ಕರ್ನಾಟಕ

karnataka

ETV Bharat / sports

ಮಿಥಾಲಿ ಉತ್ತರಾಧಿಕಾರಿ ಸ್ಥಾನಕ್ಕೆ ಸ್ಮೃತಿ ಮಂಧಾನ ಅತ್ಯುತ್ತಮ ಆಯ್ಕೆ: ಡಬ್ಲ್ಯೂವಿ ರಾಮನ್

ಸ್ಮೃತಿ ಮಂಧಾನ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದಾಗಿನಿಂದಲೂ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಈಗಾಗಲೇ ತಂಡದ ಉಪನಾಯಕಿಯಾಗಿರುವ ಅವರನ್ನು ಟಿ-20 ವಿಶ್ವಕಪ್​ ಬಳಿಕ ಫಲಿತಾಂಶ ಏನೇ ಆದರೂ ಲೆಕ್ಕಿಸದೇ ನಾಯಕಿಯನ್ನಾಗಿ ನೇಮಿಸಬೇಕು ಎಂದು ಸೋನಿ ಸ್ಪೋರ್ಟ್ಸ್​ ಆಯೋಜಿಸದ್ದ ಸಂವಾದದಲ್ಲಿ ರಾಮನ್ ಹೇಳಿದ್ದಾರೆ.

Mandhana is good candidate for India captaincy
ಸ್ಮೃತಿ ಮಂದಾನ - ಡಬ್ಲ್ಯೂವಿ ರಾಮನ್

By

Published : Oct 5, 2021, 10:03 PM IST

ನವದೆಹಲಿ: ಮುಂಬರುವ ಏಕದಿನ ವಿಶ್ವಕಪ್​ ನಂತರ ಫಲಿತಾಂಶ ಏನೇ ಆದರೂ ಭಾರತ ಮಹಿಳಾ ಏಕದಿನ ತಂಡದ ನಾಯಕತ್ವವನ್ನು ಬದಲಿಸಬೇಕು ಎಂದಿರುವ ಮಾಜಿ ಮಹಿಳಾ ತಂಡದ ಕೋಚ್ ಡಬ್ಲ್ಯೂವಿ ರಾಮನ್​ ಸ್ಟಾರ್ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಆ ಸ್ಥಾನಕ್ಕೆ ಸೂಕ್ತವಾದ ಅಭ್ಯರ್ಥಿ ಎಂದು ಹೇಳಿದ್ದಾರೆ.

ಸ್ಮೃತಿ ಮಂಧಾನ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದಾಗಿನಿಂದಲೂ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಈಗಾಗಲೇ ತಂಡದ ಉಪನಾಯಕಿಯಾಗಿರುವ ಅವರನ್ನು ಟಿ-20 ವಿಶ್ವಕಪ್​ ಬಳಿಕ ಫಲಿತಾಂಶ ಏನೇ ಆದರೂ ಲೆಕ್ಕಿಸದೇ ನಾಯಕಿಯನ್ನಾಗಿ ನೇಮಿಸಬೇಕೆಂದು ಸೋನಿ ಸ್ಪೋರ್ಟ್ಸ್​ ಆಯೋಜಿಸಿದ್ದ ಸಂವಾದದಲ್ಲಿ ರಾಮನ್ ಹೇಳಿದ್ದಾರೆ.

"ನಾಯಕತ್ವಕ್ಕೂ ವಯಸ್ಸಿಗೂ ಯಾವುದೇ ಸಂಬಂಧವಿಲ್ಲ. ಮಂದಾನ ಅವರಿಗೆ ನಾಯಕಿಯಾಗಿ ಕಾರ್ಯನಿರ್ವಹಿಸುವ ಎಲ್ಲ ಗುಣಗಳೂ ಇವೆ ಎಂದು ನಾನು ಭಾವಿಸುತ್ತೇನೆ. ಅವರು ಉತ್ತಮ ಬ್ಯಾಟರ್‌ ಜೊತೆಗೆ ಪಂದ್ಯದ ಸೂಕ್ಷ್ಮವಾಗಿ ಅವಲೋಕಿಸಬಲ್ಲ ಚಾಣಾಕ್ಷತೆಯನ್ನು ಹೊಂದಿದ್ದಾರೆ. ಯುವ ಕ್ರಿಕೆಟಿಗರಿಗೆ ನಾಯಕ್ವವನ್ನು ವಹಿಸುವುದ ಉತ್ತಮ. ಏಕೆಂದರೆ ಅವರು ಕೆಲವು ವರ್ಷಗಳ ಕಾಲ ತಂಡವನ್ನು ಮುನ್ನಡೆಸಬಲ್ಲರು" ಎಂದು ರಾಮನ್ ಹೇಳಿದ್ದಾರೆ.

ಪ್ರಸ್ತುತ ನಾಯಕತ್ವ ಬದಲಾವಣೆ ಮಾಡುವುದಕ್ಕೆ ಸರಿಯಾದ ಸಮಯವಲ್ಲ. ಏಕೆಂದರೆ ಶೀಘ್ರದಲ್ಲೇ ವಿಶ್ವಕಪ್​ ನಡೆಯಲಿದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಏನಾಗುತ್ತದೆಯೋ ಅದನ್ನು ಗಮನದಲ್ಲಿಟ್ಟುಕೊಂಡು ವಿಶ್ವಕಪ್​ ನಂತರ ಫಲಿತಾಂಶ ಏನೇ ಆದರೂ ಲೆಕ್ಕಿಸದೇ ನಾಯಕತ್ವವನ್ನು ಸ್ಮೃತಿ ಮಂದಾನಗೆ ವಹಿಸಬಹುದೆಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಪ್ರಸ್ತುತ ಏಕದಿನ ಮತ್ತು ಟಿ20 ತಂಡಕ್ಕೆ 38 ವರ್ಷದ ಮಿಥಾಲಿ ರಾಜ್ ನಾಯಕಿಯಾಗಿದ್ದರೆ, ಟಿ20 ತಂಡಕ್ಕೆ ಹರ್ಮನ್ ಪ್ರೀತ್ ಕೌರ್​ ನಾಯಕಿಯಾಗಿದ್ದಾರೆ.

ಇದನ್ನು ಓದಿ:ಪಂಜಾಬ್ ಕಿಂಗ್ಸ್ ತಂಡಕ್ಕೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಇನ್ನೂ ಇದೆ!

ABOUT THE AUTHOR

...view details