ETV Bharat Karnataka

ಕರ್ನಾಟಕ

karnataka

ETV Bharat / sports

ವೃತ್ತಿ ಜೀವನದ ಅಂತ್ಯದವರೆಗೆ ಧೋನಿಗೆ ಸಿಕ್ಕಂತಹ ಬೆಂಬಲ ನಮಗ್ಯಾರಿಗೂ ಸಿಗಲಿಲ್ಲ: ಯುವರಾಜ್ ಸಿಂಗ್ - MS Dhoni get support from management

ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್​, ಗೌತಮ್ ಗಂಭೀರ್​ ಅಂತಹ ಶ್ರೇಷ್ಠ ಆಟಗಾರಿಗೆ ಬೆಂಬಲ ಸಿಗಲಿಲ್ಲ. ನೀವು ಅಂತಹ ಸ್ಥಿತಿಯಲ್ಲಿ ಬ್ಯಾಟಿಂಗ್ ಮಾಡಲು ಹೊರಟರೆ, ನಿಮ್ಮ ತಲೆಯ ಸುತ್ತ ಕತ್ತಿ ತಿರುಗುತ್ತಿದ್ದ ಹಾಗೆ ನೀವು ಹೇಗೆ ಪಂದ್ಯದ ಕಡೆಗೆ ಗಮನ ನೀಡಿ ಉತ್ತಮ ಪ್ರದರ್ಶನ ತೋರುತ್ತೀರಿ, ಇದೇನೂ ಸಮರ್ಥನೆಯಲ್ಲ, 2011ರ ವಿಶ್ವಕಪ್​ ನಂತರ ಬಂದಂತಹ ಕೋಚ್​ಗಳಲ್ಲಿ ತುಂಬಾ ವಿಭಿನ್ನವಾಗಿದ್ದರು ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

Yuvraj Singh on Dhoni
ಯುವರಾಜ್ ಸಿಂಗ್ ಧೋನಿ
author img

By

Published : May 2, 2022, 3:45 PM IST

ಮುಂಬೈ: ಭಾರತ ತಂಡದ ಮಾಜಿ ನಾಯಕ ಎಂಎಸ್​ ಧೋನಿ ಅವರ ವೃತ್ತಿ ಜೀವನದ ಅಂತ್ಯದಲ್ಲಿ ಮ್ಯಾನೇಜ್​ಮೆಂಟ್​ ಕಡೆಯಿಂದ ಸಾಕಷ್ಟು ಬೆಂಬಲ ಪಡೆದರು. ಆದರೆ, ತಮಗೆ 2014ರ ಟಿ-20 ವಿಶ್ವಕಪ್​ ಟೂರ್ನಿಯಲ್ಲಿ ಬೆಂಬಲವಿಲ್ಲದೆ, ಸಾಕಷ್ಟು ಒತ್ತಡ ಎದುರಿಸಿದ್ದೆ ಎಂದು 8 ವರ್ಷಗಳ ಹಿಂದಿನ ಘಟನೆ ಬಗ್ಗೆ ಯುವರಾಜ್ ಸಿಂಗ್ ಹೇಳಿದ್ದಾರೆ.

ಭಾರತ ಗೆದ್ದಿರುವ 2 ವಿಶ್ವಕಪ್​​ಗಳಲ್ಲಿ ಯುವರಾಜ್ ಸಿಂಗ್ ಪಾತ್ರ ಮಹತ್ವದ್ದಾಗಿತ್ತು. ಶ್ರೀಲಂಕಾ ವಿರುದ್ಧದ ಟಿ-20 ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅವರ ನಿಧಾನಗತಿಯ ಆಟ ಭಾರತದ ಮತ್ತೊಂದು ಟಿ-20 ವಿಶ್ವಕಪ್​ ಆಸೆಗೆ ತಣ್ಣೀರೆರಚಿತ್ತು. ಆದರೆ. ಆ ಆಟವಾಡಿದ 8 ವರ್ಷಗಳ ಬಳಿಕ ಯುವಿ ಆ ಟೂರ್ನಮೆಂಟ್​ ವೇಳೆ ಮ್ಯಾನೇಜ್​ಮೆಂಟ್​ನಿಂದ ತಮಗೆ ಸೂಕ್ತ ಬೆಂಬಲ ದೊರೆಯದೇ ತುಂಬಾ ಒತ್ತಡಕ್ಕೆ ಸಿಲುಕಿದ್ದೆ ಎಂದು ಹೇಳಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2014 ರ ಟಿ-20 ವಿಶ್ವಕಪ್​​ ವೇಳೆ, ನನ್ನ ಆತ್ಮವಿಶ್ವಾಸ ಕಡಿಮೆಯಾಗಿತ್ತ. ಅಲ್ಲಿ ನನ್ನನ್ನು ತಂಡದಿಂದ ಕೈಬಿಡಬಹುದು ಎಂಬ ವಾತಾವರಣವಿತ್ತು. ಇದು ಕ್ಷಮೆಯಲ್ಲ, ಆದರೆ ತಂಡದಿಂದ ನನಗೆ ಸಾಕಷ್ಟು ಬೆಂಬಲ ಸಿಗುತ್ತಿರಲಿಲ್ಲ. ಗ್ಯಾರಿ(ಕಸ್ಟರ್ನ್​) ಮತ್ತು ಡಂಕನ್ ಕಾಲದಲ್ಲಿ ನಾನು ಆಡಿದ್ದೆ, ಈ ಎರಡು ಸಮಯದಲ್ಲಿ ತಂಡದಲ್ಲಿ ವಿಷಯಗಳು ಸಂಪೂರ್ಣವಾಗಿ ಬದಲಾಗಿದ್ದವು ಎಂದು ಯುವಿ ಹೇಳಿದ್ದಾರೆ.

ಫೈನಲ್​ನಲ್ಲಿ 21 ಎಸೆತಗಳಿಗೆ 11 ರನ್​ ಸಿಡಿಸಿದ ಇನ್ನಿಂಗ್ಸ್​ ಬಗ್ಗೆ ಮಾತನಾಡಿದ ಆಲ್​ರೌಂಡರ್​, ಫೈನಲ್ ಪಂದ್ಯದಲ್ಲಿ ನಾನು ಚೆಂಡನ್ನು ಸರಿಯಾಗಿ ಹೊಡೆಯಲು ಸಾಧ್ಯವಾಗಲಿಲ್ಲ. ಆಫ್​ ಸ್ಪಿನ್ನರ್​ಗೆ ಹೊಡೆಯಲು ಯತ್ನಿಸಿದೆ, ಆದರೆ ವಿಫಲನಾದೆ ಮತ್ತು ಆ ಎಸೆತಗಳು ಡಾಟ್ ಬಾಲ್​ಗಳಾದವು. ನಾನು ಔಟಾಗಬೇಕೆಂದು ಬಯಸಿದೆ, ಆದರೆ ಔಟ್ ಕೂಡ ಆಗಲಿಲ್ಲ. ಆ ಇನ್ನಿಂಗ್ಸ್​ ನಂತರ ಎಲ್ಲರೂ ನನ್ನ ಕೆರಿಯರ್ ಮುಗಿಯಿತು ಎಂದು ಭಾವಿಸಿದರು. ನಾನೂ ಕೂಡ ನನ್ನ ಕೆರಿಯರ್ ಇಲ್ಲಿಗೆ ಮುಗಿಯಿತು ಎಂದು ಭಾವಿಸಿದ್ದೆ. ಆದರೆ, ಅದು ಜೀವನ, ನೀವು ಅದನ್ನು ಸ್ವೀಕರಿಸಬೇಕು. ನೀವು ವಿಜಯಗಳನ್ನು ಸ್ವೀಕರಿಸಿದ ಮೇಲೆ,ಸೋಲುಗಳನ್ನು ಕೂಡ ಸ್ವೀಕರಿಸಬೇಕು ಮತ್ತು ಮುಂದುವರಿಯಬೇಕು ಎಂದು ತಿಳಿಸಿದರು.

ಧೋನಿಗೆ ಸಿಕ್ಕ ಬೆಂಬಲ ಸಿಗಲಿಲ್ಲ:ನೀವು ಮಹಿ(ಎಂಎಸ್ ಧೋನಿ) ಅವರ ವೃತ್ತಿ ಜೀವನದ ಅಂತ್ಯವನ್ನು ನೋಡಿ. ಅವರಿಗೆ ನಾಯಕ ವಿರಾಟ್ ಮತ್ತು ಕೋಚ್​ ರವಿಶಾಸ್ತ್ರಿ ಅವರಿಂದ ಉತ್ತಮ ಬೆಂಬಲ ಸಿಕ್ಕಿತು. ಅವರು ಆತನನ್ನು ವಿಶ್ವಕಪ್​ಗೆ ಆಯ್ಕೆ ಮಾಡಿದರು, ಅವರು ಕೊನೆಯವರೆಗೂ ಆಡಿದರು ಮತ್ತು 350 ಏಕದಿನ ಪಂದ್ಯಗಳನಾಡಿದರು. ಆಟಗಾರರಿಗೆ ಅಂತಹ ಬೆಂಬಲ ತುಂಬಾ ಮುಖ್ಯ, ಆದರೆ ಭಾರತ ಕ್ರಿಕೆಟ್​​ನಲ್ಲಿ ಪ್ರತಿಯೊಬ್ಬರಿಗೂ ಅಂತಹ ಬೆಂಬಲ ಸಿಗುವುದಿಲ್ಲ.

ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್​, ಗೌತಮ್ ಗಂಭೀರ್​ ಅಂತಹ ಶ್ರೇಷ್ಠ ಆಟಗಾರರಿಗೆ ಅಂತಹ ಬೆಂಬಲ ಸಿಗಲಿಲ್ಲ. ನೀವು ಅಂತಹ ಸ್ಥಿತಿಯಲ್ಲಿ ಬ್ಯಾಟಿಂಗ್ ಮಾಡಲು ಹೊರಟರೆ, ನಿಮ್ಮ ತಲೆಯ ಸುತ್ತ ಕತ್ತಿ ತಿರುಗುತ್ತಿದ್ದಾಗೆ ನೀವು ಹೇಗೆ ಪಂದ್ಯದ ಕಡೆಗೆ ಗಮನ ನೀಡಿ ಉತ್ತಮ ಪ್ರದರ್ಶನ ತೋರುತ್ತೀರಿ, ಇದೇನೂ ಸಮರ್ಥನೆಯಲ್ಲ, 2011ರ ವಿಶ್ವಕಪ್​ ನಂತರ ಬಂದಂತಹ ಕೋಚ್​ಗಳಲ್ಲಿ ತುಂಬಾ ವಿಭಿನ್ನವಾಗಿದ್ದರು ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ:ನಾಯಕತ್ವದ ಒತ್ತಡ ಜಡೇಜಾ ಆಟದ ಮೇಲೆ ಪರಿಣಾಮ ಬೀರುತ್ತಿದೆ: ಧೋನಿ

ABOUT THE AUTHOR

...view details