ಕರ್ನಾಟಕ

karnataka

ETV Bharat / sports

ತಂಡದ ಆಟಗಾರರ ಜೊತೆ ಸೇರಿ ಕಪ್ಪು ವರ್ಣಿಯರನ್ನು ರೇಗಿಸಿದ್ದಕ್ಕೆ ಕ್ಷಮೆಯಾಚಿಸಿದ ಬೌಷರ್

ಪಾಲ್ ಆಡಮ್ಸ್ ಸೇರಿದಂತೆ ಅವರ ಕೆಲವು ಸಹ ಆಟಗಾರರು ಬೌಷರ್​ ಮೇಲೆ ವರ್ಣಭೇದ ನೀತಿಯ ಆರೋಪ ಹೊರಿಸಿದ್ದರು. ಇದಕ್ಕಾಗಿ ಸೋಮವಾರ ಬೌಷರ್ ತಮ್ಮ ತಪ್ಪಿಗೆ ಕ್ಷಮೆಯಾಚಿಸಿ ಸುಮಾರು 14 ಪುಟಗಳ ಅಫಿಡವಿಟ್ ಅನ್ನು ಕ್ರಿಕೆಟ್ ಸೌತ್​ ಆಫ್ರಿಕಾ ಸೋಸಿಯಲ್​ ಜಸ್ಟೀಸ್​ ಮತ್ತು ನ್ಯಾಷನಲ್​ ಬ್ಯುಲ್ಡಿಂಗ್​ (SJN) ಸಮಿತಿಗೆ ಸಲ್ಲಿಸಿದ್ದಾರೆ ಎಂದು ESPN cricinfo ವರದಿ ಮಾಡಿದೆ.

By

Published : Aug 23, 2021, 10:21 PM IST

Mark Boucher apologises for singing offensive songs
ಮಾರ್ಕ್​ ಬೌಷರ್​ ಕ್ಷಮೆ

ಜೋಹಾನ್ಸ್​ಬರ್ಗ್​:ತಾವೂ ಕ್ರಿಕೆಟ್ ಆಡುತ್ತಿದ್ದ ದಿನಗಳಲ್ಲಿ ಕೆಲವು ಕಪ್ಪು ಕ್ರಿಕೆಟಿಗರ ಅಡ್ಡ ಹೆಸರುಗಳಿಂದ ಗೇಲಿ ಮಾಡಿರುವುದಕ್ಕೆ ಮತ್ತು ಸಹ ಆಟಗಾರರೊಡನೆ ಸೇರಿ ನಿಂದಿಸುವ ಗೀತೆಯನ್ನು ಹಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಮತ್ತು ಪ್ರಸ್ತುತ ಮುಖ್ಯ ಕೋಚ್​ ಮಾರ್ಕ್​ ಬೌಷರ್ ಬೇಷರತ್​ ಕ್ಷಮೆಯಾಚಿಸಿದ್ದಾರೆ.

ಪಾಲ್ ಆಡಮ್ಸ್ ಸೇರಿದಂತೆ ಅವರ ಕೆಲವು ಸಹ ಆಟಗಾರರು ಕೆಲವು ವರ್ಷಗಳ ಹಿಂದೆ ಬೌಷರ್​ ತಮ್ಮನ್ನು ಜನಾಂಗೀಯಾವಾಗಿ ನಿಂದಿಸಿದ್ದರು ಎಂದು ದೂರಿದ್ದರು. ಇದಕ್ಕಾಗಿ ಸೋಮವಾರ ಬೌಷರ್ ತಮ್ಮ ತಪ್ಪಿಗೆ ಕ್ಷಮೆಯಾಚಿಸಿ ಸುಮಾರು 14 ಪುಟಗಳ ಅಫಿಡವಿಟ್ ಅನ್ನು ದಕ್ಷಿಣ ಆಫ್ರಿಕಾದ ಸಾಮಾಜಿಕ ನ್ಯಾಯ ಮತ್ತು ರಾಷ್ಟ್ರನಿರ್ಮಾಣ ಸಮಿತಿಗೆ (ಕ್ರಿಕೆಟ್ ಸೌತ್​ ಆಫ್ರಿಕಾ ಸೋಸಿಯಲ್​ ಜಸ್ಟೀಸ್​ ಮತ್ತು ನ್ಯಾಷನಲ್​ ಬ್ಯುಲ್ಡಿಂಗ್​ (SJN) )ಸಮಿತಿಗೆ ಸಲ್ಲಿಸಿದ್ದಾರೆ ಎಂದು ಇಎಸ್​ಪಿಎನ್ ಕ್ರಿಕ್​ಇನ್ಫೋ ವೆಬ್​ಸೈಟ್​ ವರದಿ ಮಾಡಿದೆ.

ಮಾರ್ಕ್​ ಬೌಷರ್​ ಮತ್ತು ಕೆಲವು ಸಹ ಆಟಗಾರರು ತಮ್ಮ ಮೇಲೆ ಹಾಡಿನ ಮೂಲಕ ಜನಾಂಗೀಯವಾಗಿ ನಿಂದಿಸಿದ್ದರು ಎಂದು ಆ್ಯಡಮ್ಸ್ SJN ನಲ್ಲಿ ದೂರು ದಾಖಲಿಸಿದ್ದರು. ಆದರೆ, ಬೌಷರ್​ ತಾವೂ ಆ್ಯಡಮ್ಸ್​ಗೆ ಯಾವುದೇ ಅಡ್ಡ ಹೆಸರನ್ನು ಇಟ್ಟಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ " ನನ್ನ ಮೇಲೆ ಬಂದಿರುವ ಆರೋಪಕ್ಕೆ ಯಾವುದೇ ರಾಜಿಯಿಲ್ಲದೇ ಕ್ಷಮೆಯಾಚಿಸುತ್ತೇನೆ" ಎಂದು ಬೌಷರ್​ ತಮ್ಮ ಅಫಿಡವಿಟ್​ನಲ್ಲಿ ಹೇಳಿದ್ದಾರೆ.

" ಯುವಕನಾಗಿದ್ದಾಗ ನನ್ನ ಸಹ ಆಟಗಾರರಲ್ಲಿ ಕೆಲವರನ್ನು ನೋಯಿಸಿರುವುದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಜೊತೆಗೆ ನನ್ನ ತಂಡದ ಸದಸ್ಯರೊಂದಿಗೆ ಕೆಲವು ಆಟಗಾರರನ್ನು ರೇಗಿಸುವ ಹಾಡುಗಳನ್ನು ಹಾಡುವಾಗ ಕೆಲವರ ಅಡ್ಡಹೆಸರುಗಳನ್ನು ಬಳಸಿರುವುದಕ್ಕೆ ನಾನು ತೀವ್ರವಾಗಿ ವಿಷಾದಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ" ಎಂದು ಬೌಷರ್​ ತಿಳಿಸಿದ್ದಾರೆ

ಇದನ್ನು ಓದಿ:ಜನರು ನನ್ನ ಬಗ್ಗೆ ಮಾತನಾಡುತ್ತಿರುವುದಕ್ಕೆ ಖುಷಿಯಿದೆ, ಟೀಕೆಗೆ Don't Care: ರಹಾನೆ

ABOUT THE AUTHOR

...view details