ದುಬೈ: ಭಾರತ ತಂಡದ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ '2021 ವರ್ಷದ ಮಹಿಳಾ ಟಿ20 ಆಟಗಾರ್ತಿ' ಪ್ರಶಸ್ತಿಗೆ ಇತರೆ ಮೂವರು ಆಟಗಾರ್ತಿಯರೊಂದಿಗೆ ನಾಮನಿರ್ದೇಶನಗೊಂಡಿದ್ದಾರೆ.
2021ರಲ್ಲಿ ಸ್ಮೃತಿ ಮಂಧಾನ 9 ಟಿ20 ಪಂದ್ಯಗಳಿಂದ 31.87ರ ಸರಾಸರಿಯಲ್ಲಿ 2 ಅರ್ಧಶತಕ ಸೇರಿದಂತೆ 255 ರನ್ಗಳಿಸಿದ್ದಾರೆ.
ಸ್ಮತಿ ಮಂಧಾನ ಅವರ ಜೊತೆಗೆ ಇಂಗ್ಲೆಂಡ್ ಆಲ್ರೌಂಡರ್ ನ್ಯಾಟ್ ಸೀವರ್ ಮತ್ತು ಆರಂಭಿಕ ಬ್ಯಾಟರ್ ಟಾಮಿ ಬ್ಯೂಮಂಟ್ ಹಾಗೂ ಐರ್ಲೆಂಡ್ನ ಗೇಬಿ ಲೂಯಿಸ್ ಈ ಪ್ರಶಸ್ತಿಗೆ ಪೈಪೋಟಿಯಲ್ಲಿದ್ದಾರೆ.
ಮಂಧಾನ ಹೊರತಪಡಿಸಿದರೆ ಐಸಿಸಿ ಏಕದಿನ ಮತ್ತು ಟಿ20 ವರ್ಷದ ಕ್ರಿಕೆಟರ್ ಪ್ರಶಸ್ತಿಗೆ ಪುರುಷ ಅಥವಾ ಮಹಿಳಾ ತಂಡದಿಂದ ಯಾವುದೇ ಕ್ರಿಕೆಟರ್ ನಾಮನಿರ್ದೇಶನಗೊಂಡಿಲ್ಲ. ರವಿಚಂದ್ರನ್ ಅಶ್ವಿನ್ ಮಾತ್ರ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿಗೆ ಜೋ ರೂಟ್, ಕೈಲ್ ಜೇಮಿಸನ್ ಮತ್ತು ಕರುಣರತ್ನೆ ಜೊತೆಗೆ ನಾಮನಿರ್ದೇಶನಗೊಂಡಿದ್ದಾರೆ.
2021ರ ವರ್ಷದಲ್ಲಿ ಆಟಗಾರರು ನೀಡಿರುವ ಪ್ರದರ್ಶನದ ಆಧಾರದ ಮೇಲೆ ಈ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಇದನ್ನೂ ಓದಿ:'ಐಸಿಸಿ ವರ್ಷದ ಟಿ20 ಕ್ರಿಕೆಟಿಗ' ಪ್ರಶಸ್ತಿ ರೇಸ್ನಲ್ಲಿ ಇಬ್ಬರು ವಿಕೆಟ್ ಕೀಪರ್, ಇಬ್ಬರು ಆಲ್ರೌಂಡರ್!