ಆ್ಯಶಸ್ ಟೆಸ್ಟ್ನಲ್ಲಿ ಮೊದಲ ದಿನ 2 ವಿಕೆಟ್ ಕಳೆದುಕೊಂಡು 221 ರನ್ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಹಾರಿಸಿಕೊಂಡಿದ್ದ ಆಸ್ಟ್ರೇಲಿಯಾ ಕೇವಲ 4 ರನ್ಗಳಿಸುವಷ್ಟರಲ್ಲಿ ಆರಂಭಿಕ ಮಾರ್ಕಸ್ ಹ್ಯಾರಿಸ್(4) ವಿಕೆಟ್ ಕಳೆದುಕೊಂಡಿತು. ಮೊದಲ ಟೆಸ್ಟ್ನಲ್ಲಿ ವಿಶ್ರಾಂತಿ ಪಡೆದಿದ್ದ ಬ್ರಾಡ್ ಹ್ಯಾರಿಸ್ ವಿಕೆಟ್ ಪಡೆದರು.
ಆದರೆ, 2ನೇ ವಿಕೆಟ್ಗೆ ಒಂದಾದ ವಾರ್ನರ್ ಮತ್ತು ಮಾರ್ನಸ್ ಲಾಬುಶೇನ್ 176 ರನ್ಗಳ ಜೊತೆಯಾಟ ನೀಡಿ ಇಂಗ್ಲೆಂಡ್ ಬೌಲರ್ಗಳ ಬೆವರಿಳಿಸಿದರು. ವಾರ್ನರ್ 167 ಎಸೆತಗಳಲ್ಲಿ 11 ಬೌಂಡರಿ ಸಹಿತ 95 ರನ್ಗಳಿಸಿ ಶತಕದ ಹೊಸ್ತಿಲಲ್ಲಿದ್ದಾಗ ಬೆನ್ ಸ್ಟೋಕ್ ಬೌಲಿಂಗ್ನಲ್ಲಿ ಬ್ರಾಡ್ಗೆ ಕ್ಯಾಚ್ ನೀಡಿ ಔಟಾದರು. ವಾರ್ನರ್ ಮೊದಲ ಪಂದ್ಯದಲ್ಲೂ 94 ರನ್ಗಳಿಸಿ ಔಟಾಗಿದ್ದರು.