ಕರ್ನಾಟಕ

karnataka

ETV Bharat / sports

ಚೇತರಿಸಿಕೊಂಡ ಸ್ಮೃತಿ ಮಂಧಾನ: ವಿಶ್ವಕಪ್​ ಆಡಲು ಸಿದ್ಧರಾದ ಇಂಡಿಯನ್​ ಓಪನರ್ - ಸ್ಮೃತಿ ಮಂಧಾನ ಗಾಯ

ಮಂಧಾನ ಭಾರತ ಬ್ಯಾಟಿಂಗ್​ನ ಬಲವಾಗಿದ್ದು, ಅವರ ಗಾಯ ನಿಜಕ್ಕೂ ಎಲ್ಲರಿಗೂ ತಲ್ಲಣ ತಂದಿತ್ತು. ಇದೀಗ ಅವರ ಚೇತರಿಕೆಯ ಸುದ್ದಿ ಭಾರತೀಯ ಕ್ರಿಕೆಟ್​ ಅಭಿಮಾನಿಗಳಿಗೆ ಖುಷಿ ನೀಡಿದೆ. ಸ್ಮೃತಿ ಶೀಘ್ರದಲ್ಲೇ ಮೈದಾನಕ್ಕಿಳಿದು ಬ್ಯಾಟಿಂಗ್ ಅಭ್ಯಾಸ ಮಾಡಲಿದ್ದಾರೆ. ಮತ್ತು ವಿಶ್ವಕಪ್​ ಆರಂಭಿಕ ಪಂದ್ಯದಿಂದಲೇ ತಂಡಕ್ಕೆ ಲಭ್ಯರಾಗಲಿದ್ದಾರೆ ಎಂದು ತಿಳಿದು ಬಂದಿದೆ.

Mandhana  stable after being hit on head
ಸ್ಮೃತಿ ಮಂಧಾನ ಚೇತರಿಕೆ

By

Published : Feb 28, 2022, 8:44 PM IST

ನವದೆಹಲಿ: ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧದ ಅಭ್ಯಾಸ ಪಂದ್ಯದ ವೇಳೆ ಚೆಂಡು ತಲೆಗೆ ಬಡಿದು ಗಾಯಗೊಂಡಿದ್ದ ಭಾರತ ಮಹಿಳಾ ತಂಡದ ಆರಂಭಿಕ ಬ್ಯಾಟರ್​ ಸ್ಮೃತಿ ಮಂಧಾನ ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮಂಧಾನ ಭಾರತ ಬ್ಯಾಟಿಂಗ್​ನ ಬಲವಾಗಿದ್ದು, ಅವರ ಗಾಯ ನಿಜಕ್ಕೂ ಎಲ್ಲರಿಗೂ ತಲ್ಲಣ ತಂದಿತ್ತು. ಇದೀಗ ಅವರ ಚೇತರಿಕೆಯ ಸುದ್ದಿ ಭಾರತೀಯ ಕ್ರಿಕೆಟ್​ ಅಭಿಮಾನಿಗಳಿಗೆ ಖುಷಿ ನೀಡಿದೆ. ಸ್ಮೃತಿ ಶೀಘ್ರದಲ್ಲೇ ಮೈದಾನಕ್ಕಿಳಿದು ಬ್ಯಾಟಿಂಗ್ ಅಭ್ಯಾಸ ಮಾಡಲಿದ್ದಾರೆ. ಮತ್ತು ವಿಶ್ವಕಪ್​ ಆರಂಭಿಕ ಪಂದ್ಯದಿಂದಲೇ ತಂಡಕ್ಕೆ ಲಭ್ಯರಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಅಭ್ಯಾಸ ಪಂದ್ಯದ ವೇಳೆ ದಕ್ಷಿಣ ಆಫ್ರಿಕಾ ವೇಗಿ ಇಸ್ಮಾಯಿಲ್​ ಎಸೆದ ಬೌನ್ಸರ್​ ಅನ್ನು ಮಂಧಾನ ಫುಲ್​ಶಾಟ್​ ಆಡುವ ಪ್ರಯತ್ನದಲ್ಲಿ ವಿಫಲರಾದರು. ಚೆಂಡು ಬಲವಾಗಿ ಹೆಲ್ಮೆಟ್​ಗೆ ಬಡಿದಿತ್ತು. ತಕ್ಷಣ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿಲಾಗಿತ್ತು. ಆದರೆ, ತಲೆಗೆ ಗಾಯವಾಗಿದ್ದರಿಂದ ಅವರು ವಿಶ್ವಕಪ್​ನಿಂದ ಹೊರಬೀಳಬಹುದೆಂದು ಕ್ರಿಕೆಟ್​ ವಲಯದಲ್ಲಿ ಅನುಮಾನ ವ್ಯಕ್ತವಾಗಿತ್ತು. ಆದರೆ, ಈ ಗೊಂದಲದ ವೇಳೆ ಬಿಸಿಸಿಐ ಮಂಧಾನ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಗುಡ್​ ನ್ಯೂಸ್​ ನೀಡಿದೆ.

ಮಹಿಳಾ ಏಕದಿನ ವಿಶ್ವಕಪ್​ ಮಾರ್ಚ್​ 4ರಿಂದ ಆರಂಭವಾಗಲಿದೆ. ನ್ಯೂಜಿಲ್ಯಾಂಡ್​ನಲ್ಲಿ ಈ ಟೂರ್ನಿ ನಡೆಯುತ್ತಿದ್ದು, ಮೊದಲ ಪಂದ್ಯದಲ್ಲಿ ಆತಿಥೇಯ ತಂಡ ವೆಸ್ಟ್​ ಇಂಡೀಸ್​ ವಿರುದ್ಧ ಕಾದಾಡಲಿದೆ. ಭಾರತ ತಂಡ ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಮಾರ್ಚ್​ 6ರಂದು ಕಣಕ್ಕಿಳಿಯುವ ಮೂಲಕ ವಿಶ್ವಕಪ್​ ಅಭಿಯಾನ ಆರಂಭಿಸಲಿದೆ.

ಇದನ್ನೂ ಓದಿ:3ನೇ ಕ್ರಮಾಂಕ ನನಗೆ ಉತ್ತಮವಾಗಿ ಹೊಂದುತ್ತದೆ: ಕೊಹ್ಲಿ ಸ್ಥಾನದ ಮೇಲೆ ಕಣ್ಣಿಟ್ಟ ಅಯ್ಯರ್!

ABOUT THE AUTHOR

...view details