ಲಂಡನ್: ಇಂಗ್ಲೆಂಡ್ ತಂಡ ಕಳೆದೆರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನದ ಮೂಲಕ ಟೀಕೆಗೆ ಗುರಿಯಾಗಿದೆ. ಅದರಲ್ಲೂ ಲಾರ್ಡ್ಸ್ ಟೆಸ್ಟ್ ಸೋಲಿನ ಬಳಿಕ ಸ್ವತಃ ಇಂಗ್ಲೆಂಡ್ ಮಾಜಿ ಕ್ರಿಕೆಟಿಗರೇ ನಾಯಕ ಮತ್ತು ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಹರಿಹಾಯ್ದಿದ್ದಾರೆ. 3ನೇ ಟೆಸ್ಟ್ ಗೆದ್ದು ಟೀಕೆಗೆ ಉತ್ತರ ಕೊಡಬೇಕೆನ್ನುವಷ್ಟರಲ್ಲಿ ಪ್ರಮುಖ ಬೌಲರ್ ಮಾರ್ಕ್ವುಡ್ ಮೂರನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿರುವುದು ಮತ್ತೊಂದು ಆಘಾತ ತಂದಿದೆ.
ಮಾರ್ಕ್ವುಡ್ 2ನೇ ಟೆಸ್ಟ್ ವೇಳೆ ಒಟ್ಟು 5 ವಿಕೆಟ್ ಪಡೆದು ಮಿಂಚಿದ್ದರು. ಆದರೆ, ಬಲಭುಜದ ನೋವಿಗೆ ತುತ್ತಾಗಿದ್ದು, ಮೂರನೇ ಟೆಸ್ಟ್ನಿಂದ ಹೊರಬಿದ್ದಿದ್ದಾರೆ. ಲೀಡ್ಸ್ನಲ್ಲಿ ಮೂರನೇ ಟೆಸ್ಟ್ ನಡೆಯಲಿದ್ದು, ಮಾರ್ಕ್ವುಡ್ ತಂಡದ ಜೊತೆಯಲ್ಲಿಯೇ ಉಳಿಯಲಿದ್ದಾರೆ ಮತ್ತು ಪುನಶ್ಚೇತನಕ್ಕೆ ಒಳಗಾಗಲಿದ್ದಾರೆ.
2ನೇ ಟೆಸ್ಟ್ ಪಂದ್ಯದ 74 ಓವರ್ವೇಳೆ ರಿಷಭ್ ಪಂತ್ ಹೊಡೆದ ಚೆಂಡನ್ನು ತಡೆಯಲು ಡೈವ್ ಮಾಡಿದ ವೇಳೆ ನೋವು ಕಾಣಿಸಿಕೊಂಡಿತ್ತು. ಆದರೆ, ನಾಲ್ಕನೇ ದಿನ ಮೈದಾನದಿಂದ ಹೊರನಡೆದಿದ್ದರು. ಆದರೆ, ಕೊನೆಯ ದಿನ ಭಾರತೀಯ ಕೆಳಕ್ರಮಾಂಕದ ಬ್ಯಾಟ್ಸ್ಮನ್ಗಳಿಗೆ ಕೆಲವು ಓವರ್ ಎಸೆದಿದ್ದರು.