ನವದೆಹಲಿ:ಗಾಯದ ಕಾರಣ ಮೊದಲ ಮೂರು ಟೆಸ್ಟ್ಗಳನ್ನು ತಪ್ಪಿಸಿಕೊಂಡಿದ್ದ ಕ್ರಿಸ್ ವೋಕ್ಸ್ ಮತ್ತು ಕಳೆದ ಟೆಸ್ಟ್ನಿಂದ ಹೊರಗುಳಿದಿದ್ದ ಮಾರ್ಕ್ವುಡ್ ಓವಲ್ನಲ್ಲಿ ನಡೆಯಲಿರುವ ಭಾರತದ ವಿರುದ್ಧದ 4ನೇ ಟೆಸ್ಟ್ಗೆ ಇಂಗ್ಲೆಂಡ್ ತಂಡ ಸೇರಿಕೊಂಡಿದ್ದಾರೆ.
ಕ್ರಿಸ್ ವೋಕ್ಸ್ ಗಾಯದಿಂದ ಚೇತರಿಸಿಕೊಂಡಿದ್ದು ವಿಟಾಲಿಟಿ ಬ್ಲಾಸ್ಟ್ನಲ್ಲಿ ಶುಕ್ರವಾರ ಕಣಕ್ಕಿಳಿದಿದ್ದರು. ಇದೀಗ ಚೇತರಿಸಿಕೊಂಡಿರುವುದರಿಂದ ಸರಣಿಯ ಮುಂದಿನ ಪಂದ್ಯಗಳಲ್ಲಿ ತಂಡದ ಭಾಗವಾಗಲಿದ್ದಾರೆ.
ಇನ್ನು ಭುಜದ ನೋವಿನ ಕಾರಣ ಕಳೆದ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಮಾರ್ಕ್ ವುಡ್ ಕೂಡ ಚೇತಿರಿಸಕೊಂಡಿರುವುದರಿಂದ 4ನೇ ಟೆಸ್ಟ್ಗೆ ಇಸಿಬಿ ಘೋಷಿಸಿರುವ 15 ಸದಸ್ಯರ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ತಮ್ಮ ಪತ್ನಿ 2ನೇ ಮಗುವಿಗೆ ಜನ್ಮ ನೀಡುತ್ತಿರುವ ಕಾರಣ ಜೋಸ್ ಬಟ್ಲರ್ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಂದ ಹೊರ ಉಳಿದಿದ್ದು,ಜಾನಿ ಬೈರ್ಸ್ಟೋವ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಸ್ಯಾಮ್ ಬಿಲ್ಲಿಂಗ್ಸ್ ಹೆಚ್ಚುವರಿ ಕೀಪರ್ ಆಗಿ ತಂಡಕ್ಕೆ ಸೇರಿಕೊಂಡಿದ್ದಾರೆ.